ಕೂಲ್‌ಡ್ರಿಂಗ್ಸ್‌ ಬಾಟಲಿಯ ಮುಚ್ಚಳ ಜೇನ್ನೊಣ ತೆಗೆಯುವುದನ್ನು ಕಂಡಿದ್ದೀರಾ? ಇಲ್ಲಿದೆ ನೋಡಿ ಅಚ್ಚರಿ ವಿಡಿಯೋ

bee
Published on

ಬ್ರೆಜಿಲ್‌: ಫಾಂಟಾ ಕಂಪೆನಿಯ ಕೂಲ್‌ಡ್ರಿಂಕ್ಸ್‌ ಬಾಟಲಿಯ ಮುಚ್ಚಳನವನ್ನು ತೆರೆಯಲು ಎರಡು ಜೇನ್ನೊಣಗಳು ಹರಸಾಹಸ ಪಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಪ್ಲಾಸ್ಟಿಕ್‌ ಬಾಟಲಿಗೆ ಇರುವ ಈ ಮುಚ್ಚಳವನ್ನು ಎರಡೂ ಕಡೆಯಿಂದ ಎರಡು ಜೇನ್ನೊಣಗಳು ತೆರೆಯಲು ಪ್ರಯತ್ನ ಮಾಡುತ್ತಿವೆ. ಬಾಟಲಿಯ ಎರಡೂ ಬದಿಯಲ್ಲೂ ಒಂದೊಂದು ಜೇನು ನೊಣ ಕುಳಿತುಕೊಂಡು, ಮುಚ್ಚಳ ತೆರೆಯಲು ಸರ್ಕಸ್‌ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಸ್ವಲ್ಪ ಹೊತ್ತಿನಲ್ಲಿಯೇ ಇವು ಬಾಟಲಿ ಮುಚ್ಚಳ ತೆರೆಯುವಲ್ಲಿ ಯಶಸ್ವಿಯೂ ಆಗಿದೆ. ಇದಕ್ಕೆ ಭಾರಿ ಕಮೆಂಟ್‌ಗಳು ಬರುತ್ತಿವೆ.

ನೀವೂ ನೋಡಿ ಈ ವಿಡಿಯೋ:

s-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net