More

  ಬೀದರ್​ನಲ್ಲಿ ಮತದಾನ ಬಹಿರಂಗ! ಫೋಟೊ ವೈರಲ್…

  ಬೀದರ್: ಪ್ರಜಾ ಪ್ರಭುತ್ವದಲ್ಲಿ ಮತದಾನ ಗೌಪ್ಯವಾಗಿ ನಡೆಯಬೇಕು. ಯಾರು ಯಾರಿಗೆ ಮತ ಹಾಕಿದ್ದಾರೆ ಎನ್ನುವ ಮಾಹಿತಿ ಬಹಿರಂಗ ಆದಲ್ಲಿ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ. ಹೀಗಿದ್ದೂ ಬೀದರ್​ ಜಿಲ್ಲೆಯಲ್ಲಿ ಪ್ರಕಾಶ ಖಂಡ್ರೆ ಹಾಗೂ ಈಶ್ವರ ಖಂಡ್ರೆ ಪರವಾಗಿ ಮತ ಚಲಾಯಿಸಿದ ಫೋಟೊಗಳು ವೈರಲ್ ಆಗಿವೆ.

  ಈ ಘಟನೆ ನಡೆದದ್ದು ಬೀದರ್​ ಜಿಲ್ಲೆಯ ಭಾಲ್ಕಿಯಲ್ಲಿ. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈಶ್ಬರ ಖಂಡ್ರೆ ಪರ ಮತದಾನ ಮಾಡಿರುವ ಫೋಟೋಗಳು ವೈರಲ್ ಆಗುತ್ತಿವೆ. ಅದರೊಂದಿಗೆ ಬೀದರ್ ಉತ್ತರ ಕ್ಷೇತ್ರದ ಜೆಡಿಎಸ್ ಸೂರ್ಯಕಾಂತ ನಾಗರಮಾರಪಳ್ಳಿ ಕ್ರಮ ಸಂಖ್ಯೆ -05 ಕ್ಕೆ ಮತದಾನ ಮಾಡಿದ್ದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

  ಮತದಾನ ಗೌಪ್ಯತೆ ಕಾಪಾಡಿಕೊಳದ ಜನರು ಬಿಜೆಪಿ ಅಭ್ಯರ್ಥಿ ಪ್ರಕಾಶ ಖಂಡ್ರೆ ಕ್ರಮ‌ಸಂಖ್ಯೆ -03ಕ್ಕೆ ಮಾಡಿರುವ ಮತದಾನದ ಪೊಟೋ ವೈರಲ್ ಆಗಿವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts