More

    ಕರೊನಾದಿಂದ ದೂರ ಉಳಿಯಲು ಹಾವು ತಿಂದು ವಿಡಿಯೋ ಹಂಚಿಕೊಂಡ ಭೂಪ- ಮುಂದೇನಾಯ್ತು?

    ಚೆನ್ನೈ: ಕರೊನಾ ವೈರಸ್‌ ತಮಗೆ ತಗುಲದಿರಲಿ ಎಂದು ಕೆಲವರು ಏನೇನೋ ಕೆಲಸಗಳನ್ನು ಮಾಡುತ್ತಿದ್ದಾರೆ. ಕರೊನಾ ದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುವುದು, ಗ್ರಾಮದ ದೇವರಿಗೆ ಹರಕೆ ಸಲ್ಲಿಸುವುದು… ಅಷ್ಟೇ ಏಕೆ ನರಬಲಿಯನ್ನೂ ಕೊಟ್ಟ ಘಟನೆಗಳು ನಡೆದಿವೆ.

    ಆದರೆ ಇದೀಗ ಇಲ್ಲೊಬ್ಬ ಆಸಾಮಿ ತನಗೆ ಕರೊನಾ ಸೋಂಕು ತಗುಲದೇ ಇರಲಿ ಎನ್ನುವ ಕಾರಣಕ್ಕೆ ಹಾವೊಂದನ್ನು ತಿಂದು ಜೀರ್ಣಿಸಿಕೊಂಡಿದ್ದಾನೆ. ತಮಿಳುನಾಡಿನ ತಿರುನೇಲ್ವೆಲಿ ಜಿಲ್ಲೆಯ ಪೇರುಮಲ್ಪತ್ತಿ ಗ್ರಾಮದ ವಡಿವೇಲ್ ಎಂಬಾತ ಹಾವು ತಿಂದಿದ್ದಾನೆ. ಇಷ್ಟಾದರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ತಾನು ಗದ್ದೆಗೆ ಹೋಗಿ ಹಾವು ಹಿಡಿದು ತಿನ್ನುತ್ತಿರುವ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಕರೊನಾ ವೈರಸ್‍ನಿಂದ ದೂರವಿರಲು ಸರಿಸೃಪಗಳ ಭಕ್ಷಣೆ ಅತ್ಯುತ್ತಮವಾದದ್ದು ಎಂದು ಶೀರ್ಷಿಕೆ ನೀಡಿದ್ದಾನೆ.

    ಇದನ್ನು ನೋಡಿದ ಪರಿಸದ ಪ್ರೇಮಿಗಳ ತಂಡವೊಂದು ಪೊಲೀಸರಿಗೆ ಮಾಹಿತಿ ನೀಡಿದೆ. ಪೊಲೀಸರು ಈತನನ್ನು ಹುಡುಕಿ ಹೋಗಿ ಬಂಧಿಸಿದ್ದಾರೆ, ಮಾತ್ರವಲ್ಲದೇ ಈತನ ವಿರುದ್ಧ ವಿವಿಧ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡಲಾಗಿದ್ದು, 7,500 ರೂಪಾಯಿ ದಂಡ ಹಾಕಿದ್ದಾರೆ.

    ಮದ್ವೆಯಾಗಿ ಮಗುವಾದ್ರೂ ಕಾಡುತ್ತಿದ್ದ ಪ್ರಿಯಕರ: ತಾನೇ ಮುಂದೆ ನಿಂತು ತಾಳಿ ಕಟ್ಟಿಸಿದ ಪತಿರಾಯ!

    ಈ ಸೇತುವೆ ಸದ್ಯ ಮದುವೆಗಳ ಹಾಟ್‌ಸ್ಪಾಟ್‌- ದಿನವೂ ನಡೀತಿದೆ ವಿವಾಹ: ಇದಕ್ಕಿದೆ ಕುತೂಹಲದ ಕಾರಣ

    ದುಡ್ಡು ಪಡೆಯಲು ರಾತ್ರಿಯಿಡೀ ಬ್ಯಾಂಕ್‌ ಎದುರು ಬೀಡುಬಿಟ್ಟ ರೈತರು! ಬರಿಗೈಯಲ್ಲಿ ಹೋದರು ಕೆಲವರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts