ಮದ್ವೆಯಾಗಿ ಮಗುವಾದ್ರೂ ಕಾಡುತ್ತಿದ್ದ ಪ್ರಿಯಕರ: ತಾನೇ ಮುಂದೆ ನಿಂತು ತಾಳಿ ಕಟ್ಟಿಸಿದ ಪತಿರಾಯ!

lover
Published on

ಪಟ್ನಾ: ಪತಿಯೇ ತನ್ನ ಪತ್ನಿಯ ಪ್ರಿಯಕರನ ಹುಡುಕಾಟ ನಡೆಸಿ ಮದುವೆಗೆ ಮುಂದಾದ ಒಂದು ಚಿತ್ರಕಥೆ ಆಧಾರಿತ ಸಿನಿಮಾ ಬಾಲಿವುಡ್‌ನ ಪ್ರಖ್ಯಾತ ಹಮ್‌ ದಿಲ್‌ ದೇ ಚುಕೆ ಸನಮ್‌... ಆದರೆ ಇದೇ ರೀತಿಯ ಘಟನೆಯೊಂದು ಬಿಹಾರದಲ್ಲಿ ನಡೆದಿದೆ.

ಛಪ್ರಾ ಎಂಬ ಗ್ರಾಮದಲ್ಲಿನ ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜತೆಗೆ ಮದುವೆ ಮಾಡಿಸಿರುವ ಘಟನೆ ಇದಾಗಿದೆ. ಈ ಮದುವೆ ಮುಗಿದ ಮೇಲೆ ಮರಳುತ್ತಿದ್ದ ಜೋಡಿಯ ಚಿತ್ರವನ್ನು ಅಲ್ಲಿಯೇ ಇದ್ದವರು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಭಾರಿ ವೈರಲ್‌ ಆಗಿದೆ.

ನಿಕ್ಕಿ ಎಂಬಾಕೆಯ ಮದುವೆಯಾಗಿ ಒಂದು ಹೆಣ್ಣು ಮಗು ಕೂಡ ಇದೆ. ಆದರೆ ಈಕೆ ತನ್ನ ಮಾಜಿ ಪ್ರಿಯಕರನ ಒಡನಾಟ ಬಿಟ್ಟಿರಲಿಲ್ಲ. ಇದು ಪತಿಗೆ ತಿಳಿದು ಆತನೇ ಮುಂದೆ ನಿಂತು ಇಬ್ಬರ ಮದುವೆ ಮಾಡಿಸಿದ್ದಾರೆ.

ನಮಗೆ ಮಗುವಿದ್ದು, ಆ ಮಗುವನ್ನು ನಾನು ನೋಡಿಕೊಳ್ಳುತ್ತೇನೆ. ಸದ್ಯ ಪತ್ನಿ ಚೆನ್ನಾಗಿದ್ದರೆ ಸಾಕು ಎಂದು ಪತಿ ಹೇಳಿದ್ದಾನೆ. ಆದರೆ ನಿಕ್ಕಿ ಮಾತ್ರ ಸ್ವಲ್ಪ ವಿಭಿನ್ನ ಹೇಳಿಕೆ ನೀಡಿದ್ದಾಳೆ. ಮದುವೆಯ ನಂತರ ಗಂಡ ನನಗೆ ಹಿಂಸೆ ನೀಡುತ್ತಿದ್ದ. ಆ ಹಿಂಸೆ ತಾಳದೇ ನಾನು ಪ್ರಿಯಕರನ ಬಳಿ ಬಂದಿದ್ದೆ. ಯಾವುದೇ ಕಾರಣಕ್ಕೂ ವಾಪಸ್‌ ಹಳೆಯ ಗಂಡನ ಮನೆಗೆ ಹೋಗುವುದಿಲ್ಲ ಎಂದಿದ್ದಾರೆ. ಆದರೆ ಈ ನಡುವೆಯೇ ಮಗುವಿನ ಬಗ್ಗೆ ಚಕಾರ ಎತ್ತದ ಆಕೆ, ಮಗುವನ್ನು ಪತಿಯ ಜತೆಯೇ ಕಳಿಸಿಕೊಟ್ಟಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net