More

  ಸುದೀಪ್ ಮೂರು ತಾಸಿನ ನಾಯಕನಷ್ಟೇ: ಸತೀಶ್ ಜಾರಕಿಹೊಳಿ

  ಚಾಮರಾಜನಗರ: ನಟ ಕಿಚ್ಚ ಸುದೀಪ್ ಮೂರು ತಾಸಿನ ನಾಯಕ. ಅವರನ್ನು ದುಡ್ಡು ಕೊಟ್ಟು ಟಿಕೆಟ್ ಖರೀದಿಸಿ ನೋಡಬೇಕಿತ್ತು. ಅವರು ಅಳುವುದಕ್ಕೆ, ನಗುವುದಕ್ಕೆ ದುಡ್ಡು ತೆಗೆದುಕೊಳ್ಳುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

  ಇದನ್ನೂ ಓದಿ: VIDEO| ಕುಸ್ತಿಪಟುಗಳನ್ನು ಭೇಟಿ ಮಾಡಲು ಮುಂದಾದ ರೈತರು; ಜಂತರ್​ ಮಂತರ್​ನಲ್ಲಿ ಹೈಡ್ರಾಮಾ

  ಅವರೊಬ್ಬ ಮೂರು ತಾಸಿನ ನಾಯಕ

  ಗುಂಡ್ಲುಪೇಟೆಯಲ್ಲಿ ಸತೀಶ್ ಜಾರಕಿಹೊಳಿ ಮಾತನಾಡುತ್ತಾ, ಸುದೀಪ್ ಅವರನ್ನು ಜನರು ಇಂದು ಪುಕ್ಕಟ್ಟೆಯಾಗಿ ನೋಡಿದ್ದಾರೆ. ಅವರೊಬ್ಬ ಮೂರು ತಾಸಿನ ನಾಯಕರಷ್ಟೇ. ಆದರೆ ನಾವು ನಿರಂತರವಾಗಿ ನಿಮ್ಮ ಸೇವೆ ಮಾಡುತ್ತೇವೆ, ನಿಮ್ಮ ಜತೆಯಲ್ಲಿರುತ್ತೇವೆ. ಸುಮ್ಮನೆ ನಟರು ಬಂದು ಕಣ್ಣೀರು ಹಾಕಿ ಹೋದರೆ ಯಾವುದೇ ಸಮಸ್ಯೆ ಪರಿಹಾರ ಕಾಣುವುದಿಲ್ಲ ಎಂದು ಹೇಳಿದರು.

  ಸಿದ್ದರಾಮಯ್ಯನವರ ಜನಪ್ರಿಯ ಕಾರ್ಯಕ್ರಮ ಮತ್ತೆ ಜಾರಿಯಾಗಬೇಕು

  ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸತೀಶ್ ಜಾರಕಿಹೊಳಿ, ರಾಜ್ಯದಲ್ಲಿ ಭ್ರಷ್ಟಾಚಾರ ಬಿಜೆಪಿಯ ಪ್ರಮುಖ ಅಂಶವಾಗಿದೆ. ಸಿದ್ದರಾಮಯ್ಯನವರ ಜನಪ್ರಿಯ ಕಾರ್ಯಕ್ರಮಗಳು ಮತ್ತೆ ಜಾರಿಯಾಗಬೇಕು. ಚಾಮರಾಜನಗರ, ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಕ್ಷೇತ್ರ ಗೆಲ್ಲಬೇಕು. ವರುಣಾದಲ್ಲೂ ಸಾಕಷ್ಟು ಜವಬ್ದಾರಿ ಮತದಾರರ ಮೇಲಿದೆ. ಇವತ್ತು ಮೋದಿ ಕೂಡ ಸಿದ್ದರಾಮಯ್ಯ ಅವರನ್ನು ಕಂಡರೆ ಭಯ ಪಡುವ ವ್ಯವಸ್ಥೆ ಇದೆ. ಇದು ಸಿದ್ದರಾಮಯ್ಯ ಅವರ ಕೊನೆಯ ಚುನಾವಣೆಯಾಗಿದ್ದು, ಹೆಚ್ಚು ಅಂತರಿಂದ ಗೆಲ್ಲಿಸಬೇಕು ಎಂದು ಹೇಳಿದರು.

  ಇದನ್ನೂ ಓದಿ: IPL 2023 | ದಾಖಲೆ ಬರೆದ ಸ್ಟಾರ್ ಸ್ಪೋರ್ಟ್ಸ್; ಅತಿ ಹೆಚ್ಚು ವೀಕ್ಷಣೆ ಪಡೆದ ಟಾಪ್-10 ಪಂದ್ಯಗಳ ಪಟ್ಟಿ ಇಂತಿದೆ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts