More

  ದೇವರ ಪ್ರಸಾದ ಸೇವಿಸಿ 25 ಜನ ಅಸ್ವಸ್ಥ

  ಎ.ಡಿ.ಗುಡ್ಡ ಗೊಲ್ಲರಹಟ್ಟಿಯಲ್ಲಿ ಬೀಡು ಬಿಟ್ಟ ವೈದ್ಯರ ತಂಡ

  ಕೂಡ್ಲಿಗಿ : ಪಪಂ ವ್ಯಾಪ್ತಿಯ 19ನೇ ವಾರ್ಡ್‌ನ ಎ.ಡಿ.ಗುಡ್ಡ ಗೊಲ್ಲರಹಟ್ಟಿಯಲ್ಲಿ ಬುಧವಾರ ದೇವರ ಪ್ರಸಾದ ಸೇವಿಸಿ 25 ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ.

  ಹಟ್ಟಿಯಲ್ಲಿ 22 ಜನರಿಗೆ ವಾಂತಿ-ಭೇದಿಯಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರ ಮತ್ತೆ ಮೂರು ಪ್ರಕರಣ ಪತ್ತೆಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಮೂವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಉಳಿದವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಟಿಎಚ್‌ಒ ಡಾ.ಎಸ್.ಪಿ.ಪ್ರದೀಪ್ ಕುಮಾರ್ ತಿಳಿಸಿದರು.

  ಯುಗಾದಿ ಹಬ್ಬದ ದಿನ ಸಂಪ್ರದಾಯದಂತೆ ದೇವಸ್ಥಾನದಲ್ಲಿ ನೈವೇದ್ಯ ಮಾಡಿ ಮನೆಗಳಿಗೆ ಪ್ರಸಾದ ಹಂಚಿದ್ದು, ಪ್ರಸಾದ ತಿಂದ ಬಹುತೇಕರಲ್ಲಿ ವಾಂತಿ-ಭೇದಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ. ಈಗಾಗಲೇ ತಾತ್ಕಾಲಿಕವಾಗಿ ವೈದ್ಯರ ತಂಡ ಹಟ್ಟಿಯಲ್ಲಿ ಬೀಡು ಬಿಟ್ಟಿದ್ದು, ಹಟ್ಟಿಯ ಎಲ್ಲ ಮನೆಗಳಿಗೂ ಆರೋಗ್ಯ ನಿರೀಕ್ಷಕರು ಭೇಟಿ ನೀಡಿ ಜನರ ತಪಾಸಣೆ ಮಾಡಿ, ಮಾತ್ರೆಗಳನ್ನು ನೀಡುತ್ತಿದ್ದಾರೆ. ಡಿಎಚ್‌ಒ ಶಂಕರ್ ನಾಯ್ಕ ಗುರುವಾರ ಬೆಳಗ್ಗೆ ಹಟ್ಟಿಗೆ ಭೇಟಿ ನೀಡಿ ಪರಿಶೀಲಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts