ಜೆಡಿಎಸ್ ಅಭ್ಯರ್ಥಿ ಬೆಂಬಲಿಗ ಹಾಗೂ ಬೈರತಿ ಸುರೇಶ್ ನಡುವೆ ಮಾತಿನ ಚಕಮಕಿ!

bairarti suresh
Published on

ಬೆಂಗಳೂರು: ಆರ್​ಟಿ ನಗರದ ಪ್ರೆಸಿಡೆನ್ಸಿ ಶಾಲೆಯ ಮತಗಟ್ಟೆ ಬಳಿ ಜೆಡಿಎಸ್ ಅಭ್ಯರ್ಥಿ ಬೆಂಬಲಿಗ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ಮಾತಿನ ಚಕಮಕಿ ನಡೆದಿದೆ.

ಮತಗಟ್ಟೆ ಮುಂದೆ ನಿಂತ ಮತದಾರರ ಬಳಿ ಜೆಡಿಎಸ್​ಗೆ ಬೆಂಬಲ ನೀಡುವಂತೆ ಜೆಡಿಎಸ್​ ಅಭ್ಯರ್ಥಿಯ ಬೆಂಬಲಿಗರೊಬ್ಬರು ಮನವಿ ಮಾಡಿದ್ದಾರೆ. ಜೆಡಿಎಸ್​ ಬೆಂಬಲಿಗ ಜನರಲ್ಲಿ ಮನವಿ ಮಾಡಿದ್ದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್ ರೊಚ್ಚಿಗೆದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್, "ನಿಮಗೆ ವೋಟು ಇಲ್ಲದಿದ್ರೂ ಮತಗಟ್ಟೆಗೆ ಪ್ರವೇಶಿಸಿದ್ದೀರಾ. ಅದರ ಜತೆಗೆ ಇಲ್ಲಿ ಮತ ಕೇಳಿ ಕಾನುನು ಉಲ್ಲಂಘಿಸುತ್ತಿದ್ದೀರಾ. ಇಲ್ಲಿ ಬಂದು ರೌಡಿಸಂ ಮಾಡಬೇಡಿ" ಎಂದು ರೊಚ್ಚಿಗೆದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net