More

    ಜೊಮ್ಯಾಟೊ ಫುಡ್ ಡೆಲಿವರಿಗೆ ಸ್ಟೈಲಿಶ್ ಬೈಕು, ಚಂದದ ಯುವತಿ!; ಏನಿದರ ರಹಸ್ಯ?

    ಬೆಂಗಳೂರು: ಆ್ಯಪ್​ ಆಧಾರಿತ ಫುಡ್ ಡೆಲಿವರಿ ವ್ಯವಸ್ಥೆಗಳಾದ ಸ್ವಿಗ್ಗಿ-ಜೊಮ್ಯಾಟೊ ಸಂಸ್ಥೆಗಳು ಆಗಾಗ ಸುದ್ದಿ ಆಗುತ್ತಿರುತ್ತವೆ. ಹೀಗೆ ಇವರು ನಕಾರಾತ್ಮಕವಾಗಿ ಇಲ್ಲವೇ ವಿಚಿತ್ರ ಕಾರಣಗಳಿಗಾಗಿ ಸುದ್ದಿ ಆಗಿದ್ದೇ ಹೆಚ್ಚು. ಇದೀಗ ಅಂಥದ್ದೇ ಒಂದು ಕಾರಣಕ್ಕಾಗಿ ಜೊಮ್ಯಾಟೊ ಸುದ್ದಿಯಲ್ಲಿದೆ.

    ಫುಡ್ ಡೆಲಿವರಿ ಮಾಡಿದಾಗ ಸ್ಟೈಲಿಶ್ ಬೈಕ್​ನಲ್ಲಿ ಚಂದದ ಯುವತಿಯೊಬ್ಬಳು ಅದನ್ನು ತಂದುಕೊಟ್ಟರೆ ಹೇಗಿರಬಹುದು? ಎಂದು ಕನಸು ಕಂಡವರಿದ್ದರೆ, ಅವರು ಈ ವಿಡಿಯೋ ನೋಡಿದರೆ ಅದು ನನಸಾದಂತೆಯೇ ಎಂದನಿಸಬಹುದು.

    ಹೌದು.. ಇಲ್ಲೊಂದು ಕಡೆ ಜೊಮ್ಯಾಟೊ ಫುಡ್​ ಡೆಲಿವರಿ ಬ್ಯಾಗ್ ಹಾಕಿಕೊಂಡು ಸ್ಟೈಲಿಶ್ ಬೈಕ್​ನಲ್ಲಿ ಚಂದದ ಯುವತಿ ರಸ್ತೆಗಿಳಿಯುತ್ತಿರುವುದೇನೋ ನಿಜ. ಮಧ್ಯಪ್ರದೇಶದ ಇಂದೋರ್​ನಲ್ಲಿ ಈ ಜೊಮ್ಯಾಟೊ ಯುವತಿ ರಸ್ತೆಯಲ್ಲಿ ಕಾಣಸಿಗುತ್ತಾಳೆ. ಹಾಗಂತ ಫುಡ್ ಆರ್ಡರ್ ಮಾಡಿದರೆ ಈಕೆಯಿಂದ ಡೆಲಿವರಿಯಂತೂ ಖಂಡಿತ ಸಿಗುವುದಿಲ್ಲ.

    ಜೊಮ್ಯಾಟೊ ಫುಡ್ ಡೆಲಿವರಿಗೆ ಸ್ಟೈಲಿಶ್ ಬೈಕು, ಚಂದದ ಯುವತಿ!; ಏನಿದರ ರಹಸ್ಯ?

    ಏಕೆಂದರೆ ಇದರ ಹಿಂದಿನ ಅಸಲಿ ಸಂಗತಿಯೇ ಬೇರೆ ಇದೆ. ತನ್ನ ಸಂಸ್ಥೆಯ ಪ್ರಚಾರಾರ್ಥವಾಗಿ ಜೊಮ್ಯಾಟೊ ಇಂಥದ್ದೊಂದು ತಂತ್ರ ಅನುಸರಿಸುತ್ತಿರುವುದನ್ನು ಎಕ್ಸ್ ಬಳಕೆದಾರರೊಬ್ಬರು ಬಹಿರಂಗಪಡಿಸಿದ್ದಾರೆ.

    ಜೊಮ್ಯಾಟೊದ ಮಾರ್ಕೆಟಿಂಗ್ ಮುಖ್ಯಸ್ಥರೊಬ್ಬರು ರೂಪದರ್ಶಿಯೊಬ್ಬರನ್ನು ಸ್ಟೈಲಿಶ್​ ಬೈಕ್​ ಹಾಗೂ ಜೊಮ್ಯಾಟೊ ಖಾಲಿ ಬ್ಯಾಗ್​ನೊಂದಿಗೆ ರಸ್ತೆಗಿಳಿಸಿ, ನಿತ್ಯ ಬೆಳಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆ ಸಂಚರಿಸುವಂತೆ ಮಾಡಿದ್ದಾರೆ ಎಂಬುದಾಗಿ ರಾಜೀವ್ ಮೆಹ್ತ ಎನ್ನುವವರು ಎಕ್ಸ್​ನಲ್ಲಿ ವಿಡಿಯೋ ಸಮೇತ ತಿಳಿಸಿದ್ದಾರೆ.

    ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts