More

    ಬಂಜಾರ ಸಮುದಾಯದ ಸಾಂಪ್ರದಾಯಿಕ ದಿರಿಸಿನಲ್ಲೇ ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿಗಳು!

    ದಾವಣಗೆರೆ: ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆಂಜನೇಯಪುರ ಗ್ರಾಮದ ಬಂಜಾರ ಮತಗಟ್ಟೆಯಲ್ಲಿ ಸಿಬ್ಬಂದಿ ಸಾಂಪ್ರದಾಯಿಕ ಉಡುಪಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಬಂಜಾರ ಜನಾಂಗದವರೇ ಹೆಚ್ಚಾಗಿರುವ ಈ ಗ್ರಾಮದಲ್ಲಿ ಕಳೆದ ಬಾರಿ ಶೇ. 83ರಷ್ಟು ಮತದಾನವಾಗಿತ್ತು. ಈ ಬಾರಿ ಶೇ. 100ರಷ್ಟು ಮಾಡುವ ಗುರಿಯೊಂದಿಗೆ ಮತಗಟ್ಟೆಯನ್ನು ವಿಶೇಷವಾಗಿ ರೂಪಿಸಲಾಗಿದೆ.

    ಬಂಜಾರ ಸಮುದಾಯದವರು ಆಚರಿಸುವ ಹಬ್ಬಗಳು, ಅವರ ವೇಷ-ಭೂಷಣಗಳು, ಡೊಳ್ಳು, ನಗಾರಿಯ ಚಿತ್ರಗಳು, ಸಂತ ಶ್ರೀ ಸೇವಾಲಾಲ್ ಮಹಾರಾಜ್ ಅವರ ಚಿತ್ರವನ್ನು ಗೋಡೆ ಮೇಲೆ ಬಿಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts