More

    32 ಕರೊನೇತರ ರೋಗಿಗಳಲ್ಲಿ ಬ್ಲ್ಯಾಕ್​ ಫಂಗಸ್​ ಪತ್ತೆ !

    ಚಂಡೀಗಢ : ಪಂಜಾಬಿನಲ್ಲಿ 32 ಕರೊನೇತರ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್​ ಖಾಯಿಲೆ ಕಂಡುಬಂದಿದೆ. ಈ ಜನರಿಗೆ ಅನ್ಯ ರೋಗಗಳ ಚಿಕಿತ್ಸೆಗಾಗಿ ಸ್ಟಿರಾಯ್ಡ್​ಗಳನ್ನು ನೀಡಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

    ರಾಜ್ಯದಲ್ಲಿ 158 ಮ್ಯೂಕರ್​ಮೈಕೋಸಿಸ್(ಬ್ಲ್ಯಾಕ್​ ಫಂಗಸ್​) ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 32 ರೋಗಿಗಳಿಗೆ ಕರೊನಾ ಸೋಂಕಿನ ಇತಿಹಾಸವಿಲ್ಲ. ಇದು ಕರೊನಾದಿಂದಾಗಿ ಈ ಖಾಯಿಲೆ ಉಂಟಾಗುತ್ತಿದೆ ಎಂಬ ಅಭಿಪ್ರಾಯಕ್ಕೆ ವಿರುದ್ಧವಾಗಿದ್ದು, ಅತಿಯಾದ ಸ್ಟಿರಾಯ್ಡ್​ ಬಳಕೆಯೇ ಮುಖ್ಯ ಕಾರಣ ಎಂಬುದಕ್ಕೆ ಪುಷ್ಟಿ ನೀಡುತ್ತದೆ ಎಂದು ವೈದ್ಯರು ಹೇಳಿದ್ದಾರೆ.

    ಇದನ್ನೂ ಓದಿ: ಕೋವಿಡ್​ ಸೋಂಕಿತರ ಕುಟುಂಬಸ್ಥರಿಗೆ ಸ್ಥಳೀಯರ ಕಿರುಕುಳ.. ಬೆಂಕಿ ಹಚ್ಚಿಕೊಂಡು ಸಾಯ್ತೀವಿ… ಕಣ್ಣೀರಿಟ್ಟ ಮಹಿಳೆಯರು

    ರೋಗನಿರೋಧಕ ಶಕ್ತಿಯು ಕಡಿಮೆಯಾಗಿರುವ ಯಾವುದೇ ವ್ಯಕ್ತಿಗೆ ಬ್ಲ್ಯಾಕ್​ ಫಂಗಸ್​ನ ಸೋಂಕು ತಗುಲಬಹುದು ಎಂದು ನೋಡಲ್ ಅಧಿಕಾರಿ ಡಾ. ಗಗನ್​ದೀಪ್​ ಸಿಂಗ್ ಹೇಳಿದ್ದಾರೆ. “ಬ್ಲ್ಯಾಕ್ ಫಂಗಸ್​ ಸಾಂಕ್ರಾಮಿಕವಲ್ಲ ಮತ್ತು ಮುಂಚಿನ ಹಂತಗಳಲ್ಲಿ ವರದಿಯಾಗಿ ರೋಗಿಗಳು ಚಿಕಿತ್ಸೆ ಪಡೆಯಲಾರಂಭಿಸಿದರೆ ಅದನ್ನು ಗುಣಪಡಿಸಬಹುದು. ಯಾವುದೇ ರೋಗಕ್ಕಾಗಿ ಅತಿಯಾದ ಸ್ಟಿರಾಯ್ಡ್​ ಡೋಸ್​ಗಳನ್ನು ಪಡೆದಿರುವ ವ್ಯಕ್ತಿಗಳು ಈ ಫಂಗಸ್​ಗೆ ತುತ್ತಾಗಬಹುದು” ಎಂದಿದ್ದಾರೆ.

    ಪಂಜಾಬ್‌ನ ಕೋವಿಡ್ ಎಕ್ಸ್‌ಪರ್ಟ್ ತಂಡದ ಮುಖ್ಯಸ್ಥ ಡಾ.ಕೆ.ಕೆ.ತಲ್ವಾರ್ ಅವರು ಕೋವಿಡ್ ಚಿಕಿತ್ಸೆಯಲ್ಲಿ ಅತಿಯಾದ ಸ್ಟೀರಾಯ್ಡ್‌ಗಳ ಬಳಕೆಯು ಸಮಸ್ಯೆ ಉಂಟುಮಾಡುತ್ತಿರುವುದರಿಂದ ರಾಜ್ಯದಲ್ಲಿ ಪರ್ಯಾಯ ಚಿಕಿತ್ಸೆಯ ಪ್ರಯತ್ನಗಳು ನಡೆಯುತ್ತಿವೆ ಎಂದಿದ್ದಾರೆ. (ಏಜೆನ್ಸೀಸ್) 

    ಮಾಸ್ಕ್​ ಧರಿಸದೆ ಮುಂಬೈ ಜನ ಎಷ್ಟು ಕೋಟಿ ದಂಡ ಕಟ್ಟಿದ್ದಾರೆ ಗೊತ್ತ ?!

    ಮಾಂಸ ಕಡಿಯುವ ಕತ್ತಿಯಿಂದ ಅಣ್ಣ ಅತ್ತಿಗೆಯನ್ನು ಕೊಚ್ಚಿದ; ಪುಟ್ಟ ಕಂದಮ್ಮನನ್ನೂ ಬಿಡಲಿಲ್ಲ…

    ಕರೊನಾ ಕಾಲದಲ್ಲಿ ಮನೆಗಳಲ್ಲೇ ಗಟ್ಟಿಮೇಳ ! ತುಮಕೂರು ಜಿಲ್ಲೆಯಲ್ಲಿ 2 ದಿನಗಳಲ್ಲಿ 500 ಮದುವೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts