ಮಹಾರಾಷ್ಟ್ರ: ಮಹಾರಾಷ್ಟ್ರದ ಜಲ್ನಾ ಮೈದಾನದಲ್ಲಿ ಕ್ರಿಕೆಟ್(Cricket) ಆಡುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದೇ ಡಿ.25 ರಂದು ಈ ಘಟನೆ ನಡೆದಿದೆ. ಮುಂಬೈ ಸಮೀಪದ ನಾಲಾ ಸೊಪಾರಾ ನಿವಾಸಿ ವಿಜಯ್ ಪಟೇಲ್(32) ಮೃತ ವ್ಯಕ್ತಿ.
ಕ್ರಿಕೆಟ್ ಕ್ರಿಸ್ನಲ್ಲಿ ಬ್ಯಾಟಿಂಗ್ ಮಾಡುವ ವಿರುದ್ಧ ದಿಕ್ಕಿನಲ್ಲಿದ್ದ ವಿಜಯ್, ರನ್ಗಾಗಿ ಓಡಿ ಬಂದು ಕ್ರಿಸ್ನಲ್ಲಿ ಕುಸಿದು ಬಿದ್ದಿದ್ದಾನೆ. ಬಳಿಕ ಮೇಲೆ ಏಳಲೇ ಇಲ್ಲ. ಇದನ್ನು ಗಮನಿಸಿದ ಅಹ ಆಟಗಾರರು ವಿಜಯ್ ಅವರನ್ನು ಎಬ್ಬಿಸಲು ಪ್ರಯತ್ನಪಟ್ಟಿದ್ದಾರೆ. ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಕ್ರೀಡಾಂಗಣದಲ್ಲಿಯೇ ಪ್ರಾಣ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಅಕ್ಕಿ ಚೀಲದಿಂದ ಟೋಟ್ ಬ್ಯಾಗ್ ಮಾಡಿದ ಮಹಿಳೆ; Viral Post ನೋಡಿ ನೆಟ್ಟಿಗರು ಹೇಳಿದ್ದೀಗೆ..
ಕ್ರಿಸ್‌ಮಸ್ ಟ್ರೋಫಿ ಪಂದ್ಯಾವಳಿಯ ಅಂಗವಾಗಿ ಪಂದ್ಯ ಆಡುತ್ತಿದ್ದಾಗ ಡಿ.25ರ ಬೆಳಗ್ಗೆ 11.30ರ ಸುಮಾರಿಗೆ ಕುಸಿದು ಬಿದ್ದಿದ್ದರು. ಹೃದಯಾಘಾತಕ್ಕೆ ಒಳಗಾಗಿರುವ ಶಂಕೆ ವ್ಯಕ್ತವಾಗಿದೆ. ಸಿಪಿಆರ್ (ಹೃದಯ ಶ್ವಾಸಕೋಶದ ಪುನಶ್ಚೇತನ) ಮೂಲಕ ಪುನಶ್ಚೇತನಗೊಳಿಸುವ ಪ್ರಯತ್ನ ವಿಫಲವಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯೊಂದು ಹೇಳಿದೆ.
ಇದನ್ನೂ ಓದಿ: ರೀಲ್ಸ್ಗಾಗಿ ವಿದ್ಯುತ್ ಕಂಬ ಏರಿದ ಮಹಿಳೆ; Viral Video ನೋಡಿ ಯಮ ಕಾಯುತ್ತಿದ್ದಾನೆ ಎಂದ ನೆಟ್ಟಿಗರು
ಈ ತಿಂಗಳ ಆರಂಭದಲ್ಲಿ ಮುಂಬೈನಲ್ಲಿ 31 ವರ್ಷದ ಟೆಕ್ಕಿಯೊಬ್ಬರು ಆಜಾದ್ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ವರದಿಗಳ ಪ್ರಕಾರ, ಬಲಿಪಶು ಎದೆನೋವಿನ ಹೊರತಾಗಿಯೂ ಆಟವಾಡುವುದನ್ನು ಮುಂದುವರೆಸಿದರು ಮತ್ತು ಅವರು ರನ್ ತೆಗೆದುಕೊಳ್ಳುತ್ತಿರುವಾಗ ಕುಸಿದು ಬಿದ್ದು ಮೃತಪಟ್ಟಿದ್ದರು.(ಏಜೆನ್ಸೀಸ್)
Tragic: 32-Year-Old Cricketer Collapses on Field Due to Heart Attack in Jalna!!#CricketTragedy #HeartAttack #JalnaCricket #CricketerCollapses #SuddenHealthEmergency #SportsNews #HeartHealth #Jalna #CricketIndia
(cricketer heart attack, Jalna cricket tragedy, 32-year-old… pic.twitter.com/dfqJqLUz6y
— Pune Mirror (@ThePuneMirror) December 30, 2024
ಸಿಡ್ನಿ ಟೆಸ್ಟ್ ಬಳಿಕ ಟೆಸ್ಟ್ಗೂ ಗುಡ್ಬೈ ಹೇಳಲಿದ್ದಾರೆ ರೋಹಿತ್! | Rohit