ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ!

bellary crime
Published on

ಬಳ್ಳಾರಿ: ಮತಗಟ್ಟೆಗಳ ಬಳಿ ಅದೆಷ್ಟೇ ಬಂದೋಬಸ್ತ್ ನಡೆಸಿದರೂ ಎಲ್ಲಾದರೂ ಒಂದು ಕಡೆ ವೈಯಕ್ತಿಕ ಕಾರಣಕ್ಕೋ, ಕ್ಷುಲ್ಲಕ ಕಾರಣಕ್ಕೋ ಜಗಳಗಳು ನಡೆಯುತ್ತವೆ. ಇವನ್ನು ತಕ್ಷಣವೇ ಹತೋಟಿಗೂ ಪೊಲೀಸರು ತರುತ್ತಾರೆ. ಇಂತಹದೇ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಸಂಜೀವರಾಯನಕೋಟೆ ಗ್ರಾಮದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ತಕರ್ತರ ನಡುವೆ ಮಾರಾಮಾರಿ ನಡೆದಿದ್ದು ಇದರಿಂದಾಗಿ ಕಾಂಗ್ರೆಸ್ ಸ್ಥಳೀಯ ಮುಖಂಡ ಉಮೇಶ್ ಗೌಡ ತಲೆಗೆ ಗಾಯವಾಗಿದೆ.

ಇತ್ತಿಚೆಗೆ ಉಮೇಶ್ ಗೌಡ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಮತದಾನಕ್ಕೆ ತೆರಳುವ ವೇಳೆ ಕ್ಷುಲ್ಲಕ ಕಾರಣಕ್ಕೆ ಉಮೇಶ್ ಗೌಡ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.

ಈ ವೇಳೆ ಉಮೇಶ್ ಗೌಡ ಅವರಿಗೆ ತಲೆಗೆ ಕಲ್ಲೇಟು ಬಿದ್ದಿದ್ದು ತಲೆಗೆ ಗಾಯವಾಗಿದ್ದು ರಕ್ತ ಸುರಿದಿದೆ. ತಕ್ಷಣವೇ ಸ್ಥಳಕ್ಕೆ ಬಳ್ಳಾರಿ ಗ್ರಾಮೀಣ ಪೋಲಿಸರು ದೌಡಾಯಿಸಿದ್ದು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net