More

    ವಿಮಾ ಪಾಲಿಸಿ ನೆಪದಲ್ಲಿ 4.50 ಲಕ್ಷ ರೂ. ವಂಚನೆ

    ಬೆಂಗಳೂರು: ವಿಮಾ ಕಂತು ಬಾಕಿ ವಿಚಾರದಲ್ಲಿ ಉದ್ಯಮಿಗೆ ಕರೆ ಮಾಡಿದ ಸೈಬರ್ ಕಳ್ಳರು 4.50 ಲಕ್ಷ ರೂ. ಪಡೆದು ವಂಚನೆ ಮಾಡಿದ್ದಾರೆ.
    ಜಯನಗರ 5ನೇ ಹಂತದ ಉದ್ಯಮಿ ವಂಚನೆಗೆ ಒಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಉದ್ಯಮಿ ಮೊಬೈಲ್‌ಗೆ ಕರೆ ಮಾಡಿದ್ದ ಅಪರಿಚಿತ ಮಹಿಳೆ, ‘ನಿಮ್ಮ ಐಸಿಐಸಿಐ ಪಾಲಿಸಿ ಕಂತು ಬಾಕಿ ಉಳಿದಿದೆ. ನವೀಕರಿಸಲು ಆನ್‌ಲೈನ್‌ನಲ್ಲಿ ಹಣ ಪಾವತಿ ಮಾಡಬಹುದು. ಇದಕ್ಕೆ 10 ದಿನಗಳ ಒಳಗಾಗಿ ಇಮೇಲ್‌ಗೆ ರಸೀದಿ ಬರಲಿದೆ’ ಎಂದು ಹೇಳಿ ಬ್ಯಾಂಕ್ ಖಾತೆ ನಂಬರ್ ಕಳುಹಿಸಿದ್ದಳು. ಇದನ್ನು ನಂಬಿದ ಉದ್ಯಮಿ, ಆಕೆ ಕೊಟ್ಟ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಹಣ ಜಮೆ ಮಾಡಿದ್ದರು. ಆದರೆ, ಯಾವ ತಿಂಗಳೂ ರಸೀದಿ ಬಂದಿರಲಿಲ್ಲ.

    ಮಾರ್ಚ್ 3ರಂದು ಸಹ ಕಂತು ಪಾವತಿ ಮಾಡಿದ ಮೇಲೆ ಅನುಮಾನ ಬಂದು ಅಪರಿಚಿತ ಮಹಿಳೆ ಕರೆ ಮಾಡಿದ್ದ ೆನ್ ನಂಬರ್ ವಾಪಸ್ ಕರೆ ಮಾಡಿದಾಗ ಸ್ವಿಚ್ ಆ್ ಆಗಿತ್ತು. ಈ ಬಗ್ಗೆ ಐಸಿಐಸಿಐ ಬ್ಯಾಂಕ್‌ನಲ್ಲಿ ಉದ್ಯಮಿ ವಿಚಾರಣೆ ಮಾಡಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts