More

    ಮನೆ ಮಾಲೀಕರ ಮನೆಗೆ ಕನ್ನ ಹಾಕಿದ್ದವನ ಬಂಧನ

    ಬೆಂಗಳೂರು: ನಕಲಿ ಕೀ ಮಾಡಿಸಿಕೊಂಡು ಮನೆ ಮಾಲೀಕರ ಮನೆಯಲ್ಲೇ ಚಿನ್ನಾಭರಣ ಹಾಗೂ ನಗದು ದೋಚಿದ್ದ ಬಾಡಿಗೆದಾರನನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
    ಎ.ನಾರಾಯಣಪುರದ ಸೆಲ್ವರಾಜ್(೫೬) ಬಂಧಿತ. ಆರೋಪಿಯಿಂದ ೪.೩೦ ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ ೭೨ ಸಾವಿರ ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ.
    ಎ.ನಾರಾಯಣಪುರದಲ್ಲಿ ಮಾಲೀಕರಾದ ಅಲವೇಲು ವಾಸವಾಗಿದ್ದು, ತಮ್ಮ ಮನೆ ಸಮೀಪದ ೧೦೦ ಮೀಟರ್ ದೂರದಲ್ಲಿದಲ್ಲಿರುವ ತಮ್ಮ ಖಾಲಿ ಜಾಗದಲ್ಲಿ ನಾಲ್ಕು ಶೆಡ್‌ಗಳನ್ನು ನಿರ್ಮಿಸಿ, ಅವುಗಳನ್ನು ಬಾಡಿಗೆಗೆ ನೀಡಿದ್ದರು. ಆರೋಪಿ ಈ ಪೈಕಿ ಒಂದು ಶೆಡ್‌ನಲ್ಲಿ ನೆಲೆಸಿದ್ದ. ಬಾಡಿಗೆ ನೀಡುವಾಗ ಮನೆ ಮಾಲೀಕರು ಕೀ ಇಡುವ ಜಾಗ ನೋಡಿಕೊಂಡಿದ್ದ. ಕೀ ಒಮ್ಮೆ ಕೊಂಡೊಯ್ದು ನಕಲಿ ಮಾಡಿಕೊಂಡಿದ್ದ. ಮನೆಯ ಮಾಲೀಕರು ಮೇ ೭ರಂದು ತಮಿಳುನಾಡಿನ ಮಳೈನೂರ್?ನ ದೇವಸ್ಥಾನಕ್ಕೆ ಹೋಗಿದ್ದರು. ಅದೇ ದಿನ ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದ. ದೇವಸ್ಥಾನದಿಂದ ಮೇ ೯ರಂದು ಅಲವೇಲು ವಾಪಸ್ ಬಂದಿದ್ದು, ಮೇ ೧೫ರಂದು ಬೀರು ತೆರೆದು ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts