More

    ಶುದ್ಧ ಕುಡಿಯುವ ನೀರಿಗಾಗಿ ಸರತಿ ಸಾಲು! ಬಿಬಿಎಂಪಿ ವ್ಯಾಪ್ತಿಯ 224 ಘಟಕಗಳ ಕಾರ್ಯಾಚರಣೆ ಸ್ಥಗಿತ

    ರಾಮ ಕಿಶನ್​ ಕೆ.ವಿ.
    ಬೆಂಗಳೂರು: ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆಬಾವಿಗಳು ಬತ್ತಿ ಹೋಗಿದ್ದು, ಪರಿಣಾಮ ಸಾಕಷ್ಟು ಶುದ್ಧ ಕುಡಿಯುವ ನೀರಿನ ಟಕಗಳು ಸ್ಥಗಿತಗೊಂಡಿವೆ. ಫೆಬ್ರವರಿ ಆರಂಭದಿಂದಲೇ ಸಮಸ್ಯೆ ಎದುರಾಗಿದ್ದು, ಜನರು ಶುದ್ಧ ಕುಡಿಯುವ ನೀರು ಪಡೆದುಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

    ರಾಜರಾಜೇಶ್ವರಿನಗರ, ಎಲೆಕ್ಟ್ರಾನಿಕ್​ ಸಿಟಿ, ಮಡಿವಾಳ, ಯಶವಂತಪುರ. ವಿಜಯನಗರ, ಬ್ಯಾಟರಾಯನಪುರ, ಮಾರತ್ತಹಳ್ಳಿ, ಅವಲಹಳ್ಳಿ ಸೇರಿ ವಿವಿಧ ಭಾಗಗಲ್ಲಿ ಬಿಬಿಎಂಪಿ ಸ್ಥಾಪಿಸಿರುವ ಕೆಲ ಕುಡಿಯುವ ನೀರಿನ ಟಕಗಳು ಅಂತರ್ಜಲ ಕುಸಿತದಿಂದ ನಿಷ್ಕ್ರಿಯಗೊಂಡಿವೆ. ಇದು ಜನರನ್ನು ಹೈರಾಣಾಗಿಸಿದೆ. ಕೆಲವೆಡೆ ಒಬ್ಬ ವ್ಯಕ್ತಿಗೆ ಒಂದು ಕ್ಯಾನ್​ ನೀರು ಕೊಂಡೊಯ್ಯಲಷ್ಟೇ ಅವಕಾಶ ನೀಡಲಾಗುತ್ತಿದೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 1,065 ಶುದ್ಧ ಕುಡಿಯುವ ನೀರಿನ ಟಕಗಳಿದ್ದು, ಸದ್ಯ 841 ಟಕಗಳು ಕಾರ್ಯನಿರ್ವಹಿಸುತ್ತಿವೆ. ನೀರಿಲ್ಲದ ಕಾರಣಕ್ಕೆ 224 ಟಕಗಳು ಸ್ಥಗಿತಗೊಂಡಿವೆ. ಪರಿಣಾಮವಾಗಿ ಖಾಸಗಿ ಶುದ್ಧ ಕುಡಿಯುವ ನೀರಿನ ಟಕಗಳು ಲಾಭ ಮಾಡಿಕೊಳ್ಳುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ‘ಕುಡಿಯುವ ನೀರು ಸಿಕ್ಕರೆ ಸಾಕು’ ಎನ್ನುವಂತಾಗಿದೆ.

    ಶುದ್ಧ ಕುಡಿಯುವ ನೀರಿಗಾಗಿ ಸರತಿ ಸಾಲು! ಬಿಬಿಎಂಪಿ ವ್ಯಾಪ್ತಿಯ 224 ಘಟಕಗಳ ಕಾರ್ಯಾಚರಣೆ ಸ್ಥಗಿತಮುಂದಿನ ದಿನಗಳಲ್ಲಿ ಈ ಕೊಳವೆ ಬಾವಿಗಳಿಗೆ ಮತ್ತೆ ಜಲಮರುಪೂರಣದ ವ್ಯವಸ್ಥೆ ಮಾಡಲಾಗುತ್ತದೆ. ಮತ್ತೆ ಘಟಕಗಳನ್ನು ಪುನರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೆಲ ಗಂಟೆಯಷ್ಟೇ ನೀರು ಪೂರೈಕೆ

    ನೀರಿನ ಅಭಾವದ ನಡುವೆಯೂ ಕಾರ್ಯನಿರ್ವಹಿಸುತ್ತಿರುವ ಕೆಲ ಶುದ್ಧ ಕುಡಿಯುವ ನೀರಿನ ಟಕಗಳು ನೀರು ಪೂರೈಸಲು ಸಮಯ ಮಿತಿ ವಿಧಿಸಿಕೊಂಡಿವೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆ ಮತ್ತು ಸಂಜೆ 4 ರಿಂದ ರಾತ್ರಿ 8 ಗಂಟೆ ವರೆಗೆ ನೀರು ಪೂರೈಸಲಾಗುತ್ತದೆ. ಮಧ್ಯಾಹ್ನ 1 ರಿಂದ ಸಂಜೆ 4 ಗಂಟೆ ವರೆಗೆ ಟಕವನ್ನು ಮುಚ್ಚಲಾಗುತ್ತಿದೆ. ಎಲ್ಲ ಟಕಗಳ ಮುಂದೆ ಬೋರ್ಡ್​ಗಳನ್ನು ಅಳವಡಿಸಿ ಸಮಸ್ಯೆ ಬಗ್ಗೆ ಜನರಿಗೆ ತಿಳಿಸಲಾಗುತ್ತಿದೆ.

    1000 ಲೀ. ಟ್ಯಾಂಕ್​ ಅಳವಡಿಕೆ:

    ಸ್ಥಗಿತಗೊಂಡಿರುವ ಕೆಲ ಟಕಗಳ ಮುಂದೆ ಬೆಂಗಳೂರು ಜಲಮಂಡಳಿ 1,000 ಲೀ. ಸಾಮರ್ಥ್ಯದ ಟ್ಯಾಂಕ್​ಗಳನ್ನು ಅಳವಡಿಸಿದೆ. ಇದಕ್ಕೆ ಟ್ಯಾಂಕರ್​ ಮೂಲಕ ನೀರು ತುಂಬಿಸಲಾಗುತ್ತಿದೆ. ಜನರು ಇದರಿಂದ ಉಚಿತವಾಗಿ ಕುಡಿಯುವ ನೀರು ಪಡೆದುಕೊಳ್ಳಬಹುದಾಗಿದೆ. ಇಂತಹ ಟ್ಯಾಂಕ್​ಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಸರತಿ ಸಾಲು ನಿರಂತರ!

    ಸೀಮಿತ ಸಂಖ್ಯೆಯಲ್ಲಿ ಟಕಗಳು ನಿರ್ವಹಿಸುತ್ತಿರುವುದರಿಂದ ಒತ್ತಡ ಹೆಚ್ಚಿದೆ. ಹೀಗಾಗಿ ನೀರು ಪಡೆದುಕೊಳ್ಳಲು ಬೆಳಗ್ಗಿನಿಂದಲೇ ತಾಸುಗಟ್ಟಲೆ ಜನ ಸರತಿಯಲ್ಲಿ ನಿಂತಿರುತ್ತಾರೆ. ಮೊದಲೆಲ್ಲ ನಿತ್ಯ 50-80 ಜನ ಬರುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ಈ ಸಂಖ್ಯೆ ದುಪ್ಪಟ್ಟಾಗಿದೆ. ವಾರಾಂತ್ಯದಲ್ಲಿ ದಟ್ಟಣೆ ಹೆಚ್ಚಿರುತ್ತದೆ. ಈ ಸಮಸ್ಯೆ ಇನ್ನಷ್ಟು ಬಿಗುಡಾಯಿಸುವ ಲಕ್ಷಣವಿದೆ ಎಂದು ಗಿರಿನಗರ ಭಾಗದಲ್ಲಿ ಶುದ್ಧ ಕುಡಿಯುವ ಟಕ ನಿರ್ವಹಿಸುತ್ತಿರುವ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

    ಕೊಳವೆಬಾವಿ ಬತ್ತಿ ಹೋಗಿರುವುದರಿಂದ ವೀರಭದ್ರ ನಗರದಲ್ಲಿದ್ದ ನೀರಿನ ಟಕ ಮುಚ್ಚಿದೆ. ಹೀಗಾಗಿ ಗಿರಿನಗರದ ಘಟಕದಿಂದ ನೀರು ಪಡೆದುಕೊಳ್ಳುತ್ತಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರು ಸಂಗ್ರಹಿಸುವುದೇ ಸಮಸ್ಯೆಯಾಗಿದೆ. ನೀರಿನ ಲಭ್ಯತೆ ಇರುವ ಬಹುತೇಕ ಟಕಗಳ ಮುಂದೆ ಉದ್ದನೆಯ ಸಾಲು ಸದಾ ಕಂಡುಬರುತ್ತಿದೆ. –
    – ಚಂದ್ರಶೇಖರ್​, ವೀರಭದ್ರ ನಗರ ನಿವಾಸಿ

    ಕತ್ರಿಗುಪ್ಪೆ ವಾರ್ಡ್​ನಲ್ಲಿರುವ ಕೆಲ ನೀರಿನ ಟಕಗಳು ಕಳೆದ ಕೆಲವು ದಿನಗಳಿಂದ ಸ್ಥಗಿತಗೊಂಡಿವೆ. ಇದರಿಂದ ಸಮಸ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು.
    – ರವಿಕುಮಾರ್​, ಕತ್ರಿಗುಪ್ಪೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts