ಪುನೀತ್ ಸಾವಿನಿಂದ ಖಿನ್ನತೆಗೆ ಒಳಗಾಗಿ ಊಟ-ತಿಂಡಿ ಬಿಟ್ಟಿದ್ದ ಅಭಿಮಾನಿಯ ಸಾವು!

Untitled-1
Published on

ಹಾಸನ‌: ಪವರ್​ ಸ್ಟಾರ್​ ಪುನೀತ್ ರಾಜಕುಮಾರ್ ಸಾವಿಗೀಡಾಗಿ ಹತ್ತು ದಿನ ಕಳೆದರೂ ಕೆಲವು ಅಭಿಮಾನಿಗಳು ಇನ್ನೂ ಆ ಆಘಾತದಿಂದ ಹೊರಬಂದಿಲ್ಲ. ಮತ್ತೊಂದೆಡೆ ಪುನೀತ್ ಅಗಲಿಕೆಯಿಂದ ನೊಂದಿರುವ ಅಭಿಮಾನಿಗಳ ಸಾವಿನ ಪ್ರಕರಣಗಳೂ ಮುಂದುವರಿದಿವೆ.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆಬ್ಬಸಾಲೆ ಗ್ರಾಮದ ಕಮಲಾಕ್ಷ (64) ಇಂದು ಸಾವಿಗೀಡಾದ ಅಭಿಮಾನಿ. ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ಆಗಿದ್ದ ಇವರು, ಅವರ ಅಗಲಿಕೆ ಬಳಿಕ ತೀವ್ರ ಖಿನ್ನತೆಗೆ ಒಳಗಾಗಿದ್ದರು.

ಮಾತ್ರವಲ್ಲ ಕಳೆದ ಮೂರು ದಿನಗಳಲ್ಲಿ ಊಟ-ತಿಂಡಿಯನ್ನೂ ಸೇವಿಸದೆ ಚಿಂತೆಯಲ್ಲೇ ದಿನ ಕಳೆಯುತ್ತಿದ್ದರು. ಅಪ್ಪು ಅಗಲಿಕೆಯಿಂದ ತೀವ್ರವಾಗಿ ನೊಂದಿದ್ದ ಅವರು ಇಂದು ತಮ್ಮ ಮನೆಯಲ್ಲೇ ಸಾವಿಗೀಡಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net