More

  ಕೂಡ್ಲಿಗಿಗೆ ಕಿಚ್ ಸುದೀಪ್ ಆಗಮನ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ

  ಕೂಡ್ಲಿಗಿ: ಕನ್ನಡ ಚಿತ್ರರಂಗದ ನಾಯಕ ನಟ, ಯುವಕರ ಕಣ್ಮಣಿ ಹಾಗೂ ಬಿಜೆಪಿ ಸ್ಟಾರ್ ಪ್ರಚಾರಕ ಕಿಚ್ಚ ಸುದೀಪ್ ಏ.27ರ ಬೆಳಗ್ಗೆ ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಕೆ. ಚನ್ನಪ್ಪ ತಿಳಿಸಿದ್ದಾರೆ.

  ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕೇಶ್ ವಿ. ನಾಯಕ ಪರ ಮತಯಾಚನೆ ಹಾಗೂ ಚುನಾವಣಾ ಪ್ರಚಾರಕ್ಕೆ ಆಗಮಿಸಲಿರುವ ಸುದೀಪ್, ಹೆಲಿಕಾಪ್ಟರ್ ಮೂಲಕ ಕೊಟ್ಟೂರು ಹೊರವಲಯದ ಹೆಲಿಪ್ಯಾಡ್‌ಗೆ ಬಂದಿಳಿದು ಅದಲ್ಲಿಂದ ಕಾರಿನಲ್ಲಿ ಕೂಡ್ಲಿಗಿಗೆ ಆಗಮಿಸುವರು.

  ಇದನ್ನೂ ಓದಿ: ರಮ್ಯಾ ಮೂಲಕ ಕಿಚ್ಚ ಸುದೀಪ್​ಗೆ ಗಾಳ ಹಾಕಿದ ಕಾಂಗ್ರೆಸ್​!​

  ಮೊದಲಿಗೆ ರಾಷ್ಟ್ರೀಯ ಹೆದ್ದಾರಿ 50 ಮೂಲಕ ಹೊಸಪೇಟೆ ರಸ್ತೆಯ ರಾಮಲಿಂಗೇಶ್ವರ ದೇವಸ್ಥಾನದ ವರೆಗೆ ರೋಡ್ ಶೋ ನಡೆಸುವರು. ಆಂಜನೇಯ ದೇವಸ್ಥಾನದಿಂದ ಹಳೆ ಸಂತೆ ಮಾರುಕಟ್ಟೆ ಮೂಲಕ ತೆರದ ವಾಹನದಲ್ಲಿ ಮತಯಾಚನೆ ಮಾಡುತ್ತ, ಕೊಟ್ಟೂರು ರಸ್ತೆ ಮೂಲಕ ಮದಕರಿ ವೃತ್ತಕ್ಕೆ ಆಗಮಿಸಿ ಬಿಜೆಪಿ ಅಭ್ಯರ್ಥಿ ಲೋಕೇಶ್ ವಿ. ನಾಯಕ ಪರ ಭಾಷಣ ಮಾಡುವರು.

  ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಕ್ಷೇತ್ರದ ಬಿಜೆಪಿ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts