More

    ನಾಯಿ ದಾಳಿಯಿಂದ ಜಿಂಕೆ ರಕ್ಷಣೆ

    ಯಲ್ಲಾಪುರ: ಆಹಾರ ಅರಸಿ ಕಾಡಿನಿಂದ ತಾಲೂಕಿನ ಕುಂದರಗಿ ಸಮೀಪದ ಭರತನಹಳ್ಳಿಗೆ ಬಂದಿದ್ದ ಜಿಂಕೆಯೊಂದನ್ನು ನಾಯಿಗಳ ದಾಳಿಯಿಂದ ಗ್ರಾಮಸ್ಥರು ಮಂಗಳವಾರ ರಕ್ಷಿಸಿದ್ದಾರೆ.

    ಬೆಳಗಿನ ವೇಳೆ ಭರತನಹಳ್ಳಿಯತ್ತ ಬಂದ ಜಿಂಕೆಯನ್ನು ನಾಯಿಗಳು ಬೆನ್ನತ್ತಿ ತೀವ್ರ ಗಾಯಪಡಿಸಿದ್ದವು. ಗ್ರಾಮಸ್ಥರು ಕುಂದರಗಿಯ ಉಪ ವಲಯಾರಣ್ಯಾಧಿಕಾರಿ ಕಲ್ಲಪ್ಪ ಬರದೂರು ಮತ್ತು ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಇಲಾಖೆಯವರು, ಗ್ರಾಮಸ್ಥರ ಸಹಕಾರದೊಂದಿಗೆ ಜಿಂಕೆಯನ್ನು ರಕ್ಷಿಸಿದರು. ಮಂಚೀಕೇರಿಯ ಪಶು ಆಸ್ಪತ್ರೆಗೆ ಜಿಂಕೆಯನ್ನು ಕರೆದೊಯ್ದು, ಅಗತ್ಯ ಚಿಕಿತ್ಸೆ ಕೊಡಿಸಿ, ಕಾಡಿಗೆ ಬಿಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts