ಅಕ್ಕಿ ಚೀಲದಿಂದ ಟೋಟ್ ಬ್ಯಾಗ್ ಮಾಡಿದ ಮಹಿಳೆ; Viral Post ನೋಡಿ ನೆಟ್ಟಿಗರು ಹೇಳಿದ್ದೀಗೆ..

Untitled design (74)
Published on

ದುಬಾರಿ ಬೆಲೆಯ ಐಷಾರಾಮಿ ಹ್ಯಾಂಡ್​​ಬ್ಯಾಗ್​ಗಳನ್ನು ಯಾರು ಇಷ್ಟಪಡುವುದಿಲ್ಲ? ಹ್ಯಾಂಡ್‌ಬ್ಯಾಗ್‌ಗಳ ಟ್ರೆಂಡ್‌ಗಳು ಯಾವಾಗಲೂ ಬದಲಾಗುತ್ತಿರುತ್ತವೆ. ಆದರೆ ಪ್ರಸ್ತುತ ಅಮೆರಿಕದಲ್ಲಿ ಮಹಿಳೆಯರು ಅನುಸರಿಸುತ್ತಿರುವ ಟ್ರೆಂಡ್‌ಗಳ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ವಾಸ್ತವವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ವೊಂದು ವೈರಲ್​(Viral Post) ಆಗುತ್ತಿದೆ ಆ ವಿಡಿಯೋವನ್ನು ಅಮೆರಿಕದ ಮಹಿಳೆ ಅಮಂಡಾ ಜಾನ್ ಮಂಗಳತಿಲ್ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿರುವ ಮಹಿಳೆಯ ಬ್ಯಾಗ್ ಅನ್ನು ನೋಡಿ ಆಶ್ಚರ್ಯವಾಗಬಹುದು. ಮಹಿಳೆಯೊಬ್ಬರು ಬಾಸ್ಮತಿ ಅಕ್ಕಿಯ ಚೀಲವನ್ನು ಟೋಟ್​ ಬ್ಯಾಗ್​​ ಆಗಿ ಬಳಸುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಅಮಂಡಾ ಮಾತನಾಡಿ, ಭಾರತದ ನನ್ನ ಸ್ನೇಹಿತರೇ, ಲೂಯಿ ವಿಟಾನ್ ಮತ್ತು ಮೈಕೆಲ್ ಕಾರ್ಸ್, ಕೋಚ್, ಕೇಡ್ ಸ್ಪೇಡ್ ಬ್ಯಾಗ್‌ಗಳನ್ನು ಖರೀದಿಸಲು ಬಯಸುವ ಎಲ್ಲಾ ಹುಡುಗಿಯರು ಅಮೆರಿಕದಲ್ಲಿ ಟ್ರೆಂಡಿಂಗ್ ಆಗಿರುವುದನ್ನು ನೋಡಬೇಕು. ಇಂದು ನಾನು ಇದನ್ನು ನೋಡಿದ್ದೇನೆ ಮತ್ತು ನೀವು ಅದನ್ನು ತುಂಬಾ ಸುಲಭವಾಗಿ ಮತ್ತು ಕಡಿಮೆ ಬೆಲೆಗೆ ಪಡೆಯಬಹುದು ಎಂದು ಹೇಳಿದ್ದಾರೆ.

ವಿಡಿಯೋ ಕೊನೆಯಲ್ಲಿ ಮಹಿಳೆಯ ಚಿತ್ರ ಕಾಣುತ್ತದೆ. ಅದರಲ್ಲಿ ಮಹಿಳೆ ರಾಯಲ್ ಬಾಸ್ಮತಿ ಅಕ್ಕಿಯ ಚೀಲಗಳನ್ನು ಹೊಂದಿರುವ ಟೋಟ್ ಬ್ಯಾಗ್ ಅನ್ನು ಒಯ್ಯುತ್ತಾರೆ. ವಿಡಿಯೋ ನೋಡಲು https://www.instagram.com/reel/DDlnUpSxtb8/?utm_source=ig_web_copy_link ಈ ಲಿಂಕ್​​​ ಅನ್ನು ಕ್ಲಿಕ್​ ಮಾಡಿ.

ಈ ವಿಡಿಯೋವನ್ನು ಇದುವರೆಗೂ 8 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು ಹಲವರು ಪ್ರತಿಕ್ರಿಯಿಸಿದ್ದಾರೆ. ನಾನು ಈ ಅಕ್ಕಿ ಚೀಲವನ್ನು ಎಸೆದಿದ್ದೇನೆ ಅದನ್ನು ಮೊದಲೇ ಅನುಸರಿಸಬೇಕಾಗಿತ್ತು, ವಿಮಲ್ ಬ್ಯಾಗ್ ಅನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ, ನಾವು ಈ ಚೀಲವನ್ನು ಉಚಿತವಾಗಿ ಪಡೆಯಬಹುದು ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net