ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಕೇವಲ ಒಂದು ರಾಜ್ಯ ಮಾತ್ರವಲ್ಲ ಅದೊಂದು ಕುಟುಂಬ. ನಮ್ಮ ಕನ್ನಡನಾಡು ಕನ್ನಡಿಗರಿಗಷ್ಟೇ ಸೀಮಿತವಾಗದೆ ಇತರೆ ಜಿಲ್ಲೆ, ರಾಜ್ಯ, ದೇಶ-ವಿದೇಶಗಳ ಜನರಿಗೆ ಸೂರು ಆಗಿದೆ, ಆಸರೆಯೂ ಆಗಿದೆ. ಉದ್ಯಮ, ಶಿಕ್ಷಣ ಹೀಗೆ ನಾನಾ ಉದ್ದೇಶಗಳನ್ನು ಹೊತ್ತು ಸಿಲಿಕಾನ್ ಸಿಟಿಗೆ ಆಗಮಿಸುವ ಅದೆಷ್ಟೋ ಸಂಖ್ಯೆಯ ವಲಸಿಗರು, ತಮ್ಮ ಧ್ಯೇಯದಲ್ಲಿ ಯಶಸ್ಸನ್ನು ಕಂಡು, ಬೆಂಗಳೂರಿನಲ್ಲೇ ನೆಲೆ ಕಂಡಿದ್ದಾರೆ. ದೊಡ್ಡ ಕನಸನ್ನು ಕಾಣುತ ಬೆಂದಕಾಳೂರಿಗೆ ಕೆಂಪು ಬಸ್ ಹಿಡಿದು ಬಂದವರ ಪೈಕಿ ಇಂದು ಸಾಧನೆ ಮಾಡಿದವರು ಅಪಾರ. ಕನ್ನಡ ನೆಲ, ಜಲ, ಸೂರು, ಆಹಾರ, ಸಂಸ್ಕೃತಿಗೆ ಫುಲ್ ಖುಷ್ ಆಗುವ ವಲಸಿಗರು, ಇಲ್ಲಿನ ಭಾಷೆ ಕಲಿಯುವುದರ ಬಗ್ಗೆ ಕೇಳಿದರೆ ಮಾತ್ರ ಉಸಿರಗಟ್ಟಿದವರಂತೆ ಆಡ್ತಾರೆ. ಕನ್ನಡ ಭಾಷೆ ಕಲಿಕೆ ಬಿಟ್ಟು ಬೇರೆ ಯಾವ ವಿಷಯದ ಬಗ್ಗೆ ಕೇಳಿದ್ರೆ ಉತ್ಸಾಹ ವ್ಯಕ್ತಪಡಿಸುವ ಹೊರಗಿನವರು, ಇಲ್ಲಿನ ಭಾಷೆ ಕಲಿಯಬಹುದಾ ಎಂದು ಹೇಳಿದ್ರೆ ಸಾಕು, ಬೆಂಗಳೂರು ಸರಿಯಿಲ್ಲ. ನಾವಿಲ್ಲ ಅಂದರೆ ಸಿಲಿಕಾನ್ ಸಿಟಿಯೇ ಇಲ್ಲ ಎಂಬ ದುರಹಂಕಾರದ ಮಾತುಗಳನ್ನು ಆಡುತ್ತಾರೆ (Viral Video). ಇದು ಇತ್ತೀಚಿನ ದಿನಗಳಲ್ಲಿ ನಾವು-ನೀವು ನೋಡಿ, ಕೇಳುತ್ತಿರುವ ತೀರ ಸಾಮಾನ್ಯ ವಿಷಯ ಎಂದೇ ಹೇಳಬಹುದು.
ಇದಕ್ಕೆ ಸುಗಂಧ ಶರ್ಮ ಉತ್ತಮ ಉದಾಹರಣೆ
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಉತ್ತರ ಭಾರತದ ಸುಗಂಧ ಶರ್ಮ ಎಂಬ ಮಹಿಳೆ, ಬೆಂಗಳೂರು ಕುರಿತು ಅಸಭ್ಯವಾಗಿ, ದುರಹಂಕಾರದ ಮಾತುಗಳನ್ನಾಡಿದ ಒಂದು ವಿಡಿಯೋವನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ದೃಶ್ಯ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಇಂಟರ್ನೆಟ್ನಲ್ಲಿ ಬೆಂಕಿ ಹತ್ತಿಕೊಂಡಿದ್ದು, ಕನ್ನಡಿಗರು ಸಿಡಿದೇಳುವಂತೆ ಮಾಡಿತು. ಉತ್ತರ ಭಾರತದವರು ಇಲ್ಲ ಎಂದರೆ ಬೆಂಗಳೂರಿನ ಯಾವ ಪಬ್ಗಳು, ಹೋಟೆಲ್ಗಳಲ್ಲಿಯೂ ಜನ ಇರುವುದಿಲ್ಲ. ಎಲ್ಲವೂ ಖಾಲಿ ಖಾಲಿ ಎಂದು ವ್ಯಂಗ್ಯವಾಡಿದ್ದರು. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಎಚ್ಚೆತ್ತುಕೊಂಡ ಕನ್ನಡಿಗರು, ನಿಮ್ಮಂತವರು ನಮ್ಮ ರಾಜ್ಯದಲ್ಲಿರಲು ಲಾಯಕ್ಕಿಲ್ಲ. ಈಗಲೇ ಬೆಂಗಳೂರು ಬಿಟ್ಟು ತೊಲಗಿ ಎಂದು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು.
ಕನ್ನಡಿಗರ ಕೆಂಗಣ್ಣಿಗೆ ತುತ್ತಾದ ಸುಗಂಧ ಶರ್ಮ, ಅಂತಿಮವಾಗಿ ಮತ್ತೊಂದು ವಿಡಿಯೋ ಹಂಚಿಕೊಳ್ಳುವ ಮೂಲಕ ಕನ್ನಡಿಗರಲ್ಲಿ ಕ್ಷಮಾಪಣೆ ಕೋರಿದರು. ನಾನು ಬೆಂಗಳೂರಿನ ಬಗ್ಗೆ ಮನಬದಂತೆ, ಅಸಭ್ಯವಾಗಿ ಮಾತನಾಡಿದ್ದಕ್ಕೆ ಇಡೀ ಕರ್ನಾಟಕ ಜನತೆ ಮುಂದೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು. ಈ ವಿಡಿಯೋ ಬಳಿಕ ಕೆಲವರು ಕ್ಷಮೆ ಒಪ್ಪಿಕೊಂಡರೆ, ಇನ್ನೂ ಕೆಲವರು ಇಷ್ಟೆಲ್ಲ ಮಾತನಾಡಿದ ನಂತರ ಆಕೆಯನ್ನು ಮನ್ನಿಸುವ ಮಾತೇ ಇಲ್ಲ, ಬೆಂಗಳೂರು ಬಿಟ್ಟು ಹೊರಡಲಿ ಎಂದೇ ಕಟುವಾಗಿ ಮಾತನಾಡಿದರು. ಈ ರೀತಿ ರಾಜಧಾನಿ ಬಗ್ಗೆ ಕೆಟ್ಟದಾಗಿ ಮಾತನಾಡಿದವರಲ್ಲಿ ಸುಗಂಧ ಶರ್ಮ ಅವರೇ ಮೊದಲೇನಲ್ಲ. ಈ ಹಿಂದೆ ಇಂತಹ ದುರಂಹಕಾರದ ಮಾತುಗಳನ್ನಾಡಿದವರು ಬಹಳ ಜನರಿದ್ದಾರೆ.
ಬೆಂಗಳೂರು ಪ್ರೀತಿಸುವ ಹೊರ ರಾಜ್ಯದ ಯುವತಿ
ಇತ್ತೀಚೆಗಷ್ಟೇ ತನ್ನ ಸ್ನೇಹಿತೆಯೊಂದಿಗೆ ಆಟೋದಲ್ಲಿ ತೆರಳುತ್ತಿದ್ದ ಯುವತಿಯೊಬ್ಬಳು ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದಳು. ಇದೇ ಸಂದರ್ಭದಲ್ಲಿ ಫುತ್ಪಾತ್ನಲ್ಲಿ ಕೆಲವರು ಕುಣಿಯುವುದನ್ನು ನೋಡಿ ಯುವತಿ ಆಟೋ ಇಳಿದು ಅವರೊಂದಿಗೆ ಸೇರಿ ಸೊಂಟ ಬಳುಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೇವಲ ವಿಡಿಯೋಗೆ ಮಾತ್ರ ಫಿದಾ ಆಗದ ಕನ್ನಡಿಗರು ಆಕೆ ಬರೆದ ಈ ಸಾಲುಗಳಿಗೆ ಮೆಚ್ಚಿಕೊಂಡಿದ್ದಾರೆ. ದೃಶ್ಯದಲ್ಲಿ ಮನಬಿಚ್ಚಿ ಡ್ಯಾನ್ಸ್ ಮಾಡಿದ ಹುಡುಗಿಯ ಹೆಸರು ಶರಣ್ಯ ಮೋಹನ್. ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಡಾನ್ಸ್ ಮಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾಳೆ. ವಿಡಿಯೋದಲ್ಲಿ ಆಕೆ ಕೂಲ್ ಆಗಿ, ತನ್ನದೇಯಾದ ಸ್ಟೈಲ್‌ನಲ್ಲಿ ಇತರ ಜನರೊಂದಿಗೆ ರಸ್ತೆಬದಿಯಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಕುಣಿದು ಕುಪ್ಪಳಿಸಿರುವುದನ್ನು ದೃಶ್ಯದಲ್ಲಿ ಕಾಣಬಹುದು.
ಆಕೆ ಬರೆದು ಸಾಲುಗಳಿವು
“ಈ ಎಲ್ಲ ವರ್ಷಗಳಲ್ಲಿ ಬೆಂಗಳೂರು ನನ್ನನ್ನು ವಿಸ್ಮಯಗೊಳಿಸುವುದರಲ್ಲಿ ಎಂದಿಗೂ ವಿಫಲವಾಗಿಲ್ಲ ಮತ್ತು ನಾನು ಕಾಲಕಾಲಕ್ಕೆ ಅನನ್ಯ ಅನುಭವಗಳನ್ನು ಇಲ್ಲಿ ಹೊಂದಿದ್ದೇನೆ. ನನ್ನ ಮನೆಯಿಂದ ದೂರವಿದ್ದರೂ ನನ್ನ ಮನೆಯಂತಿರುವ ಮತ್ತು ನನ್ನ ಜೀವನದಲ್ಲಿ ಆರೋಗ್ಯಕರ ಅನುಭವಗಳನ್ನು ನೀಡಿದ ಬೆಂಗಳೂರಿಗೆ ಧನ್ಯವಾದಗಳು” ಎಂದು ಶರಣ್ಯಾ ಬರೆದುಕೊಂಡಿದ್ದಾರೆ. ವೈರಲ್ ಯುವತಿಯ ಸಾಲುಗಳಿಗೆ ಮೆಚ್ಚಿದ ಕನ್ನಡಿಗರು, ಸುಗಂಧ ಶರ್ಮ ಆಡಿದ ದುರಂಹಕಾರದ ಮಾತುಗಳನ್ನು ಇಲ್ಲೊಮ್ಮೆ ನೆನಪಿಸಿದ್ದಾರೆ. ಇಲ್ಲಿನ ನೆಲ, ಜಲ, ಗಾಳಿ ಸ್ವೀಕರಿಸಿ ನಂತರ ಬೆಂಗಳೂರಿನ ಬಗ್ಗೆಯೇ ಅಸಡ್ಡೆಯಿಂದ ಮಾತನಾಡುವವರ ಮಧ್ಯೆ ಇಂತವರ ಮಾತುಗಳು ನಿಜಕ್ಕೂ ಖುಷಿ ಕೊಡುತ್ತದೆ ಎಂದು ಅನೇಕರು ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ಗಿನ್ನಿಸ್ ದಾಖಲೆಗೆ ಸೇರಿತು ರೇಡಿಯೋ ಮ್ಯೂಸಿಯಂ! ಇಲ್ಲಿರುವ ಒಟ್ಟು ಟೇಪ್ ರೆಕಾರ್ಡರ್ ಸಂಖ್ಯೆ ಎಷ್ಟು ಗೊತ್ತೇ?