ರಮ್ಯಾ ಮೂಲಕ ಕಿಚ್ಚ ಸುದೀಪ್​ಗೆ ಗಾಳ ಹಾಕಿದ ಕಾಂಗ್ರೆಸ್​!​

ramya sudeep
Published on

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲ ಪಕ್ಷಗಳೂ ಶತಾಯಗತಾಯ ಗೆಲ್ಲಲೇ ಬೇಕೆಂದು ಜಿದ್ದಾಜಿದ್ದಿಗೆ ಬಿದ್ದಂತೆ ಕಸರತ್ತು ನಡೆಸುತ್ತಿವೆ. ಮತಯಾಚನೆ, ಪ್ರಚಾರ ಬಿರುಸುಗೊಂಡಿದ್ದು, ಪಕ್ಷಾಂತರ ಪರ್ವ ಶುರುವೂ ಶುರುವಾಗಿದೆ. ಪ್ರಚಾರಕ್ಕೆ ಚಿತ್ರನಟನ್ನೂ ಕರೆಸಿಕೊಳ್ಳಲು ತೆರೆ-ಮರೆಯಲ್ಲಿ ಈಗಾಗಲೇ ಕಸರತ್ತು ಶುರುವಾಗಿದೆ. ಪ್ರಭಾವಿ ನಟರನ್ನ ರಾಜಕೀಯಕ್ಕೆ ಕರೆತರುವ ಯತ್ನವೂ ನಡೆಯುತ್ತಲೇ ಇದೆ.

ಇದೀಗ ಕಿಚ್ಚ ಸುದೀಪ್​ರನ್ನ ರಾಜಕೀಯಕ್ಕೆ ಕಾಂಗ್ರೆಸ್​ ಆಹ್ವಾನಿಸುತ್ತಿದೆ. ಆ ಮೂಲಕ ಬಿಜೆಪಿಗೆ ಬಿಗ್​ ಶಾಕ್​ ಕೊಡಲು ಕಾಂಗ್ರೆಸ್​ ಮುಂದಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮೋಹಕ ತಾರೆ, ಮಾಜಿ ಸಂಸದೆ ರಮ್ಯಾ ಮೂಲಕ ಸುದೀಪ್​ರನ್ನು ಸೆಳೆಯೋಕೆ ಕಾಂಗ್ರೆಸ್​ ಪ್ರಯತ್ನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಐಕ್ಯತಾ ಸಮಾವೇಶದ ಬೆನ್ನಲ್ಲೇ ಎಸ್​ಟಿ ಮತಗಳನ್ನು ಹೇಗೆ ಸೆಳೆಯೋದು ಎಂದು ಕಾಂಗ್ರೆಸ್​ ಯೋಜನೆ ರೂಪಿಸಿದೆ. ಕಿಚ್ಚ ಸುದೀಪ್​ ಮೂಲಕ ಎಸ್​ಟಿ ಮತಗಳನ್ನ ಸೆಳೆಯುವ ತಂತ್ರ ಹೆಣೆದಿದೆ. ಅದಕ್ಕಾಗಿ ಮೋಹಕ ತಾರೆ ರಮ್ಯ ಅವರನ್ನ ಮುಂದಿಟ್ಟುಕೊಂಡು ಮಾತುಕತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದೀಗ ರಾಜ್ಯ ರಾಜಕೀಯಕ್ಕೆ ಸುದೀಪ್​ ಬರ್ತಾರಾ? ಎಂಬ ಪ್ರಶ್ನೆಯನ್ನು ಜನರಲ್ಲಿ ಮೂಡಿದೆ. ಆದರೆ ಸುದೀಪ್​ ಅವರು ರಾಜಕೀಯಕ್ಕೆ ಬರುವ ಸಾಧ್ಯತೆ ತೀರಾ ಕಡಿಮೆ. ಆದರೂ ಸುದೀಪ್​ ಅವರ ನಡೆ ಏನು ಎಂಬುದು ಕುತೂಹಲ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net