ಬೆಳಗ್ಗೆ ಏಳು ಗಂಟೆಯಿಂದ ಹನ್ನೊಂದು ಗಂಟೆ ಒಳಗಾಗಿ ರಾಜ್ಯಾದ್ಯಂತ 20.94% ಮತದಾನ!

Election Karnataka
Published on

ಬೆಂಗಳೂರು: ರಾಜ್ಯದಲ್ಲಿ ಇದುವರೆಗೂ ಶೇ. 20.94% ರಷ್ಟು ಮತದಾನ ನಡೆದಿದ್ದು ಕೇವಲ 4 ಗಂಟೆಗಳಲ್ಲಿ ಈ ಸಂಖ್ಯೆಯನ್ನು ತಲುಪಿದ್ದು ಉತ್ತಮ ಸ್ಟಾರ್ಟ್ ಆಗಿದೆ.

ಬೆಂಗಳೂರಿನಲ್ಲಿ ಮತದಾನ ಹೇಗಿದೆ?

ಬೆಂಗಳೂರು ಉತ್ತರ ಶೇ 17.50 % ಮತದಾನ ನಡೆದಿದ್ದು ಬೆಂಗಳೂರು ದಕ್ಷಿಣ 19.18 % ಮತದಾನವಾಗಿದೆ. ಬೆಂಗಳೂರು ಸೆಂಟ್ರಲ್​ನಲ್ಲಿ 19.30 % ಮತದಾನ ದಾಖಲಾಗಿದ್ದು ಬೆಂಗಳೂರು ಗ್ರಾಮೀಣ ವಿಭಾಗದಲ್ಲಿ 20.23 % ಮತದಾನವಾಗಿದೆ. ಬೆಂಗಳೂರು ಅರ್ಬನ್​ನಲ್ಲಿ 17.72 % ಮತದಾನವಾಗಿದೆ.

ಈ ಮಾಹಿತಿಯನ್ನು ನೋಡಿದಾಗ ಬೆಂಗಳೂರು ಗ್ರಾಮೀಣದ ಜನತೆ ಚುನಾವಣಾ ಹಬ್ಬದಲ್ಲಿ ಹೆಚ್ಚಾಗಿ ಪಾಲ್ಗೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net