More

    ರೈತರಿಂದ ಕೆವಿಜಿ ಬ್ಯಾಂಕ್‌ಗೆ ಮುತ್ತಿಗೆ

    ಕೆರೂರ: ಹಿಂದಿನ ವ್ಯವಸ್ಥಾಪಕನ ವಂಚನೆಯಿಂದಾಗಿ ಹಣ ಕಳೆದುಕೊಂಡ ರೈತರಿಗೆ ಮೇ 15 ರಿಂದ 30 ರ ಒಳಗೆ ಹಣ ಮರುಪಾವತಿ ಮಾಡುತ್ತೇವೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಬಾಗಲಕೋಟೆ ಹಿರಿಯ ವ್ಯವಸ್ಥಾಪಕ ಹರ್ಷವರ್ಧನ ಹೇಳಿದರು.

    ಕೆವಿಜಿ ಬ್ಯಾಂಕ್ ಸ್ಥಳೀಯ ಶಾಖೆಗೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ಧಾರವಾಡದ ಮುಖ್ಯ ಕಚೇರಿಯಲ್ಲಿ 117 ಜನರ ಪಟ್ಟಿ ರೆಡಿ ಇದೆ. ಪಟ್ಟಿಯಲ್ಲಿ 153 ಜನರ ಹೆಸರು ಸೇರ್ಪಡೆಯಾಗಬೇಕು ಎಂದು ಹೇಳಿದರು.

    ಹಣ ಬಿಡುಗಡೆ ಮಾಡುತ್ತೇವೆ ಎಂದು ಲಿಖಿತ ಪತ್ರ ನೀಡುವಂತೆ ಒತ್ತಾಯಿಸಿ ರೈತರು ಬ್ಯಾಂಕಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಒಟ್ಟು 272 ಜನರಲ್ಲಿ 117 ಜನರ 3,97,50,000 ರೂ. ಹಾಗೂ ಬಿಟ್ಟು ಹೋಗಿರುವ 153 ಜನರ ಹಣ ಜಮಾ ಮಾಡಬೇಕು ಎಂದು ರೈತ ಸಂಘದ ಮುಖಂಡ ಗೋವಿಂದಪ್ಪ ಬೆಳಗಂಟಿ ಆಗ್ರಹಿಸಿದರು.

    ಹಿಂದಿನ ವ್ಯವಸ್ಥಾಪಕ ಯಲ್ಲಪ್ಪ ಸುರಗೊಪ್ಪ 272 ಜನರ ಹಣ ಲಪಟಾಯಿಸಿ ಪರಾರಿಯಾಗಿದ್ದು, ಆತನಿಂದ ಹಣ ವಸೂಲಿ ಮಾಡಿ ರೈತರಿಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

    ಯಮನೂರ ಬನ್ನಿದಿನ್ನಿ, ಸುರೇಶ ಪೂಜಾರ, ರಾಜೇಸಾಬ ರಾಘಾಪೂರ, ಯಮನೂರ ಚುಂಗಿನ, ಹುಸೇನಸಾಬ ಮಾಲದಾರ, ರಂಗಪ್ಪ ಹಣಮರ, ಮಂಜುನಾಥ ಮಾದರ, ಭರಮಪ್ಪ ಉದಗಟ್ಟಿ, ರಾಜೇಂದ್ರ ಜಯರಾಮ, ಪರಶುರಾಮ ಹರಣಶಿಕಾರಿ, ರಾಜು ರೋಣದ ಇದ್ದರು. ಪಿಎಸ್‌ಐ ಆನಂದ ಆದಿಗೊಂಡ ಬ್ಯಾಂಕ್ ವ್ಯವಸ್ಥಾಪಕರು, ರೈತರಿಗೆ ಮಾಹಿತಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

    ಕೆವಿಜಿ ಬ್ಯಾಂಕ್ ಕೆರೂರ ಶಾಖೆ ಮೇ 15 ರವರೆಗೆ ಬಂದ್ ಇರಲಿದ್ದು, ಗ್ರಾಹಕರು ಸಹಕರಿಸಬೇಕು. ಮೇ 15 ರಿಂದ 30 ರೊಳಗೆ ರೈತರ ಹಣ ಅವರ ಖಾತೆಗೆ ಜಮಾ ಮಾಡಲಾಗುವುದು.
    ಹರ್ಷವರ್ಧನ, ಹಿರಿಯ ವ್ಯವಸ್ಥಾಪಕ ಕೆವಿಜಿ ಬ್ಯಾಂಕ್ ಬಾಗಲಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts