More

    ಕಟಪಾಡಿ ಮೂಡುಪಡು ಜೋಡುಕರೆ ಕಂಬಳಕ್ಕೆ ಚಾಲನೆ

    ಪಡುಬಿದ್ರಿ: ಕಟಪಾಡಿ ಬೀಡುವಿನ ಗದ್ದೆಯಲ್ಲಿ ನಡೆಯುತ್ತಿರುವ ಕಟಪಾಡಿ ಬೀಡು ಮೂಡು-ಪಡು ಜೋಡುಕರೆ ಕಂಬಳಕ್ಕೆ ವ್ಯವಸ್ಥಾಪಕ ಕಟಪಾಡಿ ಬೀಡು ಗೋವಿಂದಾಸ್ ಶೆಟ್ಟಿ ಶನಿವಾರ ಚಾಲನೆ ನೀಡಿದರು.

    ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ.ಎ.ರವೀಂದ್ರನಾಥ ಶೆಟ್ಟಿ ಕಟಪಾಡಿ ಅಧ್ಯಕ್ಷತೆ ವಹಿಸಿದ್ದರು. ಕಂಬಳ ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಕಟಪಾಡಿ ಬೀಡು ಸುಭಾಸ್ ಬಲ್ಲಾಳ್, ಪ್ರಮುಖರಾದ ಕಟಪಾಡಿ ಬೀಡಿನ ಅತುಲ್ ಬಲ್ಲಾಳ್, ಅಶ್ವಿನ್ ಬಲ್ಲಾಳ್, ಮೀನಾಕ್ಷಿ ಬಲ್ಲಾಳ್, ಅಶ್ವತಿ ಬಲ್ಲಾಳ್, ಶ್ರೀನಿವಾಸ ಬಲ್ಲಾಳ್, ಉದಯ್ ಹೆಗ್ಡೆ, ವಿನಯ ಬಲ್ಲಾಳ್, ಸಂಪತ್ ಜಯರಾಮ ಬಲ್ಲಾಳ್, ನವೀನ್ ಬಲ್ಲಾಳ್, ಮೂಡಬೆಟ್ಟುಗುತ್ತು ಶಿವಣ್ಣ ಶೆಟ್ಟಿ, ಆನಂದ ಶೆಟ್ಟಿ, ಅಶೋಕ್ ಶೆಟ್ಟಿ, ಅಚ್ಚಡ ಬಡಗುಮನೆ ರವೀಂದ್ರ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಹೊಸಮನೆ ಭೋಜರಾಜ್ ಶೆಟ್ಟಿ, ಅಮರನಾಥ ಶೆಟ್ಟಿ ಪಾಂಗಾಳ ಕಂಬಳ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

    177 ಜೊತೆ ಕೋಣಗಳು ಭಾಗಿ

    ಎರಡು ದಿನ ನಡೆಯುವ ಕಂಬಳದಲ್ಲಿ ನೇಗಿಲು ಕಿರಿಯ 93, ನೇಗಿಲು ಹಿರಿಯ 32, ಹಗ್ಗ ಕಿರಿಯ 23, ಹಗ್ಗ ಹಿರಿಯ 16, ಅಡ್ಡ ಹಲಗೆ 4, ಕನೆ ಹಲಗೆ 9 ಜೊತೆ ಸೇರಿ ಒಟ್ಟು 177ಕೋಣ ಭಾಗವಹಿಸಿದ್ದವು. ಕನೆ ಹಲಗೆ ವಿಭಾಗವೊಂದರಲ್ಲೇ ಬೊಳಂಬಳ್ಳಿ ಚೈತ್ರ ಪರಮೇಶ್ವರ್ ಭಟ್ ಅವರ 4 ಜೊತೆ ಕೋಣ ಪಾಲ್ಗೊಂಡಿರುವುದು ಕಂಬಳ ಸ್ಪರ್ಧೆಯಲ್ಲಿ ದಾಖಲೆಯಾಗಿದೆ. ಅಲ್ಲದೆ ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ ಭಟ್ 3 ಜೊತೆ ಹಾಗೂ ನೇಗಿಲು ಹಿರಿಯ ವಿಭಾಗದಲ್ಲಿ ಕಟಪಾಡಿ ಹಾಗೂ ಮೂಡಬೆಟ್ಟು ಗ್ರಾಮದ ಕೋಣಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷತೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts