

ಗುರುರಾಜ್ ಬಿ.ಎಸ್. ಬೆಂಗಳೂರು
ಭಾರತ ಟೆಸ್ಟ್ ತಂಡ ಹಾಗೂ ಐಪಿಎಲ್ 18ನೇ ಆವೃತ್ತಿಯ ಚಾಂಪಿಯನ್ ಆರ್ಸಿಬಿ ತಂಡದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ 4ನೇ ಆವೃತ್ತಿಯ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಗರಿಷ್ಠ ₹13.20 ಲಕ್ಷ ರೂಪಾಯಿಗಳಿಗೆ ಸೇಲಾಗುವ ಮೂಲಕ ದುಬಾರಿ ಆಟಗಾರ ಎನಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್ ಪರ ಆಡಿದ್ದ ಪಡಿಕ್ಕಲ್ ಈ ಬಾರಿ ಹುಬ್ಬಳ್ಳಿ ಟೈಗರ್ ತಂಡ ಸೇರಿದರು. ಸ್ಫೋಟಕ ಬ್ಯಾಟರ್ ಅಭಿನವ್ ಮನೋಹರ್ ಹಾಗೂ ಅನುಭವಿ ಮನೀಷ್ ಪಾಂಡೆ ತಲಾ ₹12.20 ಲಕ್ಷಕ್ಕೆ ಕ್ರಮವಾಗಿ ಹುಬ್ಬಳ್ಳಿ ಟೈಗರ್ಸ್, ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ತಂಡ ಪಾಲಾದರು. ಟೀಮ್ ಇಂಡಿಯಾ ಮಾಜಿ ಕೋಚ್, ದಿಗ್ಗಜ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಅನ್ಸೋಲ್ಡ್ ಆಗಿ ಉಳಿದರು.
ಆಗಸ್ಟ್ 11ರಿಂದ 27ರವರೆಗೆ ಆಯೋಜನೆಗೊಂಡಿರುವ ಟೂರ್ನಿಗೆ ಪೂರ್ವಭಾವಿಯಾಗಿ ಮಂಗಳವಾರ ಖಾಸಗಿ ಹೋಟೆಲ್ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಿತು. ಅನುಭವಿ ಆಟಗಾರರ ಜತೆಗೆ ಬೌಲರ್ಸ್ ಖರೀದಿಗೆ ಆರು ಫ್ರಾಂಚೈಸಿಗಳು ಆಸಕ್ತಿ ತೋರಿದವು. ವೇಗಿ ವಿದ್ವತ್ ಕಾವೇರಪ್ಪ ₹10.80 ಲಕ್ಷಕ್ಕೆ ಶಿವಮೊಗ್ಗ ಲಯನ್ಸ್ ತಂಡ ಸೇರಿ ಲಿಲಾವಿನ ದುಬಾರಿ ಬೌಲರ್ ಎನಿಸಿದರು. ಕಳೆದ ಆವೃತ್ತಿಯ ಎರಡನೇ ಗರಿಷ್ಠ ವಿಕೆಟ್ ಸರದಾರ ವಿದ್ಯಾಧರ್ ಪಾಟೀಲ್ ₹8.30 ಲಕ್ಷಕ್ಕೆ ಹಾಲಿ ರನ್ನರ್ ಅಪ್ ಬೆಂಗಳೂರು ಬ್ಲಾಸ್ಟರ್ ಹಾಗೂ ಅನುಭವಿ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ (₹8.60 ಲಕ್ಷ ರೂ.) ಮಂಗಳೂರು ಡ್ರ್ಯಾಗನ್ಸ್ ತಂಡಕ್ಕೆ ಮತ್ತೆ ವಾಪಸ್ ಆದರು.
