More

    ಕಾಲು ಮುರೀತೀನಿ ಎಂದು ಹೆದರಿಸಿದ್ದಕ್ಕೆ ಅರೆಸ್ಟ್​ ಆದ ಬಾಲಿವುಡ್​ ನಟಿ

    ಅಹಮದಾಬಾದ್​: ಕೆಲವು ವರ್ಷಗಳ ಹಿಂದೆ ಬಾಲಿವುಡ್​ನಲ್ಲಿ ತನ್ನ ಗ್ಲಾಮರ್​ನಿಂದ ಗಮನಸೆಳೆದಿದ್ದ ಪಾಯಲ್​ ರೊಹಟ್ಗಿ ಎಂಬ ಬಾಲಿವುಡ್​ ನಟಿಯನ್ನು ಅಹಮದಾಬಾದ್​ ಪೊಲೀಸರು ಬಂಧಿಸಿದ್ದಾರೆ. ಯಾಕೆ ಅಂತೀರಾ? ಪಾಯಲ್​ ತನ್ನ ಅಪಾರ್ಟ್​ಮೆಂಟ್​​ನ ಅಧ್ಯಕ್ಷರು ಮತ್ತು ಇತರರಿಗೆ ಕಾಲು ಮುರಿಯುವುದಾಗಿ ಧಮ್ಕಿ ಹಾಕಿದ್ದಾರಂತೆ. ಅದೇ ಕಾರಣಕ್ಕೆ ಅವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

    ಇದನ್ನೂ ಓದಿ: ಅನುಪಮ್​ ಖೇರ್ ಯಾರೂ ಅಂತಲೇ ಗೊತ್ತಿಲ್ಲವಂತೆ …

    ಇಷ್ಟಕ್ಕೂ ಆಗಿದ್ದೇನೆಂದರೆ, ಅಪಾರ್ಟ್​ಮೆಂಟ್​ನ ಕಾಮನ್​ ಪ್ಯಾಸೇಜ್​ ಬಳಸಿಕೊಳ್ಳುವ ವಿಷಯವಾಗಿ ಪಾಯಲ್​ ಮತ್ತು ಅಪಾರ್ಟ್​ಮೆಂಟ್​ನ ಇತರರ ನಡುವೆ ವಾಟ್ಸಾಪ್​ ಗ್ರೂಪ್​ನಲ್ಲಿ ಜಗಳ ಆಗಿದೆಯಂತೆ. ಮಾತಿಗೆ ಮಾತು ಬೆಳೆದು, ಅಪಾರ್ಟ್​ಮೆಂಟ್​ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರು ಮತ್ತು ಇತರ ಕೆಲವರ ಕಾಲು ಮುರಿಯುವುದಾಗಿ ಪಾಯಲ್​ ಧಮ್ಕಿ ಹಾಕಿದ್ದಾರೆ. ಇದರಿಂದ ಬೇಸರಗೊಂಡಿರುವ ಇನ್ನಿತರು, ಪಾಯಲ್​ ವಿರುದ್ಧ ಕೇಸ್​ ಹಾಕಿದ್ದಾರೆ. ತಕ್ಷಣವೇ ಆಕೆಯನ್ನು ಅರೆಸ್ಟ್​ ಮಾಡಲಾಗಿದೆ.

    ಇದನ್ನೂ ಓದಿ: ‘ಕ್ರಿಷ್ 4’ ಮೂಲಕ ಜಾದೂ ರೀಎಂಟ್ರಿ? ಬಾಲಿವುಡ್​ನಲ್ಲಿ ಹೀಗೊಂದು ಸುದ್ದಿ

    ಪಾಯಲ್​ ತೊಂದರೆಗೆ ಸಿಲುಕುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮುನ್ನ ಅವರು ಅಪಾರ್ಟ್​ಮೆಂಟ್​ ಜನರ ಜತೆಗೆ ಕಿತ್ತಾಡಿಕೊಂಡಿದ್ದರು. ಇನ್ನು, ಕಳೆದ ವರ್ಷ ಸುಶಾಂತ್​ ಸಿಂಗ್​ ರಜಪೂತ್​ ನಿಧನದ ನಂತರ ಬಾಲಿವುಡ್​ನಲ್ಲಾದ ನೆಪೋಟಿಸಂ ಕುರಿತಾದ ಚರ್ಚೆಯಲ್ಲಿ, ಜನಪ್ರಿಯ ನಟ-ನಟಿಯರ ವಿರುದ್ಧ ಅವಾಚ್ಯವಾಗಿ ಮಾತನಾಡಿದ್ದಕ್ಕೆ, ಪಾಯಲ್​ ಅವರ ಟ್ವಿಟರ್​ ಅಕೌಂಟ್​ಗೆ ಎರಡು ಬಾರಿ ನಿಷೇಧ ಹೇರಲಾಗಿತ್ತು.

    ಆಗಿಲ್ಲದ ಪ್ರಶ್ನೆಗಳು ಈಗೇಕೆ? ಪ್ರಕಾಶ್​ ರೈ ಪ್ರಶ್ನೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts