ಮತದಾನ ಮಾಡಿದ ರಿಯಲ್ ಸ್ಟಾರ್; ಸೆಲ್ಫಿಗೆ ಮುಗಿಬಿದ್ದ ಜನರು

uppi
Published on

ಬೆಂಗಳೂರು: BTL ವಿದ್ಯಾವಾಹಿನಿ ಶಾಲೆಯ ಮತಗಟ್ಟೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕ್ಯೂ ನಲ್ಲಿ ನಿಂತು ಮತ ಚಲಾವಣೆ ಮಾಡಿದ್ದಾರೆ.

ಮತ ಚಲಾವಣೆ ಬಳಿಕ ನಟ/ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಹೇಳಿಕೆ ನೀಡಿದ್ದು "ದೊಡ್ಡದಾಗಿ ಕರ್ನಾಟಕದ ಹಾಗೂ ದೇಶದ ಭವಿಷ್ಯ ಅನ್ನೋದಕ್ಕಿಂತ ಸರಳವಾಗಿ ಹೇಳೋಣ, ನಮ್ಮ ಭವಿಷ್ಯ ಇದು. ಎಲ್ಲರೂ ವೋಟ್ ಮಾಡಿ. ವೋಟ್ ಮಾಡದೆ ಇರುವ 30% ಎದ್ದು ಬಂದು ವೋಟ್ ಮಾಡಿದ್ರೆ ಅದು ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆ ಆಗುತ್ತದೆ" ಎಂದಿದ್ದಾರೆ.

ಬುದ್ಧಿವಂತಿಕೆಯಿಂದ ಮತ ಚಲಾಯಿಸುವಂತೆ ಕೈಸನ್ನೆ ಮೂಲಕ ಸೂಚನೆ ನೀಡಿದ್ದು ಕೆಲವೆಡೆ ವೋಟ್ ಡಿಲೇಟ್ ಆಗಿ ಕೆಲವರಿಗೆ ವೋಟ್ ಮಾಡಲು ಅವಕಾಶ ಸಿಗದೆ ಇರುವ ವಿಚಾರದ ಬಗ್ಗೆಯೂ ಅವರು "ಆ ಬಗ್ಗೆ ನನಗೆ ಮಾಹಿತಿ ಇಲ್ಲ" ಎಂದು ಹೇಳಿಕೆ ನೀಡಿದ್ದಾರೆ.

ಮತಗಟ್ಟೆ 220ರಲ್ಲಿ ಉಪೇಂದ್ರ ಮತ ಚಲಾಯಿಸಿದ್ದು ನಂತರ ಅವರೊಂದಿಗೆ ಫೋಟೊ, ಸೆಲ್ಫಿ ತೆಗೆಸಿಕೊಳ್ಳಲು ಜನ ಮುಗಿಬಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net