ಐಪಿಎಲ್ ಅನುಭವ ಹೊಂದಿರುವ ಆಲ್ರೌಂಡರ್ ಕೆ. ಗೌತಮ್ (₹4.40 ಲಕ್ಷ) ಮೈಸೂರು ಪಾಲಾದರೆ, ಸಿ ಕೆಟಗರಿಯಲ್ಲಿದ್ದ ಆಲ್ರೌಂಡರ್ ಅನೀಶ್ವರ್ ಗೌತಮ್ (₹8.20 ಲಕ್ಷ) ಶಿವಮೊಗ್ಗ ತಂಡ ಸೇರಿದರು. ಈ ಬಾರಿಯೂ ನಿರೂಪಕ ಚಾರು ಶರ್ಮ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು. ಹರಾಜಿಗೆ ಹೆಸರು ನೋಂದಾಯಿಸಿದ್ದ ಆಟಗಾರರನ್ನು ಎ,ಬಿ,ಸಿ ಹಾಗೂ ಡಿ ಎಂಬ 4 ಕೆಟಗರಿಯಲ್ಲಿ ವಿಂಗಡಿಸಲಾಗಿತ್ತು.
ದ್ರಾವಿಡ್ ಪುತ್ರ ಸಮಿತ್ ಅನ್ಸೋಲ್ಡ್
ಸಿ ಕೆಟಗರಿಯಲ್ಲಿ ಸ್ಥಾನಪಡೆದಿದ್ದ ಟೀಮ್ ಇಂಡಿಯಾ ಮಾಜಿ ಕೋಚ್, ದಿಗ್ಗಜ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಸೇರ್ಪಡೆಗೆ ಯಾವುದೇ ಫ್ರಾಂಚೈಸಿಗಳು ಆಸಕ್ತಿವಹಿಸಲಿಲ್ಲ. ಮೂಲಬೆಲೆ 50 ಸಾವಿರ ರೂ.ಹೊಂದಿದ್ದ 19 ವರ್ಷದ ಆಲ್ರೌಂಡರ್ ಸಮಿತ್, ಕಳೆದ ಆವೃತ್ತಿಯಲ್ಲಿ ಮೈಸೂರು ವಾರಿಯರ್ಸ್ ಪರ ಆಡಿದ್ದ 7 ಪಂದ್ಯಗಳಲ್ಲಿ 11.71ರ ಸರಾಸರಿಯಲ್ಲಿ ಒಟ್ಟು 82 ರನ್ಗಳಿಸಿದ್ದರು.
ಮೈಸೂರು ವಾರಿಯರ್ಸ್
ರಿಟೇನ್: ಕರುಣ್ ನಾಯರ್ (6.8 ಲಕ್ಷ ರೂ.), ಪ್ರಸಿದ್ಧ ಕೃಷ್ಣ (2 ಲಕ್ಷ ರೂ.), ಕಾರ್ತಿಕ್ ಎಸ್ಯು (50 ಸಾವಿರ ರೂ.), ಕಾರ್ತಿಕ್ ಸಿಎ (4.2 ಲಕ್ಷ ರೂ.). ಖರೀದಿ: ಮನೀಷ್ ಪಾಂಡೆ (12.20 ಲಕ್ಷ ರೂ.), ಕೆ.ಗೌತಮ್ (4.40 ಲಕ್ಷ ರೂ.), ಯಶೋವರ್ಧನ್ ಪರಂತಾಪ್ (2.00 ಲಕ್ಷ ರೂ.), ವೆಂಕಟೇಶ್ ಎಂ. (2 ಲಕ್ಷ ರೂ.), ಹರ್ಷಿಲ್ ಧರ್ಮಾನಿ (3.20 ಲಕ್ಷ ರೂ.), ಲಂಕೇಶ್ (50 ಸಾವಿರ ರೂ.), ಕುಮಾರ್ ಎಲ್ಆರ್ (1.50 ಲಕ್ಷ ರೂ.), ಗೌತಮ್ ಮಿಶ್ರಾ (2.25 ಲಕ್ಷ ರೂ.), ಶಿಖರ್ ಶೆಟ್ಟಿ (4.70 ಲಕ್ಷ ರೂ.), ಸುಮಿತ್ ಕುಮಾರ್ (1 ಲಕ್ಷ ರೂ.), ಧನುಷ್ ಗೌಡ (50 ಸಾವಿರ ರೂ.), ಕುಶಾಲ್ ಎಂ ವಾಧ್ವನಿ (50 ಸಾವಿರ ರೂ.), ಶರತ್ ಶ್ರೀನಿವಾಸ್ (1 ಲಕ್ಷ ರೂ.), ಶಮಂತ್ ಎಸ್ಎಂ (50 ಸಾವಿರ ರೂ.). ಒಟ್ಟು ಆಟಗಾರರು: 18, ವೆಚ್ಚ: 49.75 ಲಕ್ಷ ರೂ., ಬಾಕಿ: 25 ಸಾವಿರ ರೂ.
ಬೆಂಗಳೂರು ಬ್ಲಾಸ್ಟರ್ಸ್
ರಿಟೇನ್:ಮಯಾಂಕ್ ಅಗರ್ವಾಲ್ (14 ಲಕ್ಷ ರೂ.), ಶುಭಾಂಗ್ ಹೆಗ್ಡೆ (4.3 ಲಕ್ಷ ರೂ.), ಸೂರಜ್ ಅಹುಜಾ (1 ಲಕ್ಷ ರೂ.), ನವೀನ್ ಎಂಜಿ(2.3 ಲಕ್ಷ ರೂ.). ಖರೀದಿ: ವಿದ್ಯಾಧರ್ ಪಾಟೀಲ್ (8.30 ಲಕ್ಷ ರೂ.), ಚೇತನ್ ಎಲ್ಆರ್ (5.10 ಲಕ್ಷ ರೂ.), ರೋಹನ್ ನವೀನ್ (4.25 ಲಕ್ಷ ರೂ.), ಮಾಧವ್ ಪ್ರಕಾಶ್ ಬಜಾಜ್ (3.15 ಲಕ್ಷ ರೂ.), ರೋಹನ್ ಪಾಟೀಲ್ (2.70 ಲಕ್ಷ ರೂ.), ಪ್ರತಿಕ್ ಜೈನ್ (1 ಲಕ್ಷ ರೂ.), ಮೊಹ್ಸಿನ್ ಖಾನ್ (1 ಲಕ್ಷ ರೂ.), ಸಿದ್ದಾರ್ಥ್ ಅಖಿಲ್ (50 ಸಾವಿರ ರೂ.), ಕೃತಿಕ್ ಕೃಷ್ಣನ್ (50 ಸಾವಿರ ರೂ.), ಅದ್ವೆ$ೃತ್ ಶೆಟ್ಟಿ (25 ಸಾವಿರ ರೂ.), ಭುವನ್ ಮೋಹನ್ ರಾಜ್ (25 ಸಾವಿರ ರೂ.), ರೋಹನ್ ರಾಜು (25 ಸಾವಿರ ರೂ.), ನಿರಂಜನ್ ನಾಯ್ಕ್ (25 ಸಾವಿರ ರೂ.), ಇಶಾನ್ ಎಸ್. (50 ಸಾವಿರ ರೂ.). ಒಟ್ಟು ಆಟಗಾರರು: 18, ವೆಚ್ಚ: <49.60 ಲಕ್ಷ, ಬಾಕಿ: 40 ಸಾವಿರ ರೂ.
ಹುಬ್ಬಳ್ಳಿ ಟೈಗರ್ಸ್
ರಿಟೇನ್:ಮನ್ವಂತ್ ಕುಮಾರ್ ಎಲ್ (1 ಲಕ್ಷ ರೂ.), ಶ್ರೀಜಿತ್ ಕೆಎಲ್ (2.1 ಲಕ್ಷ ರೂ.), ಕಾರ್ಯಪ್ಪ ಕೆಸಿ (4.2 ಲಕ್ಷ ರೂ), ಕಾರ್ತಿಕೇಯ ಕೆಪಿ (1.2 ಲಕ್ಷ ರೂ.), ಖರೀದಿ: ಅಭಿನವ್ ಮನೋಹರ್ (12.20 ಲಕ್ಷ ರೂ.),ದೇವದತ್ ಪಡಿಕ್ಕಲ್ (13.20 ಲಕ್ಷ ರೂ.), ಮೊಹಮದ್ ತಾಹ (4.60 ಲಕ್ಷ ರೂ.), ಸಮರ್ಥ್ ನಾಗರಾಜ್ (3.20 ಲಕ್ಷ ರೂ.),ಶ್ರೀಶ ಆಚಾರ್ (1.05 ಲಕ್ಷ ರೂ.), ರಿತೇಶ್ ಭಟ್ಕಳ್ (1 ಲಕ್ಷ ರೂ.), ನಿಶ್ಚಿತ್ ಪೈ (50 ಸಾವಿರ ರೂ.), ರತ್ ಎಸ್ (50 ಸಾವಿರ ರೂ.), ವಿಜಯ್ ರಾಜ್ (50 ಸಾವಿರ ರೂ.), ಪ್ರಖರ್ ಚರ್ತುವೇದಿ (50 ಸಾವಿರ ರೂ.), ಸಂಕಲ್ಪ (50 ಸಾವಿರ ರೂ.), ನಿತಿನ್ ನಾಗಾರಾಜ್ (25 ಸಾವಿರ ರೂ), ಯಶ್ ರಾಜ್ ಪೂಂಜಾ (25 ಸಾವಿರ ರೂ.), ಒಟ್ಟು ಆಟಗಾರರು: 18, ವೆಚ್ಚ: <47 ಲಕ್ಷ , ಬಾಕಿ: 3 ಲಕ್ಷ ರೂ.
ಗುಲ್ಬರ್ಗಾ ಮಿಸ್ಟಿಕ್ಸ್
ರಿಟೇನ್:ವೈಶಾಕ್ (8.8 ಲಕ್ಷ ರೂ.), ಲವನೀತ್ ಸಿಸೋಡಿಯಾ (7.2 ಲಕ್ಷ ರೂ.), ಪ್ರವಿಣ್ ದುಬೆ (6.8 ಲಕ್ಷ ರೂ.),ಸ್ಮರಣ್ ಆರ್. (3.15 ಲಕ್ಷ ರೂ.), ಖರೀದಿ: ಲವೀಶ್ ಕೌಶಲ್ (7.75 ಲಕ್ಷ ರೂ.), ಸಿದ್ದಾರ್ಥ್ ಕೆವಿ (6.10 ಲಕ್ಷ ರೂ.), ಮೋನಿಷ್ ರೆಡ್ಡಿ (4.65 ಲಕ್ಷ ರೂ.), ನಿಕಿನ್ ಜೋಸ್ (1 ಲಕ್ಷ ರೂ.), ಲಿಖಿತ್ ಎಂ ಬನ್ನೂರು (80 ಸಾವಿರ ರೂ.), ಪೃಥ್ವಿರಾಜ್ (69 ಸಾವಿರ ರೂ.), ಜಸ್ಪರ್ ಇಜೆ (50 ಸಾವಿರ ರೂ.), ಮೋಹಿತ್ ಬಿಎ (50 ಸಾವಿರ ರೂ.), ಪ್ರಜ್ವಲ್ ಪವನ್ (50 ಸಾವಿರ ರೂ.), ಯೂನುಸ್ ಅಲಿ ಬೇಗ್ (25 ಸಾವಿರ ರೂ.), ಸೌರಭ್ ಎಂ ಮುತ್ತೂರು (25 ಸಾವಿರ ರೂ.), ಫೈಜನ್ ರೈಜ್ (25 ಸಾವಿರ ರೂ.), ಶೀತಲ್ ಕುಮಾರ್ (25 ಸಾವಿರ ರೂ.), ಹರ್ಷವರ್ಧನ್ ಖೂಬಾ (25 ಸಾವಿರ ರೂ.). ಒಟ್ಟು ಆಟಗಾರರು: 18, ವೆಚ್ಚ: 49.69 ಲಕ್ಷ ರೂ., ಬಾಕಿ: 31 ಸಾವಿರ ರೂ.
ಮಂಗಳೂರು ಡ್ರ್ಯಾಗನ್ಸ್
ರಿಟೇನ್:ಅಭಿಲಾಷ್ ಶೆಟ್ಟಿ (6.3 ಲಕ್ಷ ರೂ.), ಮ್ಯಾಕ್ನೀಲ್ ನೊರೊನ್ಹಾ (5 ಲಕ್ಷ ರೂ.), ಪಾರಸ್ ಗುರ್ಬಕ್ಷ್ ಆರ್ಯ (0.5 ಲಕ್ಷ ರೂ.), ಲೋಚನ್ ಎಸ್ ಗೌಡ (50 ಸಾವಿರ ರೂ.), ಖರೀದಿ: ಶ್ರೇಯಸ್ ಗೋಪಾಲ್ (8.60 ಲಕ್ಷ ರೂ.), ಶಿವರಾಜ್ ಎಸ್ (6.55 ಲಕ್ಷ ರೂ.), ಎಂ.ಕ್ರಾಂತಿ ಕುಮಾರ್ (5.60 ಲಕ್ಷ ರೂ.), ರೋನಿತ್ ಮೊರೆ (3.40 ಲಕ್ಷ ರೂ.), ಆದರ್ಶ್ ಪ್ರಜ್ವಲ್ (3.25 ಲಕ್ಷ ರೂ.), ಶರತ್ ಬಿಆರ್ (2.20 ಲಕ್ಷ ರೂ.), ಸಚಿನ್ ಶಿಂಧೆ (1 ಲಕ್ಷ ರೂ.), ಅನೀಶ್ ಕೆವಿ (1 ಲಕ್ಷ ರೂ.), ಆದಿತ್ಯ ನಾಯರ್ (1.10 ಲಕ್ಷ ರೂ.), ಪಲ್ಲವ್ ಕುಮಾರ್ ದಾಸ್ (1 ಲಕ್ಷ ರೂ.), ತಿಪ್ಪಾ ರೆಡ್ಡಿ (80 ಸಾವಿರ ರೂ.) ಒಟ್ಟು ಆಟಗಾರರು: 16, ವೆಚ್ಚ 49.92 ಲಕ್ಷ ರೂ., ಬಾಕಿ: 8 ಸಾವಿರ ರೂ.
ಶಿವಮೊಗ್ಗ ಲಯನ್ಸ್
ರಿಟೇನ್: ಕೌಶಿಕ್ ವಿ (5.9 ಲಕ್ಷ ರೂ.), ನಿಹಾಲ್ ಉಳ್ಳಾಲ (2.1 ಲಕ್ಷ ರೂ.), ಹಾರ್ದಿಕ್ ರಾಜ್ (5.8 ಲಕ್ಷ ರೂ.), ಅವಿನಾಶ್ ಡಿ(5.4 ಲಕ್ಷ ರೂ.), ಖರೀದಿ: ವಿದ್ವತ್ ಕಾವೇರಪ್ಪ (10.80 ಲಕ್ಷ ರೂ.), ಅನೀಶ್ವರ್ ಗೌತಮ್ (8.20 ಲಕ್ಷ ರೂ.), ಅನಿರುದ್ಧ ಜೋಷಿ (3.60 ಲಕ್ಷ ರೂ.), ದೀಪಕ್ ದೇವಾಡಿಗ (1.20 ಲಕ್ಷ ರೂ.), ದರ್ಶನ್ ಎಂಬಿ (1.10 ಲಕ್ಷ ರೂ.), ತುಷಾರ್ ಸಿಂಗ್ (1.05 ಲಕ್ಷ ರೂ.), ಧ್ರುವ್ ಪ್ರಭಾಕರ್(50 ಸಾವಿರ ರೂ.), ಸಂಜಯ್ ಸಿ (50 ಸಾವಿರ ರೂ.), ಆನಂದ ದೊಡ್ಡಮನಿ (50 ಸಾವಿರ ರೂ.), ಸಾಹಿಲ್ ಶರ್ಮ (25 ಸಾವಿ ರೂ.), ಭರತ್ ಧುರಿ (25 ಸಾವಿರ ರೂ.), ರೋಹಿತ್ ಕುಮಾರ್ ಕೆ. (25 ಸಾವಿರ ರೂ.), ಮರಿಬಸವ ಗೌಡ (25 ಸಾವಿರ ರೂ.), ಸಿರಿಶ್ ಬಲ್ಗಾರ್ (25 ಸಾವಿರ ರೂ.). ಒಟ್ಟು ಆಟಗಾರರು: 18, ವೆಚ್ಚ: 47.90 ಲಕ್ಷ ರೂ., ಬಾಕಿ ಮೊತ್ತ: 2.10 ಲಕ್ಷ ರೂ.