More

  ನನಗೆ ಬೆಡ್​ ಮೇಲೆ ರೋಶನ್​ ಬೇಕು! ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ನಿಹಾರಿಕಾ ಕೊನಿದೆಲ ಹೇಳಿಕೆ

  ಹೈದರಾಬಾದ್​: ನಟಿ ನಿಹಾರಿಕಾ ಕೊನಿದೆಲ ಅವರು 2016ರಲ್ಲಿ ತೆರೆಕಂಡ ಒಕ ಮನಸು ಸಿನಿಮಾ ಮೂಲಕ ಟಾಲಿವುಡ್​ಗೆ ಪದಾರ್ಪಣೆ ಮಾಡಿದರು. ಎಲ್ಲದಕ್ಕಿಂತ ಅವರು ಟಾಲಿವುಡ್​ ಸ್ಟಾರ್​ ನಾಗೇಂದ್ರ ಬಾಬು ಅವರ ಪುತ್ರಿ ಎಂಬ ಪ್ರಖ್ಯಾತಿ ಇದೆ. ಚಿರಂಜೀವಿ ಮತ್ತು ಪವನ್​ ಕಲ್ಯಾಣ್​ ಮಾವಂದಿರಾಗಿದ್ದು, ನಿಹಾರಿಕಾಗೆ ಟಾಲಿವುಡ್​ನಲ್ಲಿ ಬಹುದೊಡ್ಡ ಅಭಿಮಾನಿ ಬಳಗವಿದೆ. ಪ್ರಸ್ತುತ ಎಲಿಫೆಂಟ್​ ಪಿಕ್ಚರ್ಸ್​ ನಿರ್ಮಾಣದ ಡೆಡ್​ ಪಿಕ್ಸೆಲ್ಸ್​ ಹೆಸರಿನ ವೆಬ್​ ಸರಣಿಯಲ್ಲಿ ನಿಹಾರಿಕಾ ನಟಿಸಿದ್ದಾರೆ. ಇತ್ತೀಚೆಗಷ್ಟೇ ಆ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದೆ. ಅದರಲ್ಲಿರುವ ಒಂದು ಡೈಲಾಗ್​ ಇದೀಗ ಸಿಕ್ಕಾಪಟ್ಟೆ ಟ್ರೋಲ್​ ಆಗಿದೆ.

  ಬೆಡ್​ ಮೇಲೆ ರೋಶನ್​ ಬೇಕು

  ನನಗೆ ಬೆಡ್​ ಮೇಲೆ ರೋಶನ್​ ಬೇಕು ತಲೆಯಲ್ಲಿ ಭಾರ್ಗವ್​ ಇರಬೇಕು ಎಂದು ನಿಹಾರಿಕಾ ಅವರು ಹೇಳಿರುವ ಡೈಲಾಗ್​ ಟ್ರೈಲರ್​ನಲ್ಲಿದೆ. ಇದೀಗ ಈ ಡೈಲಾಗ್​ ಭಾರೀ ಟೀಕೆ ಮತ್ತು ಟ್ರೋಲ್​ಗೆ ಗುರಿಯಾಗಿದೆ. ನಿಹಾರಿಕಾ ಅವರು ಪ್ರೇಕ್ಷಕರಿಗೆ ಯಾವ ರೀತಿಯ ಸಂದೇಶ ಕೊಡಲು ಹೊರಟಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಯಾವ ರೀತಿಯ ಸಂದೇಶ ಇದೆ ಎಂಬುದರ ಮೇಲೆ ನಿಹಾರಿಕ ಗಮನ ಹರಿಸಿದರೆ ಒಳ್ಳೆಯದು ಎಂದು ಚಿರಂಜೀವಿ ಅಭಿಮಾನಿಗಳು ಬುದ್ಧಿಮಾತು ಹೇಳುತ್ತಿದ್ದಾರೆ. ಒಳ್ಳೆಯ ಯಶಸ್ಸು ಕಾಣಬೇಕಾದರೆ ಇಂತಹ ಡೈಲಾಗ್​ಗಳನ್ನು ನಿಹಾರಿಕಾ ಅವರು ಆದಷ್ಟು ನಿರ್ಲಕ್ಷಿಸಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

  ಇದನ್ನೂ ಓದಿ: 2615 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರ: ಸಣ್ಣಪುಟ್ಟ ಗಲಾಟೆ ಹೊರತುಪಡಿಸಿ ಶಾಂತಿಯುತ ಮತದಾನ; ಫಲಿತಾಂಶದತ್ತ ಎಲ್ಲರ ಚಿತ್ತ

  ಏನು ಉತ್ತರ ನೀಡುತ್ತಾರೆ?

  ಇನ್ನು ನಿಹಾರಿಕಾ ಅವರು ಡೆಡ್ ಪಿಕ್ಸೆಲ್ಸ್ ಸರಣಿಯನ್ನು ಚೆನ್ನಾಗಿ ಪ್ರಚಾರ ಮಾಡುತ್ತಿದ್ದಾರೆ. ಇದೀಗ ಟ್ರೋಲ್​ ಆಗುತ್ತಿರುವುದರಿಂದ ವಿವಾದಿತ ಡೈಲಾಗ್ ಬಗ್ಗೆ ನಿಹಾರಿಕಾ ಏನು ಉತ್ತರ ನೀಡುತ್ತಾರೆ ಎಂದು ಕೇಳಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ನಿಹಾರಿಕಾ, ಸಾಯಿರೋನಕ್ ಮತ್ತು ಹರ್ಷಾ ಚೆಮುಡು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಡೆಡ್ ಪಿಕ್ಸೆಲ್ಸ್ ವೆಬ್ ಸರಣಿಯನ್ನು ಆದಿತ್ಯ ಮಂಡಲ್ ನಿರ್ದೇಶನ ಮಾಡಿದ್ದಾರೆ. ಈ ಸರಣಿಯು ಮೇ 19 ರಿಂದ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.

  ಬ್ರಿಟಿಷ್ ಸರಣಿಯ ಡೆಡ್ ಪಿಕ್ಸೆಲ್‌ಗಳನ್ನು ಆಧರಿಸಿ ಈ ಸರಣಿಯನ್ನು ನಿರ್ಮಿಸಲಾಗಿದೆ. ಡೆಡ್ ಪಿಕ್ಸೆಲ್ಸ್ ಸರಣಿಯು ಆರು ಭಾಗಗಳಲ್ಲಿ ತಯಾರಾಗುತ್ತಿದೆ ಎಂದು ತಿಳಿದಿದೆ. ನಿಹಾರಿಕಾ ಈ ಸರಣಿಯಲ್ಲಿ ಆಧುನಿಕ ಹುಡುಗಿ ಗಾಯತ್ರಿ ಪಾತ್ರದಲ್ಲಿ ನಟಿಸಿದ್ದಾರೆ.

  ಇದನ್ನೂ ಓದಿ: ಜಗತ್ತನ್ನೇ ಕಬ್ಜಾ ಮಾಡಿಕೊಂಡ ತಂತ್ರಜ್ಞಾನ!; ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ

  ವಿಚ್ಛೇದನ ಸುದ್ದಿ

  ಇದರಿಂದಾಚೆಗೆ ನಿಹಾರಿಕಾ ಅವರ ವೈವಾಹಿಕ ಜೀವನವು ಕೂಡ ಭಾರೀ ಸುದ್ದಿಯಲ್ಲಿದೆ. ಪತಿಯ ಜತೆ ನಿಹಾರಿಕಾ ವೈಮನಸ್ಸು ಹೊಂದಿದ್ದು, ಇಬ್ಬರು ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಾರೆ. ಆದರೆ, ಇದ್ಯಾವುದರ ಬಗ್ಗೆಯೂ ನಿಹಾರಿಕಾ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್​)

  ಜಗತ್ತನ್ನೇ ಕಬ್ಜಾ ಮಾಡಿಕೊಂಡ ತಂತ್ರಜ್ಞಾನ!; ಇಂದು ರಾಷ್ಟ್ರೀಯ ತಂತ್ರಜ್ಞಾನ ದಿನ

  ಮತ ಚಲಾಯಿಸಿ ಬೇಸರ ಹೊರಹಾಕಿದ ನಟ ಅನಂತ್​ ನಾಗ್​!

  ನನ್ನ ಮಗಳು ಫಸ್ಟ್​ಟೈಮ್​ ವೋಟ್ ಮಾಡುತ್ತಿದ್ದಾಳೆ: ಕಿಚ್ಚ ಸುದೀಪ್ ಸಂಭ್ರಮ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts