More

    ವಿದ್ಯುತ್ ತೊಂದರೆಯಿಂದ ರೋಗಿಗಳ ಪರದಾಟ

    ಚಿತ್ರದುರ್ಗ:ಮಳೆಯಿಂದಾಗಿ ಮೊಳಕಾಲ್ಮೂರು ತಾಲೂಕು ಆಸ್ಪತ್ರೆಗೆ ವಿದ್ಯುತ್ ಪೂರೈಕೆಯಲ್ಲಾದ ವ್ಯತ್ಯಯದಿಂದಾಗಿ ರೋಗಿಗಳು ಪರ ದಾಡುವಂತಾಗಿದೆ. ಈಚೆಗೆ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿದ್ದ ಜನರೇಟ್ ಕೂಡ ದುರಸ್ತಿಯಲ್ಲಿರುವ ಕಾರಣಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಸಂದರ್ಭದಲ್ಲಿ ವೈದ್ಯರು,ವೈದ್ಯಕೀಯ ಸಿಬ್ಬಂದಿ ಮೊಬೈಲ್ ಬೆಳಕಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡುವಂಥ ಪರಿಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ಉಂಟಾಗಿರುವ ಈ ಪರಿಸ್ಥಿತಿಯಿಂದ ರೋಗಿಗಳಿಗೆ ಏನಾದರೂ ಹೆಚ್ಚುಕಡಿಮೆ ಆದರೆ ಯಾರು ಹೊಣೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
    ಮಳೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಕೊಂಚ ಅಡಚಣೆ ಆಗಿತ್ತು, ಜನರೇಟರ್ ದುರಸ್ತಿಗೆ ಕಳೆದ ಮೂರ‌್ನಾಲ್ಕು ದಿನಗಳಿಂದ ಪ್ರಯತ್ನ ನಡೆಸಲಾಗಿತ್ತು. ವಿದ್ಯುತ್ ಪೂರೈಕೆ ಕಡಿತಗೊಳ್ಳುತ್ತಿದ್ದಂತೆ ಜನರೇಟರ್ ಟ್ರಿಪ್ ಆಗುತ್ತಿತ್ತು. ಆದರೆ ವಿದ್ಯುತ್ ಅಡಚಣೆಯಿಂದ ಐಸಿಯು,ಒಟಿ ಮತ್ತಿತರ ವೈದ್ಯಕೀಯ ಸೇವೆಗಳಲ್ಲಿ ಕೊರತೆ ಆಗಿಲ್ಲ. ನಾನು ಕೂಡ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಮಂಗಳವಾರ ದಾವಣಗೆರೆಯಿಂದ ಬಂದಿರುವ ಮೆಕಾನಿಕ್ ಜನರೇಟರ್ ದುರಸ್ತಿಗೆ ಮುಂದಾಗಿದೆ ಎಂದು ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts