

ಕೊಲ್ಕತ : ಅಳಿವಿನ ಅಂಚಿನಲ್ಲಿರುವ ಪ್ಯಾಂಗೊಲಿನ್ ಮತ್ತು 1.56 ಕಿಲೋಗ್ರಾಂನಷ್ಟು ಪ್ಯಾಂಗೊಲಿನ್ ಹೊರಗಣ ಚರ್ಮದ ತುಣುಕು(ಸ್ಕೇಲ್ಸ್)ಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಮೂವರು ದುಷ್ಕರ್ಮಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ.
ಸುಳಿವಿನ ಮೇರೆಗೆ, ಬೈಕುಂಠಪುರ ಅರಣ್ಯ ವಿಭಾಗದ ರೇಂಜ್ ಆಫಿಸರ್ ಸಂಜಯ್ ದತ್ತ ನೇತೃತ್ವದಲ್ಲಿ ಸರುಗರ್ಗ್ ಅರಣ್ಯ ವಲಯದ ತಂಡವೊಂದು ಜಲ್ಪೈಗುರಿ ಜಿಲ್ಲೆಯ ಗಜೋಲ್ಡೋಬಾ ಪ್ರದೇಶದಿಂದ ಮೂರು ಜನರನ್ನು ಬಂಧಿಸಿತು. ಪರಿಶೀಲನೆ ನಡೆಸಿದಾಗ ಒಂದು ಜೀವಂತ ಪ್ಯಾಂಗೋಲಿನ್ ಮತ್ತು 1.567 ಕೆಜಿ ಪ್ಯಾಂಗೋಲಿನ್ ಸ್ಕೇಲ್ಸ್ ಕಪ್ಪು ಸ್ಕೂಲ್ ಬ್ಯಾಗ್ನಲ್ಲಿ ಸಿಕ್ಕಿದವು ಎಂದು ಪೊಲೀಸರು ತಿಳಿಸಿದ್ದಾರೆ.
ಜೈಪಲ್ಗುರಿಯ ನಿವಾಸಿಗಳಾದ ಸುನಿಲ್ ಒರಾವೊ, ಮಿಜನೂರ್ ರಹಮಾನ್ ಮತ್ತು ಅಮ್ಜದ್ ಹುಸೈನ್ ಎಂಬುವರು ಬಂಧಿತರು. ಆರೋಪಿಗಳು ಬೈಕ್ ಸವಾರಿ ಮಾಡಿಕೊಂಡು ಪ್ರಾಣಿ ಮತ್ತು ಅದರ ಚರ್ಮದ ತುಣುಕುಗಳನ್ನು ಮತ್ತೊಬ್ಬರಿಗೆ ಮಾರುವುದಕ್ಕಾಗಿ ಈ ಪ್ರದೇಶಕ್ಕೆ ಬಂದಿದ್ದರು ಎಂಬುದು ವಿಚಾರಣೆಯಲ್ಲಿ ತಿಳಿದುಬಂತು. ಅರಣ್ಯ ಇಲಾಖೆ ಸಿಬ್ಬಂದಿ ಪ್ಯಾಂಗೋಲಿನ್ ಮತ್ತು ಅದರ ಸ್ಕೇಲ್ಗಳನ್ನು ಜಪ್ತಿಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)