More

    ಬಯಲಾಯ್ತು ಮುಖವಾಡ, ಬೀದಿಗೆ ಬಂತು ಬಂಡವಾಳ: ಕಾಂಗ್ರೆಸ್​​ ವಿರುದ್ಧ ಬಿಜೆಪಿ, ಜೆಡಿಎಸ್​​ ಟ್ವೀಟಾಸ್ತ್ರ

    ಬೆಂಗಳೂರು: ರಾಜಧಾನಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ರೂಪಿಸಿರುವ ‘ಬ್ರ್ಯಾಂಡ್ ಬೆಂಗಳೂರು’ ಯೋಜನೆ ಟೇಕ್ ಆಫ್ ಆಗದಿರುವುದನ್ನು ‘ವಿಜಯವಾಣಿ’ಯು ಮಂಗಳವಾರ (ಮೇ 21) ವಿಶೇಷ ಲೇಖನ ಪ್ರಕಟಿಸಿತ್ತು. ಇದನ್ನಾಧರಿಸಿ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್, ಆಡಳಿತರೂಢ ಕಾಂಗ್ರೆಸ್ ಕಾಲೆಳೆದು ತೀವ್ರ ತರಾಟೆಗೆ ತೆಗೆದುಕೊಂಡಿದೆ.

    ‘ಬಯಲಾಯ್ತು ಮುಖವಾಡ, ಬೀದಿಗೆ ಬಂತು ಬಂಡವಾಳ’ ಶೀರ್ಷಿಕೆಯಡಿ ಬಿಜೆಪಿಯು ತನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಕಾಂಗ್ರೆಸ್ ಸರ್ಕಾರ ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯನ್ನು ಹಳ್ಳ ಹಿಡಿದೆ. ಯೋಜನೆ ೋಷಿಸಿದ ಬಳಿಕ ಅಗತ್ಯ ಅನುದಾನ ಬಿಡುಗಡೆ ಮಾಡದೆ ಬ್ರ್ಯಾಂಡ್ ಕಾರ್ಯಕ್ರಮಗಳು ಹಳಿತಪ್ಪಿವೆ ಎಂದು ಜರಿದಿದೆ. ಇದೇ ರೀತಿ ಜೆಡಿಎಸ್ ಕೂಡ ತನ್ನ ಎಕ್ಸ್ ಖಾತೆ ಮೂಲಕ ಕಾಂಗ್ರೆಸ್ ಸರ್ಕಾರದ ‘ಬ್ರ್ಯಾಂಡೆಡ್ ಸಾಧನೆ’ ಒಂದೇ ಒಂದು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಟೀಕಿಸಿದೆ. ಈ ಎರಡೂ ಪೋಸ್ಟ್‌ಗಳು ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

    ಗುಂಡಿಗಳ ನಗರವಾಗಿ ಮಾರ್ಪಾಟು:

    ನಗರ ಯೋಜನೆಯ ಕಲ್ಪನೆಯೇ ಇಲ್ಲದೆ ಹಾಗೂ ದೂರದೃಷ್ಟಿ ಕೊರತೆಯಿಂದ ಬಳಲುತ್ತಿರುವ ಕಾಂಗ್ರೆಸ್ ಸರ್ಕಾರದ ಬ್ರ್ಯಾಂಡ್ ಬೆಂಗಳೂರು ಯೋಜನೆ ರೂಪುಗೊಂಡ ಆರು ತಿಂಗಳ ಒಳಗೆ ಹಳ್ಳ ಹಿಡಿದಿದೆ.

    ಅನುದಾನ ಹಾಗೂ ಮೇಲುಸ್ತುವಾರಿ ಕೊರತೆಯಿಂದ ಬಳಲುತ್ತಿರುವ ಬ್ರ್ಯಾಂಡ್ ಬೆಂಗೂರು ಯೋಜನೆ ಈಗ ನೇಪಥ್ಯಕ್ಕೆ ಸರಿದಿದೆ. ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಮಹಾನಗರ ಅಭಿವೃದ್ಧಿಗೆ ನೀಡಬೇಕಾದಷ್ಟು ಆರ್ಥಿಕ ನೆರವು ನೀಡಿಲ್ಲ. ಇದರಿಂದ ಸಿಲಿಕಾನ್ ಸಿಟಿ ತಗ್ಗು ಗುಂಡಿಗಳ ನಗರವಾಗಿ ಮಾರ್ಪಟ್ಟಿದೆ. ಇದರ ಕೀರ್ತಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೂ ಸಲ್ಲಬೇಕು.

    ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುವುದು, ಬಳಿಕ ಮೈಮರೆಯುವುದು ಕಾಂಗ್ರೆಸ್ ಸರ್ಕಾರಕ್ಕೆ ಹೊಸದಲ್ಲ. ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ ಕಾರ್ಯಕ್ರಮ ರೂಪಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರೇ, ಮಳೆಯಿಂದಾಗಿ ಬೆಂಗಳೂರಿನ ಹಲವು ನಿವಾಸಿಗಳ ಮನೆ ಬಾಗಿಲಿಗೆ ಚರಂಡಿ ನೀರು ಬಂದಿದೆ. ಮೊದಲು ಬೆಂಗಳೂರಿಗರ ಸಮಸ್ಯೆ ಬಗೆಹರಿಸಿ ಕೃತಾರ್ಥರಾಗಿ ಎಂದು ಬಿಜೆಪಿ ಟೀಕಿಸಿದ್ದು, ‘ಬ್ಯಾಡ್ ಬೆಂಗಳೂರು’ ಹಾಗೂ ‘ಕಾಂಗ್ರೆಸ್‌ಫೈಲ್ಸ್‌ಕರ್ನಾಟಕ’ ಹ್ಯಾಷ್‌ಟ್ಯಾಗ್ ಮಾಡಿದೆ.

    ‘ಬ್ರ್ಯಾಂಡೆಡ್ ಸಾಧನೆ’ ಎಲ್ಲಿ:

    ಇನ್ನು ಜೆಡಿಎಸ್ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಡಿಸಿಎಂ ವಿರುದ್ಧ ಹರಿಹಾಯ್ದಿದೆ. ‘ನಾಗರಿಕರ ಧ್ವನಿ, ಸರ್ಕಾರದ ಧ್ವನಿ’ ಎನ್ನುವ ಟ್ಯಾಗ್ ಲೈನ್ ಹಾಕಿಕೊಂಡು ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿರುವ ‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯ ಅಸಲಿ ಮುಖವು ಮನೆಗಳಿಗೆ ನುಗ್ಗಿರುವ ಮಳೆ ನೀರಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

    ಕಾಂಗ್ರೆಸ್ ಸರ್ಕಾರದ ‘ಬ್ರ್ಯಾಂಡೆಡ್ ಸಾಧನೆ’ ಒಂದೇ ಒಂದು ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಜಗದ್ವಿಖ್ಯಾತ ನಗರ, ನಾಡಪ್ರಭು ಕೆಂಪೇಗೌಡರು ಕಟ್ಟಿದ ಮಹಾನಗರವು ‘ಡಿಸಿ ಶಿವು’ ನೇತೃತ್ವದಲ್ಲಿ ಸೊರಗುತ್ತಿದೆ. 40 ಪರ್ಸೆಂಟ್ ಕಾಮಗಾರಿ ಉದ್ಯಾನ ನಗರಿ ಪ್ರತಿಷ್ಠೆಗೆ ಮಾರಣಾಂತಿಕ ಪೆಟ್ಟು ಕೊಡುವ ರಹದಾರಿ!

    ಕಳೆದ ವರ್ಷವೂ ಸಿಟಿ ರೌಂಡ್ಸ್ ಪ್ರಹಸನ ನಡೆದಿತ್ತು. ಈಗಲೂ ಅದೇ ಮುಂದುವರಿದಿದೆ. ಲಿತಾಂಶ ಮಾತ್ರ ಶೂನ್ಯ ಎಂದು ಜಿಡಿಎಸ್ ಲೇವಡಿ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts