

ಆಂಧ್ರಪ್ರದೇಶ: ತೆಲುಗು ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಸದ್ಯ ರಾಜಕೀಯದಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದು, ತಮ್ಮ ಕಾರ್ಯಕರ್ತರು ಹಾಗೂ ಬೆಂಬಲಿಗರ ಜತೆಗೂಡಿ ಕೆಲಸಗಳಲ್ಲಿ ನಿರತರಾಗಿದ್ದಾರೆ. ಆದರೆ, ಈ ಮಧ್ಯೆ ಪವನ್ ಅಭಿಮಾನಿಗಳು ಭಾರೀ ಅಸಮಾಧಾನ ಹೊರಹಾಕಿದ್ದು, ಮುಂದಿನ ಸಿನಿಮಾದ ಬಗ್ಗೆ ಏಕೆ ಯಾವ ಮಾಹಿತಿಯನ್ನು ಹಂಚಿಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪವನ್ ಕಲ್ಯಾಣ್ ಅಭಿನಯದ ಬಹುನಿರೀಕ್ಷಿತ ಚಿತ್ರಗಳಾದ ಉಸ್ತಾದ್ ಭಗತ್ ಸಿಂಗ್ ಮತ್ತು 'ಓಜಿ' (ಸರಳವಾಗಿ OG) ಸಿನಿಮಾಗಳ ಬಗ್ಗೆ ಸಿನಿಪ್ರೇಕ್ಷಕರಲ್ಲಿ ಬಹಳ ಕುತೂಹಲ ಮೂಡಿದೆ. ಈ ಚಿತ್ರಗಳ ಕೆಲಸಗಳು ಸದ್ಯ ನಿರ್ಮಾಣ ಹಂತದಲ್ಲಿವೆ. ಆದ್ರೆ, ಈ ಹಿಂದಿನಿಂದಲೂ ಓಜಿ ಚಿತ್ರತಂಡ ಅಪ್ಡೇಟ್ಗಳನ್ನು ನೀಡುವಲ್ಲಿ ಕೊಂಚ ವಿಫಲವಾಗಿದೆ. ಇದೇ ವಿಷಯಕ್ಕೆ ಪವನ್ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ.
ಸುಜೀತ್ ನಿರ್ದೇಶನದ ಓಜಿ ಸಿನಿಮಾ ಸೆಪ್ಟೆಂಬರ್ 27, 2024 ರಂದು ಬಿಡುಗಡೆಗೆ ಸಿದ್ಧವಾಗಿದೆ ಎಂದು ಚಿತ್ರ ತಯಾರಕರು ತಿಳಿಸಿದ್ದರು. ಆದ್ರೆ, ಇತ್ತೀಚೆಗೆ ರಿಲೀಸ್ ಮಾಡಿದ ಪೋಸ್ಟರ್‌ನಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲ್ಲ. ಇದು ಅಭಿಮಾನಿಗಳನ್ನು ಕೆರಳಿಸಿದೆ. ಇದರ ಅನ್ವಯ ಚಿತ್ರ ಡಿಸೆಂಬರ್ 2024ಕ್ಕೆ ರಿಲೀಸ್ ಆಗಬಹುದು ಎಂದು ಹೇಳಲಾಗಿದೆ. ಒಟ್ಟಾರೆ ಚಿತ್ರತಂಡ ಘೋಷಿಸುವ ಅಧಿಕೃತ ಮಾಹಿತಿಗಾಗಿ ನಿರೀಕ್ಷಿಸಬೇಕಿದೆ.
ಪವನ್ಗೆ ನಾಯಕಿಯಾಗಿ ಪ್ರಿಯಾಂಕಾ ಅರುಲ್ ಮೋಹನ್ ಕಾಣಿಸಿಕೊಂಡಿದ್ದು, ಡಿವಿವಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಡಿಯಲ್ಲಿ ಡಿವಿವಿ ದಾನಯ್ಯ ಒಜಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಥಮನ್ ಅವರ ಸಂಗೀತವಿದೆ,(ಏಜೆನ್ಸೀಸ್).