More

    ‘ಫ್ರೆಂಡ್ಸ್​’ ಪುನರ್ಮಿಲನ ! 17 ವರ್ಷಗಳ ನಂತರ ಅದೇ ಸೆಟ್​ನಲ್ಲಿ ತಾರೆಗಳು !

    ನವದೆಹಲಿ : 90 ರ ದಶಕದ ಹಿಟ್ ಇಂಗ್ಲೀಷ್ ಟಿವಿ ಶೋ ‘ಫ್ರೆಂಡ್ಸ್​’ನ ಎಲ್ಲಾ ಸ್ಟಾರ್​ಗಳು ಇದೀಗ ಮತ್ತೆ ಒಟ್ಟಾಗಿದ್ದಾರೆ. ಜೆನ್ನಿಫರ್ ಅನಿಸ್ಟನ್, ಮ್ಯಾಟ್ ಲೆಬ್ಲ್ಯಾಂಕ್, ಲಿಸಾ ಕುಡ್ರೊವ್, ಕೋರ್ಟೆನಿ ಕಾಕ್ಸ್, ಡೇವಿಡ್ ಶ್ವಿಮ್ಮರ್ ಮತ್ತು ಮ್ಯಾಥ್ಯೂ ಪೆರ್ರಿ ಅವರು ಬರೋಬ್ರರಿ 17 ವರ್ಷಗಳ ನಂತರ ತಮ್ಮ ಹಳೆಯ ಸೆಟ್​​ಗಳಲ್ಲಿ ಪುನರ್ಮಿಲನ ಕಾಣುತ್ತಿದ್ದಾರೆ.

    ಆರು ಜನ ಸ್ನೇಹಿತರ ನಡುವಿನ ಒಡನಾಟವನ್ನು ಸಾಂದರ್ಭಿಕ ಹಾಸ್ಯದೊಂದಿಗೆ ಮೇಳೈಸಿ ಜನರ ಮೆಚ್ಚುಗೆ ಪಡೆದಿದ್ದ ಫ್ರೆಂಡ್ಸ್​​, ಮೂಲತಃ ಎನ್​ಬಿಸಿ ಚಾನಲ್​ನಲ್ಲಿ ಪ್ರಸಾರವಾಗುತ್ತಿತ್ತು. 1994 ರಿಂದ 2004 ರವರೆಗೆ 10 ಸೀಸನ್​ಗಳಲ್ಲಿ ಧಾರಾವಾಹಿಯಾಗಿ ತೆರೆಕಂಡಿತು. ನೆಟ್​ಫ್ಲಿಕ್ಸ್​ನಲ್ಲಿ ಜನಪ್ರಿಯ ಪ್ರದರ್ಶನ ಪಡೆದ ನಂತರ ಎಚ್​ಬಿಒ ಮ್ಯಾಕ್ಸ್​ ಅದರ ಹಕ್ಕುಗಳನ್ನು 425 ಮಿಲಿಯನ್ ಡಾಲರ್ ತೆತ್ತು ಪಡೆದುಕೊಂಡಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ಗಂಡನ ಮೊಬೈಲ್​ ಚೆಕ್​ ಮಾಡಿ ಪ್ರೈವಸಿಗೆ ಧಕ್ಕೆ ತಂದ ಪತ್ನಿಗೆ 1 ಲಕ್ಷ ರೂಪಾಯಿ ದಂಡ!

    ಕಳೆದ ಒಂದು ವರ್ಷದಿಂದ ಅಭಿಮಾನಿಗಳು ಫ್ರೆಂಡ್ಸ್​ ತಾರೆಗಳ ಪುನರ್ಮಿಲನ ಪ್ರಸಂಗಕ್ಕಾಗಿ ಬೇಡಿಕೆ ಇಡುತ್ತಿದ್ದು, ಇದೀಗ ಎಚ್‌ಬಿಒ ಮ್ಯಾಕ್ಸ್​ ಅದನ್ನು ಹೊರತಂದಿದೆ. ಆರು ಪ್ರಮುಖ ತಾರೆಗಳೊಂದಿಗೆ ಮುಂಚಿನ ಸಂಚಿಕೆಗಳಲ್ಲಿ ಪಾತ್ರ ವಹಿಸಿದ್ದ ಹಲವು ಅನ್ಯ ಜನಪ್ರಿಯ ನಟರು ಇದೀಗ ಮತ್ತೆ ಒಂದು ವಿಶಿಷ್ಟವಾದ 1 ಗಂಟೆ 40 ನಿಮಿಷಗಳ ಶೋನಲ್ಲಿ ಪಾತ್ರ ವಹಿಸಿದ್ದಾರೆ. ತೆರೆಯ ಮೇಲೆ ‘ಫ್ರೆಂಡ್ಸ್​ : ದ ರಿಯೂನಿಯನ್’ ಹೆಸರಲ್ಲಿ ಪ್ರಕಟವಾಗುತ್ತಿರುವ ಈ ವಿಶೇಷ ಸಂಚಿಕೆ, ಭಾರತದಲ್ಲಿ ಇಂದು ಮಧ್ಯಾಹ್ನದಿಂದ ಜೀ5 ಪ್ರೀಮಿಯಂನಲ್ಲಿ ವೀಕ್ಷಣೆಗೆ ಲಭ್ಯವಾಗಿದೆ.

    ಈ ಶೋನ ಆರೂ ಮುಖ್ಯ ನಟರಿಗೆ ಆ ಕಾಲಕ್ಕೇ ಅತಿ ಹೆಚ್ಚು ಸಂಭಾವನೆ ನೀಡುತ್ತಿದ್ದರು. ಇನ್ನು ಈಗ ಹಲವರು ಹಾಲಿವುಡ್​ನಲ್ಲೂ ಹೆಸರು ಮಾಡಿರುವ ಹಿನ್ನೆಲೆಯಲ್ಲಿ ಭಾರೀ ಸಂಭಾವನೆ ನೀಡಿಯೇ ಒಗ್ಗೂಡಿಸಲಾಗಿದೆ ಎನ್ನಲಾಗಿದೆ. ಹಾಲಿವುಡ್ ಸಿನಿಪತ್ರಿಕೆಗಳ ಪ್ರಕಾರ, ಪಾತ್ರವರ್ಗಕ್ಕೆ ಈ ಸಂಚಿಕೆಗಾಗಿ ತಲಾ 2.5 ಮಿಲಿಯನ್ ಡಾಲರ್​(18.2 ಕೋಟಿ ರೂ.)ಗೂ ಹೆಚ್ಚು ಸಂಭಾವನೆ ನೀಡಿದ್ದಾರೆ! (ಏಜೆನ್ಸೀಸ್)

    ಗ್ಯಾಂಗ್​​ಸ್ಟರ್ ಕಾಲಾ ಜತೇದಿ ಸೋದರನೊಂದಿಗೆ ಸುಶೀಲ್​ ಕುಮಾರ್ !

    2.11 ಲಕ್ಷ ಹೊಸ ಕರೊನಾ ಪ್ರಕರಣ ; ತಮಿಳುನಾಡಿನದೇ ಹೆಚ್ಚು ಪಾಲು

    ಜನಹಿತ ಕಾಪಾಡೋದು ನನ್ನ ಆದ್ಯತೆ, ಬೇರೆ ಕಡೆ ಗಮನ ಇಲ್ಲ : ಬಿಎಸ್​ವೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts