More

    ರಾತ್ರಿ ತಡವಾಗಿ ಮಲಗುವವರು ಬೇಗ ಸಾಯುವ ಸಾಧ್ಯತೆ ಅಧಿಕ: ಸಂಶೋಧನೆ

    ನವದೆಹಲಿ: ರಾತ್ರಿ ಹೊತ್ತು ತಡವಾಗಿ ಮಲಗುವುದರಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದ್ದು, ಜನ ಬೇಗನೆ ಸಾಯುತ್ತಾರೆ ಎಂಬ ಆತಂಕಕಾರಿ ಅಂಶ ಒಂದು ಬೆಳಕಿಗೆ ಬಂದಿದೆ.

    ಫಿನ್​ಲ್ಯಾಂಡ್​ನ ಹೆಲ್ಸಿಂಕಿ ವಿಶ್ವವಿದ್ಯಾನಿಲಯವು ಇತ್ತೀಚಿಗೆ ಪ್ರಕಟಿಸಿದ ಸಂಶೋಧನೆಯ ಪ್ರಕಾರ ಈ ರೀತಿ ಮಾಡುವುದರಿಂದ ಜನ ಬೇಗನೆ ಸಾಯುತ್ತಾರೆ. 37 ವರ್ಷಗಳ ಕಾಲ ಸುಮಾರು 23 ಸಾವಿರಕ್ಕೂ ಹೆಚ್ಚಿನ ಮಂದಿ ಮೇಲೆ ಮಾಡಿದ ಸಂಶೋಧನೆಯ ಆಧಾರದ ಮೇಲೆ ವರದಿಯನ್ನು ಪ್ರಕಟಿಸಲಾಗಿದೆ.

    ಹೆಲ್ಸಿಂಕಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ನಡೆಸಿರುವ ಸಂಶೋಧನೆಯ ಪ್ರಕಾರ ಒಂದು ನಿರ್ದಿಷ್ಟ ಸಮಯದಲ್ಲಿ ಮನುಷ್ಯನ ದೇಹವು ನಿದ್ರೆ ಮಾಡಲು ನೈಸರ್ಗಿಕ ಒಲವು ತೋರುತ್ತದೆ. ಹಾಗೆ ಮಾಡಿದ್ದಲ್ಲಿ ಅವರ ಆರೋಗ್ಯದ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ.

    ರಾತ್ರಿ ತಡವಾಗಿ ಮಲಗುವವರು ಬೇಗ ಸಾಯುವ ಸಾಧ್ಯತೆ ಅಧಿಕ: ಸಂಶೋಧನೆ

    ಇದನ್ನೂ ಓದಿ: VIDEO| ವಕೀಲರ ನಡುವೆ ಗಲಾಟೆ; ನ್ಯಾಯಾಲಯದ ಆವರಣದಲ್ಲೇ ಗುಂಡಿನ ದಾಳಿ

    ವ್ಯಕ್ತಿಯೂ ತಡರಾತ್ರಿವರೆಗೂ ನಿದ್ರೆ ಮಾಡದೆ ಇರುವುದರಿಂದ ಮತ್ತು ಬೆಳಗ್ಗೆ ಹೊತ್ತು ತಡವಾಗಿ ಏಳುವುದರಿಂದ ಅವರ ಆರೋಗ್ಯದ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮವನ್ನು ಬೀರಲಿದ್ದು, ಇಂತಹವರು ಹೆಚ್ಚಾಗಿ ತಂಬಾಕು, ಮದ್ಯ ಸೇವನೆಯನ್ನು ಮಾಡುತ್ತಿರುತ್ತಾರೆ.

    ನಿದ್ರೆಯ ಅವಧಿ, ನೈಟ್​ ಶಿಫ್ಟ್​ ಕೆಲಸಗಳು ಮನುಷ್ಯನ ದೇಹದ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತವೆ ಎಂಬುದರ ಕುರಿತು ಹಲವು ಪುರಾವೆಗಳಿವೆ. ಹೆಚ್ಚಾಗಿ ಹೃದಯ ಸಂಬಂಧಿ ಖಾಯಿಲೆಗಳಿಗೆ ತುತ್ತಾಗಬಹುದು ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಈ ಮೂಲಕ ತಿಳಿದು ಬಂದಿರುವುದೇನೆಂದರೆ ರಾತ್ರಿ ಹೊತ್ತು ತಡವಾಗಿ ಮಲಗುವುದರಿಂದ ಸಾಯುವ ಸಾಧ್ಯತೆಯೂ ಶೇ. 09ರಷ್ಟು ಹೆಚ್ಚಿದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts