More

  ನನ್ನ ಮಗಳು ಫಸ್ಟ್​ಟೈಮ್​ ವೋಟ್ ಮಾಡುತ್ತಿದ್ದಾಳೆ: ಕಿಚ್ಚ ಸುದೀಪ್ ಸಂಭ್ರಮ!

  ಬೆಂಗಳೂರು: ಕಿಚ್ಚ ಸುದೀಪ್ ಬಿಜೆಪಿ ಪರವಾಗಿ ಪ್ರಚಾರ ಮಾಡಿದಾಗಿನಿಂದ ಸುದ್ದಿಯಲ್ಲಿದ್ದಾರೆ. ಅದರಲ್ಲೂ ‘ಬೊಮ್ಮಾಯಿ ಮಾಮ’ ಪರವಾಗಿ ಪ್ರಚಾರ ಮಾಡಿದಾಗಿನಿಂದ ಹಿಡಿದು ಅವರ ಈ ನಡೆಯ ಬಗ್ಗೆ ಪರ ವಿರೋಧಗಳು ಕೇಳಿ ಬರುತ್ತಿದ್ದವು. ಇಂದು ರಾಜ್ಯದ ಭವಿಷ್ಯ ನಿರ್ಧಾರ ಆಗುವ ದಿನ ಆಗಿದ್ದು ಕಿಚ್ಚ ಸುದೀಪ್ ಪುಟ್ಟೇನಹಳ್ಳಿ ಆಕ್ಸ್‌ಫರ್ಡ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂದರ್ಭ ಅವರು ತಮ್ಮ ಮಗಳ ಪ್ರಥಮ ಮತದಾನದ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.

  ಇದನ್ನೂ ಓದಿ: ಸುದೀಪ್ ಮೂರು ತಾಸಿನ ನಾಯಕನಷ್ಟೇ: ಸತೀಶ್ ಜಾರಕಿಹೊಳಿ

  ಈ ಸಂದರ್ಭ ಮಾತನಾಡಿದ ಕಿಚ್ಚ “ನನ್ ಮಗಳು ಫಸ್ಟ್ ಟೈಮ್ ವೋಟ್ ಮಾಡ್ತಿದಾಳೆ. ರೋಡ್ ತುಂಬಾ ವೀಡಿಯೋ ಮಾಡ್ತಾ ಬಂದೆ. ನನ್ನ ಮಗಳು ಏನೆ ಮಾಡಿದ್ರು ಅದನ್ನ ವೀಡಿಯೋ ಮಾಡಿ ಸೆಲೆಬ್ರೇಟ್ ಮಾಡ್ತೀನಿ

  ಬಾಯಿ ತೆರೆದಿಡೋ ತನಕ ಸುರೀತಾ ಇರ್ತಾರೆ

  ಹಣ ಹೆಂಡ ಅಂತಾ ಕೊಡೋರನ್ನ ದೂರಬೇಡಿ. ನಿಮಗೆ ಆಸೆನೆ ಇಲ್ಲಾ ಅಂದ್ರೆ ಆಸೆ ಹೇಗೆ ತೋರಿಸೋಕೆ ಆಗುತ್ತೆ. ಇಸ್ಕೊಳೋರಿಗೆ ಬಯ್ಯರಿ. ಬಾಯಿ ಓಪನ್ ಮಾಡೋತನಕ ಸುರಿಯೋರು ಇರ್ತಾರೆ. ನಿಮ್ಮ ತಪ್ಪು ಇದೆ ಅನ್ನೋದನ್ನ ಮರಿಬೇಡಿ

  ವೋಟರ್ಸ್ ಇದ್ರೂ ಕೆಲವ್ರು ಬರದೇ ಇರೋದು ಶಾಕ್ ನೀಡಿದೆ. ಇಶ್ಯೂ ಬೇರೆಯವ್ರ ರೀತಿ ಬೇರೆ ಬೇರೆ ಇರುತ್ತೆ. ನಾರ್ಥ್ ಕರ್ನಾಟಕದಲ್ಲಿ ತುಂಬಾ ಬದಲಾವಣೆ ಆಗಬೇಕಾಗಿದೆ. ಅವ್ರಿಗೆ ಎಲ್ಲಾ ತುಂಬಾ ಒಳ್ಳೆ ಲೈಫ್ ಸಿಗಬೇಕು. ಜನರೇ ಬದಲಾಗಬೇಕು. ಜನಪ್ರತಿನಿಧಿಗಳನ್ನ ದೂರಬೇಡಿ.

  ಇದನ್ನೂ ಓದಿ: ಕೂಡ್ಲಿಗಿಗೆ ಕಿಚ್ ಸುದೀಪ್ ಆಗಮನ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ

  ವೋಟ್ ಮಾಡೋದನ್ನ ನಾವು ಹೇಳಬೇಕಾಗಿಲ್ಲ ಅವರೇ ಮಾಡಬೇಕು. ನಾನು ಯಾರ್ ಯಾರಿಗೆ ಸಪೋರ್ಟ್ ಮಾಡಿದಿನೋ ಅವರೆಲ್ಲಾ ಗೆಲ್ಲಬೇಕು ಅಂತಾ ಇಷ್ಟ ಪಡ್ತೀನಿ. ಈ ಸಲ ಸ್ಟಾರ್ ಕ್ಯಾಂಪೇನರ್ ಆಗಿ ಸ್ವಲ್ಪ ಕಪ್ಪಾಗಿದಿನಿ

  ರಾಜಕೀಯ ಇಷ್ಟ… ಆದ್ರೆ ಬರ್ತೀನಿ…

  ಯಂಗ್​ಸ್ಟರ್ಗಳು ಕಲವ್ರು ಬಂದಿಲ್ಲ, ಅವರೂ ಬರ್ತಾರೆ ಬಿಡಿ. ಅದೇ ಊರಲ್ಲಿ ಹೋಗಿ ಮೈಕ್ ಹಾಕ್ಕೊಂಡ್ ನಿತ್ಕೊಂತಿನಿ. ನಾನು ಕ್ಯಾಂಪೇನ್ ಮಾಡಿರೋ ಜಾಗದಲ್ಲಿ ಬದಲಾವಣೆಗಳು ಆಗಬೇಕು. ನಾನು ಟೀಮ್​ನಲ್ಲಿ ಆಟಗಾರ ಆಗಿರಬೇಕು. ಕ್ಯಾಪ್ಟನ್,ಉಪಮುಖ್ಯಂಮತ್ರಿ ಆಗಲ್ಲ. ರಮ್ಯಾ ನನ್ನ ಫ್ರೆಂಡ್. ಮುಂದೆ ರಾಜಕೀಯ ಇಷ್ಟ ಆದ್ರೆ ಬರ್ತೀನಿ” ಎಂದಿದ್ದಾರೆ.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts