ರಸ್ತೆ ದಾಟುವಾಗ ಕಾರು ಡಿಕ್ಕಿಯಾಗಿ 114 ವರ್ಷದ ಮ್ಯಾರಥಾನ್ ಓಟಗಾರ ಫೌಜ್ ಸಿಂಗ್ ಸಾವು: NRI ಬಂಧನ! Fauja Singh

Fauja Singh
Published on

Fauja Singh : ಭೀಕರ ರಸ್ತೆ ಅಪಘಾತದಲ್ಲಿ 114 ವರ್ಷದ ‘ಟರ್ಬನ್ಡ್ ​ಟೊನಾರ್ಡೋ’ ಎಂದೇ ಜನಪ್ರಿಯರಾಗಿದ್ದ ಮ್ಯಾರಥಾನ್ ಓಟಗಾರ ಫೌಜ್ ಸಿಂಗ್ ಸಾವಿಗೀಡಾಗಿದ್ದಾರೆ.

ಜಲಂಧರ್-ಪಠಾಣ್​ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಹಟ್ಟೂರು ಗ್ರಾಮದ ರಸ್ತೆ ದಾಟುವಾಗ ಕಾರು ಡಿಕ್ಕಿಯಾಗಿ 114 ವರ್ಷದ ಫೌಜ್ ಸಿಂಗ್ ತಲೆಗೆ ತೀವ್ರ ಪೆಟ್ಟಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲೇ ಫೌಜ್ ಸಿಂಗ್ ಮೃತಪಟ್ಟಿದ್ದಾರೆ.

ಹಿಟ್ ಅಂಡ್ ರನ್ ಕೇಸ್​ನಲ್ಲಿ ಜಲಂಧರ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೆನಡಾದ ಎನ್​ಆರ್​ಐ ಅಮೃತಪಾಲ್ ಸಿಂಗ್ ದಿಲ್ಲೋನ್ ಎಂಬ ಆರೋಪಿಯನ್ನ ಬಂಧಿಸಿದ್ದು, ಟೊಯೋಟಾ ಫಾರ್ಚನೂರ್ ಕಾರ್​ನ ವಶಕ್ಕೆ ಪಡೆದಿದ್ದಾರೆ.

ಆರೋಪಿ ಅಮೃತ್​ಪಾಲ್ ಸಿಂಗ್ ಕೆನಡಾ ನಿವಾಸಿಯಾಗಿದ್ದು, ವಾರದ ಮುಂಚೆ ತನ್ನ ಹುಟ್ಟೂರು ಕರ್ತಾಪುರದ ದಾಸಪುರಕ್ಕೆ ಬಂದಿದ್ದ. ಆದಂಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಫೌಜ್ ಸಿಂಗ್ 1911ರಲ್ಲಿ ಪಂಜಾಬ್​ನ ಜಲಂಧರ್​ನಲ್ಲಿ ಜನಸಿದ್ದು ತಮ್ಮ 80ನೇ ವಯಸ್ಸನಲ್ಲಿ ಮ್ಯಾರಥಾನ್ ಓಟವನ್ನ ಪ್ರಾರಂಭಿಸಿದರು. 2000ರಲ್ಲಿ ಲಂಡನ್​ನಲ್ಲಿ ನಡೆದ ಮ್ಯಾರಥಾನ್ ಓಟದಲ್ಲಿ ಭಾಗವಹಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದರು.

2011ರಲ್ಲಿ 100 ವರ್ಷದವರಾಗಿದ್ದ ಫೌಜ್ ಸಿಂಗ್ ಟೊರೊಂಟೋ ವಾಟರ್ ಫ್ರಂಟ್ ಮ್ಯಾರಥಾನ್​ನಲ್ಲಿ 42 ಕಿಮೀ ಓಟವನ್ನ 8 ಗಂಟೆ 35 ನಿಮಿಷದಲ್ಲಿ ಪೂರ್ಣಗೊಳಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net