More

    ಮತಗಟ್ಟೆಗಳಲ್ಲಿ ಪತ್ರಕರ್ತರಿಗೆ ತೊಂದರೆ; ಎಸ್ಪಿಗೆ ಮನವಿ

    ಉಡುಪಿ: ಲೋಕಸಭಾ ಚುನಾವಣೆಯ ಮತದಾನ ಸಂದರ್ಭ ಮತಗಟ್ಟೆಗಳಲ್ಲಿ ಚುನಾವಣಾ ಆಯೋಗ ಪಾಸ್​ ಹೊಂದಿರುವ ಪತ್ರಕರ್ತರಿಗೆ ವಿಡಿಯೋ ಚಿತ್ರೀಕರಣ ಹಾಗೂ ಫೋಟೋಗ್ರಫಿ ಮಾಡಲು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್​ ಅಧಿಕಾರಿಗಳು ಚಿತ್ರೀಕರಣ ಮಾಡಲು ಅಡ್ಡಿ ಪಡಿಸಿದ್ದು, ಈ ರೀತಿ ಸಮಸ್ಯೆ ಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್​ ಅಧೀಕ್ಷಕ ಡಾ.ಅರುಣ್​ ಕೆ. ಅವರಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

    ಎ.26ರಂದು ಉಡುಪಿ -ಲೋಕಸಭಾ ಕ್ಷೇತ್ರದಲ್ಲಿ ಮತ್ತು ಮೇ 7ರಂದು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಮತಗಟ್ಟೆಗಳಲ್ಲಿ ಸೆಲೆಬ್ರೆಟಿಗಳು ಮತದಾನ ಮಾಡುವ ಸಂದರ್ಭ ಕ್ಯಾಮೆರಾಮೆನ್​ಗಳು ಹಾಗೂ ಫೋಟೋಗ್ರಫರ್​ಗಳು ಚಿತ್ರೀಕರಣ ಮತ್ತು ಫೋಟೋ ತೆಗೆಯಲು ಮುಂದಾಗಿದ್ದರು. ಚುನಾವಣಾ ಆಯೋಗ ನೀಡಿದ ಪಾಸ್​ನಲ್ಲಿ ಮತಗಟ್ಟೆ ಹೊರಗಡೆ ವಿಡಿಯೋ ಚಿತ್ರೀಕರಣ ಮಾಡಲು ಅವಕಾಶ ಕಲ್ಪಿಸಿದರೂ ಕೆಲವು ಪೊಲೀಸ್​ ಅಧಿಕಾರಿಗಳು ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಈ ಬಗ್ಗೆ ಪರಿಶೀಲಿಸಿ ಸೂಕ್ತಕ್ರಮಕೈಗೊಳ್ಳಬೇಕು. ಜೂ.4ರಂದು ನಡೆಯುವ ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಗೊಂದಲ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

    ಇದಕ್ಕೆ ಸ್ಪಂದಿಸಿದ ಎಸ್ಪಿ ಡಾ.ಕೆ.ಅರುಣ್​, ಈ ವಿಚಾರವನ್ನು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಮಾಹಿತಿ ನೀಡಬೇಕಾಗಿದೆ. ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

    ನಿಯೋಗದಲ್ಲಿ ಸಂಘದ ಅಧ್ಯಕ್ಷ ರಾಜೇಶ್​ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್​ ಪೊಲ್ಯ, ಕೋಶಾಧಿಕಾರಿ ಉಮೇಶ್​ ಮಾರ್ಪಳ್ಳಿ, ಕಾರ್ಯದರ್ಶಿಗಳಾದ ರಹೀಂ ಉಜಿರೆ, ಪ್ರಮೋದ್​ ಸುವರ್ಣ, ಮಾಜಿ ಅಧ್ಯಕ್ಷ ಜಯಕರ ಸುವರ್ಣ, ಕಮಿಟಿ ಸದಸ್ಯರಾದ ಮೈಕಲ್​ ರೋಡ್ರಿಗಸ್​, ಹರೀಶ್​ ಕುಂದರ್​, ಪತ್ರಿಕಾ ಭವನ ಸಮಿತಿಯ ಸಂಚಾಲಕ ಅಜಿತ್​ ಆರಾಡಿ, ಪತ್ರಕರ್ತರಾದ ಶಶಿಧರ್​ ಮಾಸ್ತಿಬೈಲು, ದೀಪಕ್​ ಜೈನ್​, ಪುಂಡಲೀಕ ಮರಾಠೆ, ಹರೀಶ್​ ಪಾಲೇಚಾರ್​, ಚೇತನ್​ ಮಟಪಾಡಿ, ಪರೀಕ್ಷಿತ್​ ಶೇಟ್​, ಜಸ್ಟಿನ್​ ಡಿಸಿಲ್ವ, ರಕ್ಷಿತ್​ ಬೆಳಪು, ನಾಗರಾಜ್​ ರಾವ್​, ಅವಿನ್​ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts