More

  ಮತ ಚಲಾಯಿಸಿದ ಶಿವರಾಜ್ ಕುಮಾರ್ ದಂಪತಿ; ದೊಡ್ಮನೆ ದಂಪತಿಯಿಂದ ಯುವಕರಿಗೆ ಸಂದೇಶ

  ಬೆಂಗಳೂರು: ಶಿವರಾಜ್ ಕುಮಾರ್ ದಂಪತಿ, ರಾಚೇನಹಳ್ಳಿ 348 ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ.

  ಬ್ಯಾಟರಾಯನಪುರ ಕ್ಷೇತ್ರದಲ್ಲಿರುವ ರಾಚೇನಹಳ್ಳಿ ಕನ್ನಡ ಕಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ಪತ್ನಿ ಗೀತಾ ಹಾಗೂ ಮಗಳ ಜತೆ ಆಗಮಿಸಿ ಮತದಾನ ಮಾಡಿದ್ದಾರೆ.

  ಇದನ್ನೂ ಓದಿ: ಶಿವರಾಜ್​ಕುಮಾರ್​​ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಪ್ರಶಾಂತ್ ಸಂಬರಗಿ; ಅಭಿಮಾನಿಗಳು ಗರಂ

  ರಾಚೇನಹಳ್ಳಿಯ ವಿದ್ಯಾ ಸಂಚಯನಿ ಶಾಲೆಗೆ ಆಗಮಿಸಿದ ಹ್ಯಾಟ್ರಿಕ್ ಹೀರೋ ಶಿವಣ್ಣ, ಮತದಾನ ಕರ್ತವ್ಯ ಪೂರೈಸಿದ ನಂತರ ಜನತೆಗೆ ಮತದಾನದ ಮಹತ್ವವನ್ನು ಹೇಳಿದ್ದಾರೆ. “ಯುತ್ಸ್ ಎಲ್ಲಾ ಬಂದು ಮತದಾನ ಮಾಡಿ. ಒಂದು ವೋಟ್​ನಿಂದ ಒಳ್ಳೆ ವ್ಯಕ್ತಿಯನ್ನ ಆಯ್ಕೆ ಮಾಡಲು ಸಾಧ್ಯ. ನಾವಿಬ್ಬರೂ ವೋಟ್ ಮಾಡಿದ್ದೇವೆ. ದಯವಿಟ್ಟು ಎಲ್ಲರೂ ವೋಟ್ ಮಾಡಿ ಕರ್ತವ್ಯ ನಿರ್ವಹಿಸಿ.

  ಇದನ್ನೂ ಓದಿ: ಕನ್ನಡದ ನಟಿಯೊಬ್ಬಳು ಮಂಚಕ್ಕೆ ಕರೆದಿರೋ ಆರೋಪಕ್ಕೆ ನಟ ಶಿವರಾಜ್​ಕುಮಾರ್​ ಪ್ರತಿಕ್ರಿಯೆ ಹೀಗಿದೆ…

  ಹೆಚ್ಚಿನ ಸಂಖ್ಯೆಯಲ್ಲಿ ವೋಟ್ ಮಾಡಿದರೆ ಒಳ್ಳೆಯ ಅಭ್ಯರ್ಥಿ ಆಯ್ಕೆಯಾಗ್ತಾರೆ. ಯುವಕರು ಈ ದಿನವನ್ನು ವ್ಯರ್ಥ ಮಾಡದೇ ನಿಮ್ಮ ಮತವನ್ನು ಬಳಸದೇ ಇರಬೇಡಿ” ಎಂದು ಶಿವಣ್ಣ ಕರೆ ನೀಡಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts