ನವದೆಹಲಿ: ದೇಶದಲ್ಲಿ ಈ ವರ್ಷ ದಾಖಲೆ ಸಂಖ್ಯೆಯಲ್ಲಿ ಮದುವೆಗಳಾಗಲಿದ್ದು, ಭಾರಿ ಪ್ರಮಾಣದ ವಹಿವಾಟು ಕೂಡ ನಡೆಯಲಿದೆ. ಅಖಿಲ ಭಾರತ ವರ್ತಕರ ಒಕ್ಕೂಟ (ಕಾನ್ಫೆಡರೇಷನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್-ಸಿಎಐಟಿ) ಇಂಥದ್ದೊಂದು ಮಾಹಿತಿಯನ್ನು ಬಹಿರಂಗಪಡಿಸಿದೆ.
ಸಿಎಐಟಿ ಈ ಕುರಿತು ಲೆಕ್ಕಾಚಾರ ಹಾಕಿದ್ದು, ಎಷ್ಟು ಅವಧಿಯಲ್ಲಿ ಇಷ್ಟು ಮದುವೆಗಳು ಆಗಲಿವೆ ಎಂಬ ಮಾಹಿತಿಯನ್ನು ಕೂಡ ನೀಡಿದೆ. ಈ ವರ್ಷದ ನ. 23ರಿಂದ ಡಿ. 15ರ ಅವಧಿಯಲ್ಲಿ 35 ಲಕ್ಷ ಮದುವೆಗಳು ಭಾರತದಲ್ಲಿ ಆಗಲಿವೆ ಎಂದು ಅದು ಹೇಳಿದೆ. ಮಾತ್ರವಲ್ಲ ಈ ಮದುವೆಗಳಿಂದ ಬರೋಬ್ಬರಿ 4.25 ಲಕ್ಷ ಕೋಟಿ ರೂ. ವಹಿವಾಟು ಕೂಡ ನಡೆಯಲಿದೆ ಎಂದು ಅಂದಾಜಿಸಿದೆ.
ಇದನ್ನೂ ಓದಿ: ‘ಮೋದಿಯನ್ನು ಅಧಿಕಾರಕ್ಕೆ ತಂದ್ರೆ ಉಳಿತೀರಿ’ ಎಂದ ಸ್ವಾಮೀಜಿ: ಒಂದೇ ದಿನದಲ್ಲಿ ಇಲ್ಲವಾದ ‘ಭವಿಷ್ಯ’!
ದ ಕೇಟ್ ರಿಸರ್ಚ್ ಆ್ಯಂಡ್ ಟ್ರೇಡ್ ಡೆವೆಲಪ್ಮೆಂಟ್ ಸೊಸೈಟಿಯ ಸರ್ವೇಯಲ್ಲಿ ಈ ಮಾಹಿತಿ ಕಂಡುಬಂದಿದೆ. ಆ ಪೈಕಿ ದೆಹಲಿಯೊಂದರಲ್ಲೇ 3.5 ಲಕ್ಷ ಮದುವೆಯಾಗಲಿದೆ. ಈ ಮೂಲಕ ಒಟ್ಟಾರೆ ಮದುವೆಗಳಲ್ಲಿ ಶೇ. 10ರಷ್ಟು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವುದು ತಿಳಿದುಬಂದಿದೆ.
ಇದನ್ನೂ ಓದಿ: ಮಹಿಳಾ ಕುಸ್ತಿಪಟುಗಳ ನಾಡಿಮಿಡಿತ ಚೆಕ್ ಮಾಡಿದ್ದೆ, ಅಷ್ಟೇ..: ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಬ್ರಿಜ್ ಭೂಷಣ್ ಹೇಳಿಕೆ
ಈ 35 ಲಕ್ಷ ಮದುವೆಗಳಲ್ಲಿ 6 ಲಕ್ಷ ಮದುವೆಗಳು ತಲಾ ಸುಮಾರು 3 ಲಕ್ಷ ರೂ. ಬಜೆಟ್ನಲ್ಲಿ ನಡೆಯಲಿವೆ. ಹತ್ತು ಲಕ್ಷ ಮದುವೆಗಳು ತಲಾ 6 ಲಕ್ಷ ರೂ. ಖರ್ಚಿನಲ್ಲಿ ನಡೆಯಲಿವೆ. 12 ಲಕ್ಷ ಮದುವೆಗಳು ತಲಾ 10 ಲಕ್ಷ ರೂ. ಖರ್ಚಿನಲ್ಲಿ ಮತ್ತು 6 ಲಕ್ಷ ವಿವಾಹಗಳು ತಲಾ 25 ಲಕ್ಷ ರೂ. ವೆಚ್ಚದಲ್ಲಿ ನಡೆಯಲಿವೆ ಎಂದೂ ವಿವರಿಸಲಾಗಿದೆ. ಅಲ್ಲದೆ 50 ಸಾವಿರ ಲಗ್ನಗಳು 50 ಲಕ್ಷ ರೂ. ಮತ್ತು ಉಳಿದ 50 ಸಾವಿರ ವಿವಾಹಗಳು ತಲಾ 1 ಕೋಟಿ ರೂ. ಖರ್ಚಿನಲ್ಲಿ ನಡೆಯಲಿವೆ ಎಂದು ಈ ಸಮೀಕ್ಷೆ ತಿಳಿಸಿದೆ.
Wedding season first spell from 23 November to 15 December is all set to bring cheers to trading community.@CAITIndia expects a biz of about Rs 4.25 lakh crore wedding trade this year.
About 35 lakh weddings are estimated to be solemnised during this period in #Bharat @PMOIndia… pic.twitter.com/zCrg9QW5PQ
— Praveen Khandelwal (@praveendel) October 17, 2023
ಜೊಮ್ಯಾಟೊ ಫುಡ್ ಡೆಲಿವರಿಗೆ ಸ್ಟೈಲಿಶ್ ಬೈಕು, ಚಂದದ ಯುವತಿ!; ಏನಿದರ ರಹಸ್ಯ?