More

    2.11 ಲಕ್ಷ ಹೊಸ ಕರೊನಾ ಪ್ರಕರಣ ; ತಮಿಳುನಾಡಿನದೇ ಹೆಚ್ಚು ಪಾಲು

    ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2.11 ಲಕ್ಷ ಹೊಸ ಕರೊನಾ ಪ್ರಕರಣಗಳು ಮತ್ತು 3,847 ಕರೊನಾ ಸಾವುಗಳು ವರದಿಯಾಗಿವೆ. ಕರೊನಾ ನಿತ್ಯ ಪ್ರಕರಣಗಳ ಸಂಖ್ಯೆ ಮತ್ತೆ ಸ್ವಲ್ಪ ಏರಿಕೆಯಾಗಿದ್ದರೆ, ಸಾವುಗಳ ಸಂಖ್ಯೆ 4,000 ದ ಮಟ್ಟದಿಂದ ಕೆಳಗಿಳಿದಿದೆ. ತಮಿಳುನಾಡು ಮತ್ತು ಕೇರಳ ರಾಜ್ಯಗಳು ಗರಿಷ್ಠ ಮಟ್ಟದಲ್ಲಿ ಹೊಸ ಪ್ರಕರಣಗಳನ್ನು ದಾಖಲಿಸಿವೆ.

    ನಿನ್ನೆ (ಮೇ 26) ಅತಿಹೆಚ್ಚು ಕರೊನಾ ಪ್ರಕರಣಗಳನ್ನು ದಾಖಲಿಸಿದ ಟಾಪ್ ಫೈವ್ ರಾಜ್ಯಗಳೆಂದರೆ, ತಮಿಳುನಾಡು 33,764 ಪ್ರಕರಣಗಳು, ಕೇರಳ – 28,798 ಪ್ರಕರಣಗಳು, ಕರ್ನಾಟಕ – 26,811 ಪ್ರಕರಣಗಳು, ಮಹಾರಾಷ್ಟ್ರ – 24,752 ಪ್ರಕರಣಗಳು ಮತ್ತು ಆಂಧ್ರ ಪ್ರದೇಶ – 18,285 ಪ್ರಕರಣಗಳು. ಒಟ್ಟು 2,11,298 ಹೊಸ ಪ್ರಕರಣಗಳಲ್ಲಿ, ಶೇ. 62.66 ರಷ್ಟು ಈ ಐದು ರಾಜ್ಯಗಳಿಂದ ವರದಿಯಾಗಿದ್ದರೆ, ತಮಿಳುನಾಡು ಒಂದೇ ಶೇ.15.98 ರಷ್ಟು ಪ್ರಕರಣಗಳನ್ನು ವರದಿ ಮಾಡಿದೆ. ದೇಶದ ಈವರೆಗಿನ ಕೋವಿಡ್ ಪ್ರಕರಣ ಸಂಖ್ಯೆ ಈಗ 2,73,69,093 ತಲುಪಿದೆ.

    ಇದನ್ನೂ ಓದಿ: ಉಸಿರಾಟದ ಸಮಸ್ಯೆ ಇದ್ದರೂ ರಜೆ ಕೊಟ್ಟಿಲ್ಲವೆಂದು ಆಕ್ಸಿಜನ್‌ ಸಿಲಿಂಡರ್‌ ಸಹಿತ ಬ್ಯಾಂಕ್‌ಗೆ ಬಂದ ಉದ್ಯೋಗಿ!

    ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಸಂಭವಿಸಿದ 3,847 ಸಾವುಗಳಲ್ಲಿ, ಮಹಾರಾಷ್ಟ್ರದಲ್ಲಿ 992 ಸಾವು ಸಂಭವಿಸಿದ್ದರೆ, ಕರ್ನಾಟಕದಲ್ಲಿ 530 ಸಾವು ಸಂಭವಿಸಿವೆ. ಭಾರತದ ಒಟ್ಟು ಕರೊನಾ ಸಾವಿನ ಸಂಖ್ಯೆ 3,15,235 ಕ್ಕೆ ತಲುಪಿದೆ. ನಿನ್ನೆ 2,83,135 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​ ಹೊಂದಿದ್ದು, ಒಟ್ಟು ಗುಣಮುಖರ ಸಂಖ್ಯೆ 2,46,33,951 ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 24,19,907 ರಷ್ಟಿದೆ. (ಏಜೆನ್ಸೀಸ್)

    32 ಕರೊನೇತರ ರೋಗಿಗಳಲ್ಲಿ ಬ್ಲ್ಯಾಕ್​ ಫಂಗಸ್​ ಪತ್ತೆ !

    ಭರವಸೆ ಕಳೆದುಕೊಳ್ಳಬೇಡಿ, ಧೈರ್ಯವಾಗಿರಿ : ‘ಆರ್ಮಿ’ಗೆ ಬಿಟಿಎಸ್​​ ಸಂದೇಶ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts