

ಬೆಂಗಳೂರು: ಧೂಮಪಾನಿಗಳು ಒಂದು ಸಿಗರೇಟ್ ಸೇದುವುದರಿಂದ 22 ನಿಮಿಷದ ಅವರ ಜೀವಿತಾವಧಿಯ ಜೀವನ ಕಳೆದುಕೊಳ್ಳಲಿದೆ ಎಂದು ಯೂನಿವರ್ಸಿಟಿ ಕಾಲೇಜ್ ಲಂಡನ್(UCL) ಸಂಶೋಧಕರ ಹೊಸ ಅಧ್ಯಾಯನವೊಂದು ಇತ್ತೀಚಿಗೆ ಹೇಳಿದೆ.
ಅಧ್ಯಾಯನ ತಂಡದ ಪ್ರಕಾರ, ಒಂದು ಸಿಗರೇಟ್ನಿಂದ ಮಹಿಳೆಯರು 22 ನಿಮಿಷ ಮತ್ತು ಪುರುಷರು 17 ನಿಮಿಷದ ತಮ್ಮ ಜೀವಿತಾವಧಿ ಕಳೆದುಕೊಳ್ಳಲಿದ್ದಾರೆ. ದೀರ್ಘಾವಧಿಯ ಜನಸಂಖ್ಯೆಯ ಆರೋಗ್ಯ ದತ್ತಾಂಶವನ್ನು ಆಧರಿಸಿದ ನಡೆಸಿದ ಅಧ್ಯಯನವು, ಧೂಮಪಾನವು ಎರಡೂ(ಪುರುಷ-ಮಹಿಳೆ) ಲಿಂಗಗಳಾದ್ಯಂತ ಪ್ರತಿ ಸಿಗರೇಟಿನ ಸರಾಸರಿ 20 ನಿಮಿಷಗಳ ಜೀವನವನ್ನು ವೆಚ್ಚ ಮಾಡುತ್ತದೆ ಎಂದು ಕಂಡುಹಿಡಿದಿದೆ. ಅಲ್ಲದೆ, ಯಾರಾದರೂ ಎಷ್ಟು ಬೇಗನೆ ಧೂಮಪಾನವನ್ನು ತ್ಯಜಿಸಿದರೆ, ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸುವ ಸಾಧ್ಯತೆಗಳು ಉತ್ತಮವಾಗಿರುತ್ತವೆ ಎಂದು ಹೇಳಿದೆ.
ಉದಾ: 2025 ಜ.1ರಿಂದ ಸಿಗರೇಟ್ ಸೇವನೆ ತೊರೆದರೆ ಏನೆಲ್ಲಾ ಆಗುತ್ತದೆ ಎಂದು ಅಧ್ಯಯನ ಬಹಿರಂಗ ಪಡಿಸುತ್ತದೆ.
ಒಬ್ಬ ವ್ಯಕ್ತಿಯು ದಿನಕ್ಕೆ 10 ಸಿಗರೇಟುಗಳನ್ನು ಸೇದುವುದು ತ್ಯಜಿಸಿದ ಎಂಟು ದಿನಗಳಲ್ಲಿ ಒಂದು ಪೂರ್ಣ ದಿನದ ಜೀವನವನ್ನು ಕಳೆದುಕೊಳ್ಳುವುದನ್ನು ತಡೆಯಬಹುದು. ಫೆಬ್ರವರಿ ವೇಳೆಗೆ, ಅವರು ಹೆಚ್ಚುವರಿ ವಾರದ ಜೀವನವನ್ನು ಪಡೆಯಬಹುದು.ಆಗಸ್ಟ್ ವೇಳೆಗೆ, ಅವರು ತಮ್ಮ ಜೀವಿತಾವಧಿಯನ್ನು ಇಡೀ ತಿಂಗಳು ವಿಸ್ತರಿಸಬಹುದು ಎಂದು ವಿವರಿಸಿದೆ.
'2025ರ ಜ.1ರಂದು ಧೂಮಪಾನವನ್ನು ತ್ಯಜಿಸುವ ವ್ಯಕ್ತಿಯು, ದಿನಕ್ಕೆ 10 ಸಿಗರೇಟ್ ಸೇದುವವನು ಜನವರಿ 8 ರೊಳಗೆ ಪೂರ್ಣ ಜೀವನವನ್ನು ಕಳೆದುಕೊಳ್ಳುವುದನ್ನು ತಡೆಯಬಹುದು, ಫೆಬ್ರವರಿ 20 ರೊಳಗೆ ಒಂದು ವಾರ ಮತ್ತು ಆಗಸ್ಟ್ 5 ರೊಳಗೆ ಒಂದು ತಿಂಗಳು. ಅಂದರೆ,ವರ್ಷದ ಅಂತ್ಯದ ವೇಳೆಗೆ ಅವರು 50 ದಿನಗಳ ಜೀವನವನ್ನು ಕಳೆದುಕೊಳ್ಳುವುದನ್ನು ತಪ್ಪಿಸಬಹುದು ಅಧ್ಯಯಯನ ಬಹಿರಂಗಪಡಿಸಿದೆ'.(ಏಜೆನ್ಸೀಸ್).