More

    ಒಂದೂವರೆ ಸಾವಿರ ರೂಪಾಯಿ ವಿಚಾರ, 13 ಜನರು ಒಟ್ಟಾಗಿ ಒಬ್ಬನ ಕೊಂದರು; ಲಾಂಗು-ಮಚ್ಚಿನಿಂದ ಕೊಚ್ಚಿ ಕೊಲೆ..

    ಬೆಂಗಳೂರು: ಬರೀ ಒಂದೂವರೆ ಸಾವಿರ ರೂಪಾಯಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಒಬ್ಬ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ. ಅದರಲ್ಲೂ ಹದಿಮೂರು ಮಂದಿ ಒಟ್ಟಾಗಿ ಒಬ್ಬನನ್ನು ಲಾಂಗು-ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

    ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಮೆಹಬೂಬ್​ (19) ಎಂಬಾತ ಕೊಲೆಯಾಗಿದ್ದಾನೆ. ಲಲಿತ್ ಹಾಗೂ ಮಣಿಕಂಠ ಎಂಬಿಬ್ಬರ ಮಧ್ಯೆ ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು.

    ಇದನ್ನೂ ಓದಿ: ಹತ್ತು ದಿನಗಳ ಬಳಿಕ ಮತ್ತೊಂದು ಆಂಜನೇಯ ದೇವಸ್ಥಾನಕ್ಕೆ ಬೆಳ್ಳಿ ಗದೆ ಕೊಟ್ಟ ಮುಖ್ಯಮಂತ್ರಿ!

    ನಿನ್ನೆ ರಾತ್ರಿ ಎ.ಕೆ. ಕಾಲನಿ ಬಳಿ ಇಬ್ಬರ ನಡುವಿನ ಗಲಾಟೆ ಸಂದರ್ಭದಲ್ಲಿ ಲಲಿತ್ ಬಣದಲ್ಲಿ ಮೆಹಬೂಬ್ ಇದ್ದ. ಗಲಾಟೆ ಅತಿರೇಕಕ್ಕೆ ಹೋಗಿ 13 ಮಂದಿ ಒಟ್ಟಾಗಿ ಮೆಹಬೂಬ್​ನನ್ನು ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ. ಸದ್ಯ ಕೊಲೆ ಆರೋಪಿಗಳಾದ ಮಣಿಕಂಠ, ಪವನ್, ಕಿರಣ್, ಕಾರ್ತಿಕ್ ಸೇರಿ 13 ಆರೋಪಿಗಳಿಗಾಗಿ ಕೋಣನಕುಂಟೆ ಪೊಲೀಸರು ಹುಡುಕಾಟಕ್ಕೆ ಇಳಿದಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

    ‘ಕಮಾನ್ ಕಮಾನ್..’ ಎಂದು ಉಪೇಂದ್ರಗೆ ನೆನಪಿನ ಬಾಣ ಬಿಟ್ಟ ‘ಕಾಮಣ್ಣ’! ; ಅನಂತನ ಅವಾಂತರ ಮತ್ತು ಆ ಅವತಾರ…

    ‘ಒಂದು ವರ್ಷದ ಅಂತರ’ದಲ್ಲಿ ಅವಳಿ ಮಕ್ಕಳ ಜನನ!; 20 ಲಕ್ಷ ಹೆರಿಗೆಗಳಿಗೊಮ್ಮೆ ಹೀಗಾಗೋ ಸಾಧ್ಯತೆ..

    ನೀನೇ ಸಾಕಿದ ಗಿಣಿ ನಿನ್ನ ಹದ್ದಾಗಿ ಕುಕ್ಕಿತಲ್ಲೋ..; ಆರ್​ಟಿಐ ಕಾರ್ಯಕರ್ತನನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಮಹಿಳಾ ಅಧಿಕಾರಿ!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts