

ಬೆಂಗಳೂರು: ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಗಳಿಸಿರುವ ಬಿಗ್ ಬಾಸ್ ಸೀಸನ್ 11ಕ್ಕೆ (BBKS11) ಈಗಾಗಲೇ ಅದ್ಧೂರಿ ಚಾಲನೆ ದೊರಕಿದ್ದು, ಎಂದಿನಂತೆ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಅವರೇ ಈ ಬಾರಿಯೂ ನಿರೂಪಣೆ ಜವಾಬ್ದಾರಿಯನ್ನು ಹೊತ್ತಿರುವುದು ವೀಕ್ಷಕರಲ್ಲಿ ಭಾರೀ ಸಂತಸ ಮೂಡಿಸಿದೆ. ಗ್ರ್ಯಾಂಡ್ ಓಪನಿಂಗ್ (BiggBoss Kannada) ಆಗಿದ್ದೇ ತಡ ಸ್ವರ್ಗ-ನರಕಕ್ಕೆ 17 ಘಟಾನುಘಟಿ ಸ್ಪರ್ಧಿಗಳು ಇದೀಗ ಮನೆಯೊಳಗೆ ಪ್ರವೇಶಿಸಿ, ತಮ್ಮ ಅಸಲಿ ಆಟವನ್ನು ಶುರು ಮಾಡಿದ್ದಾರೆ. ಮೊದಲ ದಿನವೇ ಮನೆಯಲ್ಲಿ ಮನಸ್ತಾಪಗಳಿಗಿಂತಲೂ ಮಾತಿನ ಭರಾಟೆಯೇ ಜೋರಾಗಿದ್ದು, ಪರಸ್ಪರ ವಾಗ್ವಾದಗಳು ನೋಡುಗರ ತಲೆಕೆಡಿಸಿತು. ಸಣ್ಣ ಕಿಡಿ ಮೊದಲನೇ ವಾರಾಂತ್ಯದವರೆಗೂ ನಡೆದಿದ್ದು ಮತ್ತೊಂದು ಇತಿಹಾಸ. ಈ ಜಟಾಪಟಿಯ ರೂವಾರಿಗಳು ಲಾಯರ್ ಜಗದೀಶ್ ಮತ್ತು ಚೈತ್ರಾ ಕುಂದಾಪುರ ಎಂದು ಹೇಳಿದ್ರೆ ಖಂಡಿತ ತಪ್ಪಾಗಲಾರದು.
ಸ್ವರ್ಗ ಹಾಗೂ ನರಕನಿವಾಸಿಗಳಾಗಿ ಮನೆಯೊಳಗೆ ಆಟ ಪ್ರಾರಂಭಿಸಿರುವವರ ಪೈಕಿ ವೀಕ್ಷಕರ ಕಣ್ಣು-ತಲೆಯಲ್ಲಿ ಸೇರಿಕೊಂಡಿರುವುದು ಚೈತ್ರಾ ಮತ್ತು ಜಗದೀಶ್ ಮಾತ್ರ ಎಂದೇ ಹೇಳಬಹುದು. ಕಾರಣ, ಇವರಿಬ್ಬರ ಮಾತಿನ ಭರಾಟೆ ಒಂದು ಬಾರಿ ಶುರುವಾದರೆ ಅಷ್ಟು ಸುಲಭವಾಗಿ ಮುಕ್ತಾಯ ಕಾಣುವುದಿಲ್ಲ. ಮನೆಯವರಿಗೂ ಕಿರಿಕಿರಿ ತಪ್ಪುವುದಿಲ್ಲ. ಈ ಸೀಸನ್ನಲ್ಲಿ ಇವರಿಬ್ಬರನ್ನು ಮಾತಿನಲ್ಲಿ ಮೀರಿಸುವವರು ಯಾರೂ ಇಲ್ಲ ಎಂಬುದು ನೋಡುಗರಲ್ಲಿ ಈಗಾಗಲೇ ಒಂದು ಚಿತ್ರಣ ದೊರಕಿದೆ. ಹಲವರು ಮನೆಯನ್ನು ಅಲ್ಲೋಲ-ಕಲ್ಲೋಲ ಮಾಡಲು ಚೈತ್ರಾ ಮತ್ತು ಜಗದೀಶ್ ಇಬ್ಬರೇ ಸಾಕು ಎಂದು ಜಾಲತಾಣಗಳಲ್ಲಿ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಇದೇ ರೀತಿ ಈ ಹಿಂದಿನ ಸೀಸನ್ಗಳಲ್ಲಿಯೂ ಧ್ವನಿ ಏರಿಸಿದ ಸ್ಪರ್ಧಿಗಳು ನಮಗೆ ಕಾಣ ಸಿಕ್ಕಿದ್ದಾರೆ.
ಕಳೆದ ವಾರದ ಸಂಚಿಕೆಗಳಲ್ಲಿ ಲಾಯರ್ ಜಗದೀಶ್ ಮತ್ತು ಚೈತ್ರಾ ಕುಂದಾಪುರ ಆರ್ಭಟ ನೋಡಿದ ನಂತರ ಜಾಲತಾಣಗಳಲ್ಲಿ ಹಲವರು ಹಿಂದಿನ ಸೀಸನ್ಗಳ ಕೆಲವು ಸ್ಪರ್ಧಿಗಳನ್ನು ನೆನಪಿಸಿಕೊಂಡಿದ್ದಾರೆ. ಈ ಸಾಲಿನಲ್ಲಿ ಸೀಸನ್ 1ರಿಂದ 11ರವರೆಗಿನ ಸ್ಪರ್ಧಿಗಳಿದ್ದಾರೆ ಎಂಬುದೇ ಗಮನಾರ್ಹ. ಬಿಗ್ ಮನೆಯಲ್ಲಿ ಅತೀ ಹೆಚ್ಚು ಜಗಳ ಮಾಡಿಕೊಂಡ ಮತ್ತು ಜಗಳವಾಡಿದ ಸ್ಪರ್ಧಿಗಳು ಒಂದು ಸೀಸನ್ನಲ್ಲಿ ಒಂದೇ ಸೂರಿನಡಿ ಇದ್ದರೆ ಏನ್ನೆಲ್ಲಾ ಆಗಬಹುದು ಎಂಬ ಮಾತುಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಸಲಿಗೆ ಯಾವ ಕಂಟೆಸ್ಟೆಂಟ್ಗಳ ಹೆಸರುಗಳು ಈ ಪಟ್ಟಿಯಲ್ಲಿ ಕೇಳಿಬಂದಿವೆ ಎಂಬುದು ಈ ಕೆಳಕಂಡಂತಿದೆ ನೋಡಿ. ಈ ಹೆಸರುಗಳನ್ನು ನೋಡಿದ ಮೇಲೆ ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕಮೆಂಟ್ ಮಾಡಿ ತಿಳಿಸಿ.
ಬಿಗ್ಬಾಸ್ ಸೀಸನ್ 04ರ ವಿನ್ನರ್ ಪ್ರಥಮ್
ಬಿಗ್ಬಾಸ್ ಸೀಸನ್ 08ರ ಫೈನಲಿಸ್ಟ್ ಪ್ರಶಾಂತ್ ಸಂಬರಗಿ
ಬಿಗ್ಬಾಸ್ ಸೀಸನ್ 10ರ ಎರಡನೇ ರನ್ನರ್ ಅಪ್ ಸಂಗೀತಾ ಶೃಂಗೇರಿ
ಬಿಗ್ಬಾಸ್ ಸೀಸನ್ 03ರ ಹುಚ್ಚ ವೆಂಕಟ್
ಬಿಗ್ಬಾಸ್ ಸೀಸನ್ 11: ಲಾಯರ್ ಜಗದೀಶ್ ಮತ್ತು ಚೈತ್ರಾ ಕುಂದಾಪುರ