VIDEO| ಕೇದರನಾಥದಲ್ಲಿ ಪ್ರೇಮ ನಿವೇದನೆ; ಕಠಿಣ ಕ್ರಮಕ್ಕೆ ಆಗ್ರಹಿಸಿ ಪೊಲೀಸರಿಗೆ ದೂರು

love proposal
Published on

ಕೇದರನಾಥ: ಉತ್ತರಾಖಂಡದ ಪ್ರಸಿದ್ದ ಯಾತ್ರಾ ಸ್ಥಳ ಕೇದರನಾಥ ದೇವಸ್ಥಾನದಲ್ಲಿ ಮಹಿಳೆಯೊಬ್ಬರು ತನ್ನ ಪ್ರಿಯಕರನಿಗೆ ಪ್ರಪೋಸ್​ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸಾಕಷ್ಟು ಖಂಡನೆ ವ್ಯಕ್ತವಾಗಿದ್ದು ಈ ನಿಟ್ಟಿನಲ್ಲಿ ಯುವಕ ಹಾಗೂ ಯುವತಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ಕೇದರನಾಥ ದೇವಾಲಯದ ಅರ್ಚಕರು ಈ ಸಂಬಂಧ ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ಪೊಲೀಸರಿಗೆ ಪತ್ರ ಬರೆದಿರುವ ದೇವಸ್ಥಾನದ ಅರ್ಚಕರು ದೇವಸ್ಥಾನದಲ್ಲಿ ಈ ರೀತಿ ವಿಡಿಯೋ ಮಾಡುವುದರಿಂದ ಧಾರ್ಮಿಕ ಕ್ಷೇತ್ರದ ಪಾವಿತ್ರತೆಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಿದೆ. ಇಂತಹ ವಿಡಿಯೋ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಎಂದು ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಲಾಗಿದೆ.

complaint letter
ದೂರಿನ ಪ್ರತಿ

ಕಠಿಣ ಕ್ರಮಕ್ಕೆ ಆಗ್ರಹ

ವೈರಲ್​ ಆಗಿರುವ ವಿಡಿಯೋದಲ್ಲಿ ಯುವತಿ ಒಬ್ಬಳು ಕೇದರನಾಥ ದೇವಾಲಯದ ಮುಂಭಾಗ ಮಂಡಿಯೂರಿ ತನ್ನ ಪ್ರಿಯಕರನಿಗೆ ಪ್ರಪೋಸ್​ ಮಾಡುತ್ತಾಳೆ. ಇದನ್ನು ಕಂಡು ಕೆಲವರು ಆಶ್ಚರ್ಯಕ್ಕೆ ಒಳಗಾದರೆ ಮತ್ತಷ್ಟು ಜನ ಇದನ್ನು ತಮ್ಮ ಮೊಬೈಲ್​ ಫೋನಿನಲ್ಲಿ ಸೆರೆ ಹಿಡಿಯುತ್ತಾರೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವರು ಖಂಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿಡಿಯೋ ವೈರಲ್​ ಆಗಲೆಂದು ಈ ರೀತಿ ಮಾಡುವುದು ಸರಿಯಲ್ಲ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತ ಕೃತ್ಯವಾಗಿದ್ದು, ಈ ರೀತಿ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಗಳು ಕೇಳಿ ಬಂದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net