

ನವದೆಹಲಿ : ಮರಳಿ ಯತ್ನವ ಮಾಡು ಅನ್ನುವ ಮಾತಿದೆ. ಕ್ರೀಡಾ ಕ್ಷೇತ್ರದಲ್ಲಿರುವವರಿಗಂತೂ ಈ ಮಾತು ಅಕ್ಷರಶಃ ಅನ್ವಯವಾಗುತ್ತದೆ. ದಿನನಿತ್ಯ ಅಭ್ಯಾಸ ಮಾಡುತ್ತಾ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದು ಅವರ ಎಂದಿನ ಪರಿಪಾಠ. ಇಂಥದೇ ಒಂದು ಪ್ರಯತ್ನದಲ್ಲಿ 7 ವರ್ಷದ ಪುಟಾಣಿ ಫುಟ್ಬಾಲ್ ಆಟಗಾರ ಕಂಭ ಏರುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ.
ಕೃತಕ ಕಂಭವೊಂದನ್ನು ಹತ್ತುವ ಯತ್ನದಲ್ಲಿರುವ ಮಗುವಿನ ಪ್ರಯತ್ನಗಳ ವಿಡಿಯೋ ತುಣಕುಗಳನ್ನು ಪೇರಿಸಿ ಒಂದು ದೀರ್ಘ ವಿಡಿಯೋ ಮಾಡಲಾಗಿದೆ. ಒಟ್ಟು 59 ಸೆಕೆಂಡುಗಳಿರುವ ಈ ವಿಡಿಯೋದಲ್ಲಿ ಒಂದು ಹೆಜ್ಜೆ ಹತ್ತಲೂ ಮೊದಲು ಕಷ್ಟ ಪಡುವ ಮಗು, ಕೊನೆಗೆ ಮೇಲಿನವರೆಗೆ ಹೋಗಿ ಸಲೀಸಾಗಿ ಕೆಳಗಿಳಿಯುತ್ತದೆ. ಎಂ.ವಿ.ರಾವ್ ಎಂಬ ಐಎಎಸ್ ಅಧಿಕಾರಿ ಇದನ್ನು ಟ್ವಿಟರ್ನಲ್ಲಿ ಶೇರ್ ಮಾಡಿ, 'ಈ ಮಗು ನನ್ನ ಗುರು' ಎಂದು ಟಿಪ್ಪಣಿ ಬರೆದಿದ್ದಾರೆ!
ವಿಡಿಯೋದಲ್ಲಿರುವ ಮಗುವಿನ ಹೆಸರು ಅರತ್ ಹೊಸ್ಸೈನಿ ಎನ್ನಲಾಗಿದೆ. ಲಿವರ್ಪೂಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಈ ಫುಟ್ಬಾಲ್ ಆಟಗಾರ ತನ್ನ ತಂದೆಯೊಂದಿಗೆ ಸ್ಟಂಟ್ಗಳನ್ನು ಮಾಡುವ ಹಲವು ವಿಡಿಯೋಗಳು ಆಗಾಗ ನೆಟ್ಟಿಗರ ಗಮನ ಸೆಳೆಯುತ್ತಾ ಇರುತ್ತವೆ ಎನ್ನಲಾಗಿದೆ. (ಏಜೆನ್ಸೀಸ್)