More

    ಹತ್ತು ದಿನಗಳ ಬಳಿಕ ಮತ್ತೊಂದು ಆಂಜನೇಯ ದೇವಸ್ಥಾನಕ್ಕೆ ಬೆಳ್ಳಿ ಗದೆ ಕೊಟ್ಟ ಮುಖ್ಯಮಂತ್ರಿ!

    ಬೆಂಗಳೂರು: ಹತ್ತು ದಿನಗಳ ಹಿಂದೆ ಆಂಜನೇಯ ದೇವಸ್ಥಾನವೊಂದಕ್ಕೆ ಗದೆಯನ್ನು ಕೊಡುಗೆಯಾಗಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದೀಗ ಮತ್ತೊಂದು ಆಂಜನೇಯ ದೇವಳಕ್ಕೆ ಗದೆಯನ್ನು ನೀಡಿದ್ದಾರೆ.

    ಹತ್ತು ದಿನಗಳ ಹಿಂದೆ ಅಂದರೆ ಡಿ. 25ರಂದು ಸಿಎಂ ಬೊಮ್ಮಾಯಿ ಅವರು ವಿಜಯಪುರ ಜಿಲ್ಲೆಯ ಮದಲಾ ಮಾರುತಿ ದೇವಸ್ಥಾನಕ್ಕೆ ಬೆಳ್ಳಿ ಗದೆಯನ್ನು ನೀಡಿದ್ದರು. ಇಂದು ಆದಿಚುಂಚನಗಿರಿ ಕ್ಷೇತ್ರದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಅವರು ಬೆಳ್ಳಿ ಗದೆಯನ್ನು ನೀಡಿದ್ದಾರೆ. ಹಾಗಂತ ಹೀಗೆ ಗದೆಯನ್ನು ನೀಡುವುದಕ್ಕೆ ಸಿಎಂ ಯಾವುದೇ ಹರಕೆಯನ್ನು ಹೇಳಿಕೊಂಡಿಲ್ಲ.
    ಮುಖ್ಯಮಂತ್ರಿಯವರಿಗೆ ಯಾರಾದರೂ ಬೆಳ್ಳಿಯ ಗದೆ ಅಥವಾ ಖಡ್ಗವನ್ನು ಕೊಡುಗೆಯಾಗಿ ನೀಡಿದರೆ ಅವರು ಅದನ್ನು ಮನೆ ಅಥವಾ ಕಚೇರಿ ತೆಗೆದುಕೊಂಡು ಹೋಗುವುದಿಲ್ಲ. ಬದಲಿಗೆ ಖಡ್ಗ ಕೊಟ್ಟರೆ ದೇವಿಯ ದೇವಸ್ಥಾನಕ್ಕೆ, ಗದೆ ಕೊಟ್ಟರೆ ಆಂಜನೇಯ ದೇವಸ್ಥಾನಕ್ಕೆ ಕೊಟ್ಟು ಬಿಡುತ್ತಾರೆ.

    ಇದನ್ನೂ ಓದಿ: ಸಾವಿರಾರು ಜನರ ಖಾತೆಗೆ ಬಂದು ಬಿತ್ತು ಭಾರಿ ಹಣ!; 75 ಸಾವಿರ ಖಾತೆಗಳಿಗೆ ಒಟ್ಟು 1,310 ಕೋಟಿ ರೂ. ಜಮೆ…

    ಡಿ. 25ರಂದು ವಿಜಯಪುರ ಜಿಲ್ಲಾ ಪಂಚಾಯಿತಿ ಹತ್ತಿರ ಹಮ್ಮಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಚಾಲನೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ ಮುಖ್ಯಮಂತ್ರಿ ಅವರಿಗೆ ಬೆಳ್ಳಿ ಗದೆ ಕಾಣಿಕೆಯಾಗಿ ನೀಡಿ ಗೌರವ ಸಮರ್ಪಿಸಿದ್ದರು. ಅದನ್ನು ಪ್ರಿತ್ಯಾದರದಿಂದಲೇ ಸ್ವೀಕರಿಸಿದ ಸಿಎಂ ಬೊಮ್ಮಾಯಿ ಬಳಿಕ ಗದೆಯನ್ನು ಸ್ಥಳೀಯ ಯಾವುದಾದರೂ ಆಂಜನೇಯ ದೇವಸ್ಥಾನಕ್ಕೆ ಸಮರ್ಪಿಸುವಂತೆ ಮನವಿ ಮಾಡಿದರು. ಹೀಗಾಗಿ ವಿಜುಗೌಡ ಪಾಟೀಲ ಅದನ್ನು ಮದಲಾ ಮಾರುತಿ ದೇವಸ್ಥಾನಕ್ಕೆ ಹಸ್ತಾಂತರಿಸಿದ್ದರು.

    ಇದನ್ನೂ ಓದಿ: ಹೆಜ್ಜೇನು ನೊಣಗಳ ಕಡಿತಕ್ಕೆ ನಿವೃತ್ತ ಅಧಿಕಾರಿ ಬಲಿ; ವಾಹನ ಪೂಜೆ ಮಾಡುತ್ತಿದ್ದಾಗ ದಾಳಿ…

    ಇಂದು ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆಯುತ್ತಿದ್ದ ಯುವಜನೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಸಚಿವ ನಾರಾಯಣ ಗೌಡ ಅವರು ಮುಖ್ಯಮಂತ್ರಿಯವರಿಗೆ ಬೆಳ್ಳಿ ಗದೆಯನ್ನು ಅರ್ಪಿಸಿ ಗೌರವ ವ್ಯಕ್ತಪಡಿಸಿದ್ದಾರೆ. ಅದನ್ನು ಸ್ವೀಕರಿಸಿದ ಸಿಎಂ ಬಳಿಕ ಅದನ್ನು ಶ್ರೀಮಠದ ಆಂಜನೇಯ ದೇವಸ್ಥಾನಕ್ಕೆ ಸಮರ್ಪಿಸಿದರು. ಯಾರಾದರೂ ಕತ್ತಿ/ಖಡ್ಗ ಕೊಟ್ಟರೆ ಆದಿಶಕ್ತಿ ದೇಗುಲಕ್ಕೆ ಕೊಡುತ್ತೇನೆ, ಗದೆ ಕೊಟ್ಟರೆ ಆಂಜನೇಯನ ದೇಗುಲಕ್ಕೆ ಕೊಡುವುದನ್ನು ರೂಢಿ ಮಾಡಿಕೊಂಡಿದ್ದೇನೆ ಎಂದರು.

    ಸಿಎಂ ಬೊಮ್ಮಾಯಿಗೆ ಯಾರಾದರೂ ಗದೆ-ಖಡ್ಗ ಉಡುಗೊರೆಯಾಗಿ ನೀಡಿದರೆ ಅವರೇನು ಮಾಡುತ್ತಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts