More

    ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ, ಕಣ್ಮುಚ್ಚಿ ಕೈಗೆ ವೋಟ್ ಮಾಡಿ: ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ

    ಬೆಂಗಳೂರು: ಚುನಾವಣೆಯ ಅಧಿಕೃತ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ್ದಾರೆ.

    ತಮ್ಮ ಭಾಷಣದಲ್ಲಿ ಖರ್ಗೆ, “ಕರ್ನಾಟಕ ರಾಜ್ಯದ ಭವಿಷ್ಯ ಬದಲಾಯಿಸುವ ಚುನಾವಣೆಯಾಗಿದ್ದು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಮಧ್ಯೆ ಪೈಪೋಟಿ ಚುನಾವಣೆ ಅಲ್ಲ. ರಾಜ್ಯದ ಪರ ಯಾವ ಪಕ್ಷ ಒಳ್ಳೆಯ ಕೆಲಸ ಮಾಡುತ್ತೆ ಮಾಡಬಹುದು ಅಂತ ಪಕ್ಷಕ್ಕೆ ಮತ ಕೊಡೊ ಅಧಿಕಾರ ಜನರಿಗಿದೆ. ನಾವು ಅದು ಮಾಡಿದೆವೆ ಇದು ಮಾಡಿದಿವೆ ಅಂತಾ ಮೋದಿ ಬಂದು ಹೇಳ್ತಾರೆ. ಮೇರಿ ಸರ್ಕಾರ್ ಡಬಲ್ ಇಂಜಿನ್ ಸರ್ಕಾರ ಬಹುತ್ ಕಾಮ್ ಕರಾ ಹೈ ಅಂತಾರೆ.

    ಡಬಲ್ ಇಂಜಿನ್ ಸರ್ಕಾರ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನು ಕೊಡುಗೆ ಕೊಟ್ಟಿದ್ದಿರಿ? ನಾನು‌ ಕಲ್ಯಾಣ ಕರ್ನಾಟಕ ಭಾಗಕ್ಕೆ ಏನು ಕೊಟ್ಟಿದ್ದೆನೆ ಅನ್ನೊದು ಒಂದೊಂದಾಗಿ ಹೇಳುವೆ. ನಾವು ಮಾಡಿದ ಕೆಲಸದ ಲೆಕ್ಕ ಪತ್ರ ನಿಮ್ಮ ಮುಂದೆ ಇಡುತ್ತೇವೆ

    “ಬಂತಾ 15 ಲಕ್ಷ ರೂ?”

    ಆರ್ಟಿಕಲ್ 371(J) ಏನ್ ಬೊಮ್ಮಾಯಿ ಕೊಟ್ಟಿದಾರ? ಮತ್ಯಾಕೆ ಈ ಸರ್ಕಾರಕ್ಕೆ ಪಕ್ಷಕ್ಕೆ ಮತ ಕೊಡಬೇಕು? 371(ಜೆ) ಯಿಂದ ಅನೇಕ ನೌಕರಿ ಶಿಕ್ಷಣ ಸಿಗುತ್ತಿದೆ. ಆರ್ಟಿಕಲ್ 371(ಜೆ) ಬಿಲ್ ಅಂದು ಬಿಜೆಪಿ ಕಚಡಾ ಡಬ್ಬಿಯಲ್ಲಿ ಬಿಸಾಕಿದ್ದರು. ನಾವು ವೆಸ್ಟ್ ಡಬ್ಬಿಯಿಂದ ತೆಗೆದು ಬಿಲ್ ಪಾಸ್ ಮಾಡಿದೆವು. ನೀವು ಪ್ರತಿಯೊಂದು ಚುನಾವಣೆಯಲ್ಲಿ ಜನರಿಗೆ ಮೋಸ ಮಾಡಿದ್ರಿ. ಹೊರದೇಶಗಳಲ್ಲಿನ ಕಪ್ಪುಹಣ ತಂದು ನಿಮ್ಮೆಲ್ಲರ ಅಕೌಂಟ್‌ಗೆ 15 ಲಕ್ಷ ರೂ ಹಾಕ್ತಿನಿ ಅಂದ್ರು. ಬಂತಾ ನಿಮ್ಮೆಲ್ಲರ ಅಕೌಂಟ್‌ಗೆ 15 ಲಕ್ಷ ರೂ ಹಣ?

    ಪ್ರತಿವರ್ಷ 2 ಕೋಟಿ ಉದ್ಯೋಗ ಕೊಡ್ತಿನಿ ಅಂತಾ ಹೇಳಿದ್ರು, ಸಿಗ್ತಾ ನಿಮಗೆ ಉದ್ಯೋಗ? ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಮೋದಿ ಹೇಳಿದ್ರು! ಆಗಿದೆಯಾ ಆದಾಯ ದುಪ್ಪಟ್ಟು? ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ರಾಜ್ಯದಿಂದ/ಕೇಂದ್ರದಿಂದ ಎಷ್ಟು ಹಣ ಕೊಟ್ಟಿರಿ? ಲೆಕ್ಕ ಕೊಡಿ. ಮೇರಿ ಸರ್ಕಾರ್ ಬಹುತ್ ಅಚ್ಛಾ ಕಾಮ್ ಕರೆ ಅಂತಾರೆ. ಅರೇ ಈ ಸರ್ಕಾರ ಬರೀ 40% ನಲ್ಲೆ ಮುಳುಗಿದೆ

    ನಾ ಖಾವುಂಗಾ ನ ಖಾನೆ ದೇವುಂಗಾ ಅಂತಾ ಮೋದಿ ಹೇಳ್ತಾರೆ. ನಿಮ್ಮ ಪಕ್ಕದಲ್ಲೆ ತಿನ್ನೊರು ಕುಳಿತಿರುತ್ತಾರೆ..ಅವರ ಪರನೇ ಪ್ರಚಾರ ಮಾಡ್ತಿರಿ. 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಅಂತಾ ಕೇಳ್ತಾರೆ. ಅರೇ ನಾವು 70 ವರ್ಷಗಳಲ್ಲಿ ಏನು ಮಾಡದಿದ್ದಲ್ಲಿ ನಿಮಗೆ ಓದೊಕೆ ಒಂದು ಶಾಲೆ ಕೂಡ ಸಿಗ್ತಿರಲಿಲ್ಲ. ಸ್ವಾತಂತ್ರ್ಯ ಸಿಕ್ಕಮೇಲೆ ನಮ್ಮ ಭಾಗದಲ್ಲಿ 70% ಜನ್ರಿಗೆ ಬರೆಯೊದು ಅಥವಾ ಸಹಿ ಮಾಡೊದು ಬರ್ತಿದೆ. ನಾವು ಸುಳ್ಳು ಹೇಳ್ತಿದಿವಾ ಅಥವಾ ಅವರು ಸುಳ್ಳು ಹೇಳ್ತಿದಾರ ನೀವೇ ನಿರ್ಧಾರ ಮಾಡಿ” ಎಂದು ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

    ಇಂದು ಸಿಲಿಂಡರ್ ಬೆಲೆ ಎಷ್ಟಿದೆ ಅನ್ನೊದು ಗೋತ್ತಿದೆಯಾ? ನಾವು ಇದ್ದಾಗ 410 ರೂ ಸಿಲಿಂಡರ್ ಬೆಲೆ ಇತ್ತು. ಇಂದು ಎಷ್ಟಾಗಿದೆ ಸಬ್ ಕಾ ಸಾಥ್ ಸಬ್ ಕಾ ವಿಕಾಸ್.. ಬಾಕಿ ಲೋಗೊಂಕಾ ಸತ್ಯಾನಾಶ್. ಹೇಳಿದ್ದೆ ಸುಳ್ಳನ್ನ ಎಷ್ಟು ಬಾರಿ ಸುಳ್ಳು ಹೇಳ್ತಿರ ಮೋದಿಯವರೇ? ಮೋದಿಯವರ ಸುಳ್ಳು ಮಾತುಗಳು ಜನರಿಗೆ ನಿಜ ಅನಿಸುತ್ತಿವೆ.

    ಈ ದೇಶಕ್ಕೆ ಸ್ವಾತಂತ್ರ್ಯ ತಂದವರು ನೀವಾ? ಸೋನಿಯಾ ಗಾಂಧೀ ಬಡವರಿಗೆ ಫುಡ್ ಸೆಕ್ಯುರಿಟಿ ಆ್ಯಕ್ಟ್ ತಂದಿದ್ದರು. ಅದರಲ್ಲೂ ಗೋಲ್‌ಮಾಲ್ ಮಾಡಿ ಆ್ಯಕ್ಟ್ ಹಳ್ಳ ಹಿಡಿಸಿದರು. ಡಬಲ್ ಇಂಜಿನ್ ಸರ್ಕಾರ ಜನರ ಕೆಲಸ ಮಾಡುತ್ತಿಲ್ಲ

    ಒಂದು ಸ್ಟೇಟ್‌ದು ಇಂಜಿನ್ ಖರಾಬ್ ಆಗಿದೆ. 2024 ರಲ್ಲಿ ಮೇಲಿನ ಇಂಜಿನ್ ಸಹ ಕೆಟ್ಟು ಹೋಗುತ್ತದೆ. ಇಂಜಿನ್ ಖರಾಬ್ ಆದಮೇಲೆ ಹಳಿ ಮೇಲೆ ಬರಲ್ಲ. ಡಬಲ್ ಇಂಜಿನ್ ಸರ್ಕಾರವೆಂದು ಪದೇ ಪದೇ ಮೋದಿ/ಶಾ ರಾಜ್ಯಕ್ಕೆ ಏನು ಮಾಡುವುದಿಲ್ಲ. ನಮಗೆ ಅಧಿಕಾರ ಕೊಡಿ. ನಾವು ನಿಮ್ಮ ಕೆಲಸ ಮಾಡಿ ತೋರಿಸುತ್ತೇವೆ. ಕೊಟ್ಟ ಕೆಲಸ ನಾವು ನಿಭಾಯಿಸುತ್ತೇವೆ. ನಮಗೆ ಬಹುಮತ ಇಲ್ಲದಿದ್ದರು ಸಹ ಹೈದರಾಬಾದ್​ ಕರ್ನಾಟಕ ಭಾಗಕ್ಕೆ 371(J) ನೀಡಿದ್ದೇವೆ.

    ನಮ್ಮ ಕಾಲದಲ್ಲಿ ಮಾಡಿರೋ ರೋಡಿನ ಮೇಲೆ ತಗ್ಗು ಬಿದ್ದರು ಸಹ ಅದರ ಮೇಲೆ ಬುಟ್ಟಿ ಮಣ್ಣು ಕೂಡ ಈ ಸರ್ಕಾರ ಹಾಕಿಲ್ಲ. ಬೊಮ್ಮಾಯಿವರು ಕಲಬುರಗಿಗೆ ಏನೂ ಕೊಟ್ಟಿಲ್ಲ. ನಾವು ಕೇಳಿದ್ದನ್ನ-ಕೇಳದಿರೋದನ್ನೆಲ್ಲ ಅಭಿವೃದ್ಧಿ ಮಾಡಿದ್ದೇವೆ. ಆದರೆ ಇವರು ಬರೀ ಹಿಂದೂ ಮುಸಲ್ಮಾನರ ಮಧ್ಯೆ ಜಗಳ ಹಚ್ಚುತ್ತಾರೆ. ಲೂಟಿ ಹೊಡೆಯುವರಿಂದಲೇ ನಮ್ಮ ಭಾಗ ಅಭಿವೃದ್ಧಿ ಹೊಂದುತ್ತಿಲ್ಲ. ನಾವು ಈ ಭಾಗದ ಅಭಿವೃದ್ಧಿಗಾಗಿ ಬಡಿದಾಡಿ ಕೆಲಸ ಮಾಡಿದ್ದೇವೆ.

    ಬಿಜೆಪಿ ಸರ್ಕಾರ ಉತ್ತರ ಕರ್ನಾಟಕ ಎಂದರೆ ಕೇವಲ ಹುಬ್ಬಳ್ಳಿ/ಬೆಳಗಾವಿ ತಿಳಿದುಕೊಂಡಿದ್ದಾರೆ. ನಮ್ಮಿಂದ ಎಲ್ಲಾ ಆಗಿದೆ ಅಂತಾ ಮೋದಿ ಹಾಗೇ ಹೇಳುವವರಿಗೆ ಓಟ್ ಕೊಡಬೇಡಿ” ಎಂದು ಈ ಸಂದರ್ಭ ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಭಾಷಣದ ವೇಳೆ ವೇದಿಕೆ ಮೇಲೆ ಕೈ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ ಧೀರ್ಘದಂಡ ನಮಸ್ಕಾರ ಹಾಕಿದ್ದಾರೆ.

    ನಾವು ಕೊಟ್ಟ ಗ್ಯಾರಂಟಿಗಳಿಗೆ ಕಾಂಗ್ರೆಸ್‌ ಹಣ ಎಲ್ಲಿಂದ ತರುತ್ತಾರೆ ಅಂತಾ ಕೇಳ್ತಾರೆ. ನಾವು ಕೊಟ್ಟ ಗ್ಯಾರಂಟಿಗಳ ಅನುಷ್ಠಾನಕ್ಕೆ ದಾರಿ ಹುಡುಕುತ್ತೇವೆ” ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

    ಅಲ್ಲಾ ದೇತಾ ಭೀ ಹೈ.. ಮಗರ್ ಟಾಂಗ್ ತೋಡ್ ​ಕೆ ದೇತಾ ಹೈ

    ತಮ್ಮ ಭಾಷಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ “ಅಲ್ಲಾ ದೇತಾ ಭೀ ಹೈ.. ಮಗರ್ ಟಾಂಗ್ ತೋಡ್ ​ಕೆ ದೇತಾ ಹೈ. ದೇವರು ಕೊಡ್ತಾನೆ. ಆದರೆ ಕಾಲು ಮುರಿದು ಕೊಡ್ತಾನೆ. ನಾನು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ… ಕಣ್ಮುಚ್ಚಿ ಕೈಗೆ ಓಟ್ ಮಾಡಿ” ಎಂದಿದ್ದಾರೆ. “ನಿಮ್ಮ ಆಶಿರ್ವಾದದಿಂದ ನಾನು ಈ‌ ಮಟ್ಟಕ್ಕೆ ಹೋಗಿದ್ಷೇನೆ. ನಾನು ಲೋಕಸಭೆ ಚುನಾವಣೆಯಲ್ಲಿ ಸೋತರು ಸಹ ರಾಜ್ಯಸಭಾ ಸ್ಥಾನ ನೀಡಿದರು. ನಾನು ಇರಬಹುದು ಅಥವಾ ಸಾಯಬಹುದು.. ಇದು ಕಲಬುರಗಿ ‌ಜನರ ಮರ್ಯಾದೆಯ ಚುನಾವಣೆ. ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷ ನಿಮ್ಮ ಊರಿನವ. ಹೀಗಾಗಿ ಸೋಲು -ಗೆಲುವು ನಿಮ್ಮ ಕೈಯಲ್ಲಿದೆ. ಕಾಂಗ್ರೆಸ್‌ ಸಮಾವೇಶದಲ್ಲಿ ಕೆಲಕಾಲ ಭಾವುಕರಾಗಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts