#NoBindiNoBusiness | ಹಿಂದೂಗಳಿಂದ ಮತ್ತೆ ಅಭಿಯಾನ, ಟ್ರೆಂಡ್ ಆಯ್ತು ಕ್ಯಾಂಪೇನ್..

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಏನಾದರೊಂದು ಟ್ರೆಂಡ್ ಆಗುತ್ತಲೇ ಇರುತ್ತದೆ. ಅದರಲ್ಲೂ ಇಂದು ಹಿಂದೂಗಳ ಅಭಿಯಾನವೊಂದು ಪುನಃ ಮುನ್ನೆಲೆಗೆ ಬಂದಿದ್ದಲ್ಲದೆ ಟ್ರೆಂಡ್ ಕೂಡ ಆಗಿದೆ. ‘ಸಿಂಧೂರ ಇರದಿದ್ದರೆ ಇಲ್ಲ ವ್ಯವಹಾರ’ ( #NoBindiNoBusiness ) ಎನ್ನುವ ಈ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಹಬ್ಬದ ಸಂದರ್ಭಗಳಲ್ಲಿ ವಿವಿಧ ಕಂಪನಿಗಳು ನೀಡುವ ಜಾಹೀರಾತಿನಲ್ಲಿ ಕೆಲವು ವರ್ಷಗಳ ಹಿಂದೆ ಹಿಂದೂ ಧಾರ್ಮಿಕ ಸಂಗತಿಗಳಿಗೆ ಪ್ರಾಧಾನ್ಯತೆ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವು ಮರೆಯಾಗಿದ್ದು, ಹಿಂದೂ ಧಾರ್ಮಿಕ ಸಂಕೇತಗಳು ನಗಣ್ಯ ಎಂಬಂತಾಗಿವೆ ಎಂಬ ಹಿನ್ನೆಲೆಯಲ್ಲಿ ಈ ಅಭಿಯಾನ ಹುಟ್ಟಿಕೊಂಡಿದೆ.

ಹಬ್ಬದ ಜಾಹೀರಾತುಗಳಲ್ಲಿ ಇರುತ್ತಿದ್ದ ದೀಪ, ರಂಗೋಲಿ, ಹೂವುಗಳು ಕಳೆದ ನಾಲ್ಕೈದು ವರ್ಷಗಳಲ್ಲಿ ಒಂದೊಂದಾಗಿ ಕಾಣೆಯಾಗಿದ್ದು, ಇದೀಗ ಕಾಣಿಸಬಹುದಾದ ಕೊನೆಯ ಧಾರ್ಮಿಕ ಸಂಕೇತವಾದ ಬಿಂದಿ ಕೂಡ ನಾಪತ್ತೆ ಆಗಿದೆ. ಬಹಳಷ್ಟು ಜಾಹೀರಾತುಗಳಲ್ಲಿನ ರೂಪದರ್ಶಿಗಳ ಹಣೆಯಲ್ಲಿ ಬೇಕಂತಲೇ ಬಿಂದಿಯನ್ನು ಇರಿಸುತ್ತಿಲ್ಲ ಎಂದು ಅಭಿಯಾನ ನಡೆಸುತ್ತಿರುವವರು ಹೇಳಿಕೊಂಡಿದ್ದಾರೆ.

ಬಹಳಷ್ಟು ಕಂಪನಿಗಳು ಹಿಂದೂಗಳ ಹಬ್ಬಗಳನ್ನು ವ್ಯವಹಾರದ ಸಂದರ್ಭವನ್ನಾಗಿಯಷ್ಟೇ ನೋಡುತ್ತಿದ್ದಾರೆ. ಅವರಿಗೆ ಹಿಂದೂಗಳಿಂದ ವ್ಯಾಪಾರ ಬೇಕು, ಹಿಂದೂಗಳ ಹಣ ಬೇಕು. ಆದರೆ ಹಿಂದೂಗಳ ಧಾರ್ಮಿಕ ಸಂಕೇತಗಳಿಗೆ ಅವರು ಮನ್ನಣೆ ನೀಡುತ್ತಿಲ್ಲ. ನಾವು ಹೀಗೆ ಅಭಿಯಾನ ಹಮ್ಮಿಕೊಂಡಿದ್ದರಿಂದ ಕೆಲವರು ತಮ್ಮ ಜಾಹೀರಾತು ವಾಪಸ್ ಪಡೆದು ಹೊಸ ಜಾಹೀರಾತು ಸೃಷ್ಟಿಸಿದ್ದರೆ, ಇನ್ನು ಕೆಲವರು ಫೋಟೋಶಾಪ್ ಮೂಲಕ ಬಿಂದಿಗಳನ್ನು ಹಾಕಿದ್ದಾರೆ ಎಂದು ಅಭಿಯಾನನಿರತ ಹಿಂದೂಗಳು ಹೇಳಿಕೊಂಡಿದ್ದಾರೆ.

ಇನ್ನು ಕೆಲವು ಸಾಮಾಜಿಕ ಕಾರ್ಯಕರ್ತರು ಹಿಂದೂಗಳ ಹಬ್ಬದ ಸಮಯದಲ್ಲಷ್ಟೇ ಜಾಗೃತರಾಗುತ್ತಿದ್ದು, ಹಬ್ಬದ ವಿಚಾರದಲ್ಲಿ ತಕರಾರು ತೆಗೆಯುತ್ತಿದ್ದಾರೆ. ಹಿಂದೂಗಳ ಧಾರ್ಮಿಕ ವಿಚಾರಗಳೆಲ್ಲ ನ್ಯಾಯಾಲಯದಲ್ಲೇ ತೀರ್ಮಾನ ಆಗುವಂತಾಗುತ್ತಿವೆ. ಬರೀ ಹಿಂದೂಗಳನ್ನಷ್ಟೇ ಗುರಿಯಾಗಿಸಿ ಇವನ್ನೆಲ್ಲ ನಡೆಸಲಾಗುತ್ತಿದೆ, ಎಲ್ಲಿಯವರೆಗೆ ಅಂತ ಇವುಗಳನ್ನೆಲ್ಲ ಸಹಿಸಿಕೊಂಡು ಇರಲು ಸಾಧ್ಯ ಎಂದು ಅಭಿಯಾನ ನಡೆಸುತ್ತಿರುವವರು ಹೇಳಿಕೊಂಡಿದ್ದಾರೆ.

ಬರೀ 23 ದಿನಗಳಲ್ಲಿ ಭಾರತದಲ್ಲಾಗಲಿವೆ 35 ಲಕ್ಷ ಮದುವೆಗಳು!; ಈ ಮದುವೆ ಸೀಸನ್​ನ ವಹಿವಾಟೆಷ್ಟು ಗೊತ್ತೇ?; ಇಲ್ಲಿದೆ ವಿವರ..

Share This Article

ಒಂದು ಬಾರಿ ಇದನ್ನು ಕುಡಿದರೆ ಸಾಕು ನಿಮ್ಮ ಹೊಟ್ಟೆ ಫುಲ್​ ಕ್ಲೀನ್ ಆಗಿಬಿಡುತ್ತೆ! Stomach problems

ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಆ ನೋವು ( Stomach problems ) ಅಥವಾ ಕಿರಿಕಿರಿ…

Health Tips : ಸಕ್ಕರೆ ಕಾಯಿಲೆಯಿಂದ ಬಳಲುತ್ತೀದ್ದೀರಾ? ಬೆಳ್ಳಂಬೆಳಗ್ಗೆ ಕರಿಬೇವಿನ ಎಲೆಯ ನೀರನ್ನು ಕುಡಿಯಿರಿ ಸಾಕು

ಬೆಂಗಳೂರು: ಕರಿಬೇವು ಕೇವಲ ಬೆಳಗಿನ ತಿಂಡಿಗೆ ರುಚಿ ಕೊಡಲು ಒಗ್ಗರಣೆಗೆ ಮಾತ್ರ ಮೀಸಲಾಗಿಲ್ಲ. ಕರಿಬೇವಿನ ಎಲೆಗಳು…

ಮನೆಯಲ್ಲೇ ತಯಾರಿಸಿಕೊಳ್ಳಿ ಕೂದಲು ಸಂರಕ್ಷಣೆಯ ಶುದ್ಧ ತೈಲ

ಸದೃಢವಾದ, ಹೊಳೆಯುವ, ನೀಳ ಕೂದಲು ಬೇಕೆಂಬ ಆಸೆ ತುಂಬಾ ಜನರಿಗೆ ಇದ್ದೇ ಇರುತ್ತದೆ. ಜೊತೆಗೆ ಕೂದಲು…