ಎರಡು ದಿನ ಹರಸಾಹಸ ಪಟ್ಟು ಅಂತಿಮದರ್ಶನ ಪಡೆದಿದ್ದ ಪುನೀತ್​ ಅಭಿಮಾನಿ, ಹೃದಯಾಘಾತಕ್ಕೀಡಾಗಿ ಇಂದು ಸಾವು!

Sri APPU
Published on

ತುಮಕೂರು: ನಟ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ, ಹಿರೇಹಳ್ಳಿಯ ಶ್ರೀಅಪ್ಪು ಶ್ರೀನಿವಾಸ್ (32) ಎಂಬಾತ ಇಂದು ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ.
ಪುನೀತ್ ಅವರ ಅಂತಿಮ ದರ್ಶನ ಪಡೆಯಲು ಎರಡು ದಿನಗಳ ಕಾಲ ಪಡಿಪಾಟಲು ಪಟ್ಟಿದ್ದ ಶ್ರೀನಿವಾಸ್, ಕೊನೆಗೂ ಅಂತಿಮನಮನ ಸಲ್ಲಿಸಿ ಊರಿಗೆ ಮರಳಿದ ಬಳಿಕ ಎದೆನೋವು ಕಾಣಿಸಿಕೊಂಡಿತ್ತು.

ಎದೆನೋವಿನ ಕಾರಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಫಲಿಸದೆ ಮಂಗಳವಾರ ನಿಧನರಾದರು. ಅವರು ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net