ರಾತ್ರಿ ಸರಿಯಾಗಿ ನಿದ್ರೆ ಬರದಿದ್ದರೆ ಅದಕ್ಕೆ ಇವೇ ಕಾರಣಗಳಂತೆ!

Sleep
Published on

ಬೆಂಗಳೂರು: ರಾತ್ರಿ ಸರಿಯಾಗಿ ನಿದ್ರೆ ಬರದಿರುವ ಸಮಸ್ಯೆ ಇತ್ತೀಚೆಗೆ ಸಾಮಾನ್ಯ ಎಂಬಂತಾಗಿತ್ತು, ಬಹಳಷ್ಟು ಮಂದಿ ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಅಷ್ಟಕ್ಕೂ ನಿದ್ರೆ ಬರದಿರಲು ಕಾರಣಗಳು ಹಲವಾರಿದ್ದರೂ, ಅದು ಒಬ್ಬರಿಗಿಂತ ಒಬ್ಬರಿಗೆ ಬೇರೆಯಾಗಿದ್ದರೂ, ಎಲ್ಲರಿಗೂ ಅನ್ವಯಿಸಬಹುದಾದ ಕೆಲವು ಸಾಮಾನ್ಯ ಕಾರಣಗಳೂ ಇವೆಯಂತೆ!

ನಿದ್ರಾಹೀನತೆ ದೂರವಾಗಿಸುವ ಸಲುವಾಗಿ ಉತ್ತಮ ನಿದ್ರೆಗೆ ಪೂರಕವಾಗುವಂಥ ಕೆಲವು ಸಲಹೆಗಳನ್ನು ಜ್ಯೋತಿಷಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಜ್ಯೋತಿಷಿ ಅನಿರುದ್ಧ್​ ಕುಮಾರ್ ಮಿಶ್ರಾ ಈ ಮಾಹಿತಿ ಹಂಚಿಕೊಂಡಿದ್ದಾರೆ.

- ರಾತ್ರಿ ಸರಿಯಾಗಿ ನಿದ್ರೆ ಬರದಿದ್ದರೆ ತಲೆಯನ್ನು ದಕ್ಷಿಣ ದಿಕ್ಕಿಗೆ ಹಾಕಿಕೊಂಡು ಮಲಗಿ.
- ಮಲಗುವ ಕೋಣೆಯಲ್ಲಿ ನೀಲಿ ಬಣ್ಣದ ಬೆಳಕಿರಲಿ.
- ಆದಷ್ಟೂ ನೈಋತ್ಯ ದಿಕ್ಕಿನ ಕೋಣೆಯಲ್ಲಿ ಮಲಗಿ.
- ಮಲಗುವ ಕೋಣೆಯಲ್ಲಿ ಯಾವುದೇ ಕನ್ನಡಿ ಇರಬಾರದು.
- ಮಲಗುವಾಗ ಕೆಂಪು ಬಟ್ಟೆ ಧರಿಸಿರಬೇಡಿ, ಬೆಡ್​ಶೀಟ್ ಕೂಡ ಕೆಂಪು ಇರದಂತೆ ನೋಡಿಕೊಳ್ಳಿ.
- ಮಲಗುವ ಕೋಣೆಯಲ್ಲಿ ದೊಡ್ಡ ನೀರಿನ ಪಾತ್ರೆ ಇರದಂತೆ ನೋಡಿಕೊಳ್ಳಿ.
- ಮಲಗುವ ಕೋಣೆಯಲ್ಲಿ ಬಚ್ಚಲು ಹೊಂದಿಕೊಂಡಂತಿದ್ದರೆ ಅದರ ಬಾಗಿಲ ಮೇಲೆ ಸಿಂಹದ ಚಿತ್ರವನ್ನು ಅಳವಡಿಸಿರಿ.
- ಮಲಗುವ ಕೋಣೆಯಲ್ಲಿ ಕುದುರೆಗಳ ಚಿತ್ರಗಳನ್ನು ನೇತುಹಾಕಿದ್ದರೆ ದಂಪತಿ ನಡುವಿನ ಪ್ರಣಯಾನುಬಂಧ ಬಲವಾಗಿರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net